newsfirstkannada.com

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಅವಹೇಳನಕಾರಿ ವಿಡಿಯೋ ಹರಿಬಿಟ್ಟ ಪ್ರಕರಣ; ಆರೋಪಿ ಅರೆಸ್ಟ್

Share :

Published January 17, 2024 at 10:24am

Update January 17, 2024 at 10:25am

    ವಿಡಿಯೋ ಹರಿಬಿಟ್ಟ ಉತ್ತರ ಕನ್ನಡ ಮೂಲದ ವ್ಯಕ್ತಿ

    ಅಶ್ಲೀಲ ಪದ ಬಳಸಿ ವಿಡಿಯೋ ಹರಿಬಿಟ್ಟ ಕ್ಯಾಬ್ ಡ್ರೈವರ್​

    ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್​ ಆದಂತೆ ಅರೆಸ್ಟ್​

ಮಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ವಿರುದ್ದ ಅವಹೇಳನಕಾರಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಸುರತ್ಕಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಲಾಗಿದೆ.

ಬಂಧಿತನನ್ನು ಉತ್ತರ ಕನ್ನಡ ಮೂಲದ ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಈತ 12 ವರ್ಷದಿಂದ ಸುರತ್ಕಲ್​ನಲ್ಲಿ ವಾಸವಾಗಿದ್ದು, ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು.

ಮಂಗಳೂರಿನ ಯುವಕ ಅನಿಲ್​ ಸಾಮಾಜಿಕ ತಾಣಗಳಲ್ಲಿ ನಿಂದಿಸಿ ವಿಡಿಯೋ ಹರಿಬಿಟ್ಟಿದ್ದ. ಕೆಟ್ಟ ಪದಗಳಲ್ಲಿ ನಿಂದಿಸಿ ವಿಡಿಯೋ ಮಾಡಿದ್ದ. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಅಶ್ಲೀಲ ಪದ ಬಳಸಿದ್ದ. ಈ ಬಗ್ಗೆ ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವಾ ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದರು. ದೂರಿನ ಅನ್ವಯ ಅನಿಲ್​ನನ್ನ ಬಂಧಿಸಲಾಗಿದೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ CR.6/24, U/S 153A, 505(I)(C) IPC ಸಕ್ಷನ್ 504 ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ವಿಡಿಯೋ ಮಾಡಿರುವ ಕಾರಣ?

ರೇಶನ್ ಕಾರ್ಡ್ ಇಲ್ಲೆದೇ ಅನಿಲ್​ ಮೂರು ತಿಂಗಳಿಂದ ಪರದಾಡಿದ್ದರು. ಆದರಿಂದ ನೊಂಉ ವಿಡಿಯೋ ಮಾಡಿ ಬಿಟ್ಟಿದ್ದಾಗಿ ತನಿಖೆಯಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಅವಹೇಳನಕಾರಿ ವಿಡಿಯೋ ಹರಿಬಿಟ್ಟ ಪ್ರಕರಣ; ಆರೋಪಿ ಅರೆಸ್ಟ್

https://newsfirstlive.com/wp-content/uploads/2024/01/Anil-Kumar.jpg

Load More