/newsfirstlive-kannada/media/post_attachments/wp-content/uploads/2025/03/Siddaramaiah-DK-Shivakumar.jpg)
ಸಚಿವ ರಾಜಣ್ಣ ಮೇಲಿನ ಹನಿಟ್ರ್ಯಾಪ್ ಆರೋಪ ದೆಹಲಿ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಸತೀಶ್​ ಜಾರಕಿಹೊಳಿ ಸೈಲೆಂಟ್​ ಹಾಗೇ ದೆಹಲಿ ತೆರಳಿ ಹೈಕಮಾಂಡ್​ ನಾಯಕರನ್ನು ಭೇಟಿಯಾಗಿ ದಾಳ ಉರುಳಿಸಿ ಬಂದಿದ್ದಾರೆ. ಇದೀಗ ಸಿಎಂ, ಡಿಸಿಎಂ ದೆಹಲಿಗೆ ಯಾತ್ರೆಗೆ ಸಜ್ಜಾಗಿದ್ದು, ಕತೂಹಲ ಮೂಡಿಸಿದೆ.
ಕುತೂಹಲ ಮೂಡಿಸಿದ ಉಭಯ ನಾಯಕರ ಚರ್ಚೆ
ಏಪ್ರಿಲ್ 2ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆ ಉಭಯ ನಾಯಕರು ಸಿಎಂ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಬಾರಿ ದೆಹಲಿ ಪ್ರವಾಸದ ವೇಳೆ ರಾಜ್ಯದಲ್ಲಿ ಖಾಲಿ ಇರುವ ವಿಧಾನ ಪರಿಷತ್ ಸ್ಥಾನದ ಭರ್ತಿ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಜೊತೆಗೆ ರಾಜಣ್ಣ ಹನಿಟ್ರ್ಯಾಪ್ ಹಾಗೂ ರಾಜೇಂದ್ರ ಸುಪಾರಿ ಆರೋಪದ ಗೃಹಸಚಿವರ ಜೊತೆಗೂ ಉಭಯ ನಾಯಕರು ಚರ್ಚೆ ನಡೆಸಿ, ಅಪ್​ಡೇಟ್​ ಪಡೆದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಸಾಹುಕಾರ್ ದೆಹಲಿ ಪ್ರವಾಸದ ಗುಟ್ಟು ರಟ್ಟು.. ಹೈಕಮಾಂಡ್​ ಮುಂದೆ ಇಟ್ಟ ಬೇಡಿಕೆಗಳು ಏನೇನು?
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಜಾರಕಿಹೊಳಿ ಕಣ್ಣು
ಮೂರು ದಿನಗಳ ಕಾಲ ದೆಹಲಿಯಲ್ಲಿ ಡೇರೆ ಹಾಕಿ.. ಹರಸಾಹಸ ಪಟ್ಟು ಹೈಕಮಾಂಡ್​ ನಾಯರನ್ನು ಭೇಟಿಯಾಗಿದ್ದ ಸಾಹುಕಾರ್​, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಒತ್ತಡ ಹಾಕಿದ್ದರು ಎಂಬ ಮಾತು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಹಸವಾಗಿದೆ. ಇದೇ ವಿಚಾರವಾಗಿ ರಿಯಾಕ್ಟ್​ ಮಾಡಿರುವ ಸತೀಶ್​ ಜಾರಕಿಹೊಳಿ, ಹೈಕಮಾಂಡ್​ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದೇವೆ. ಅವರೇ ನಿರ್ಧಾರ ಮಾಡ್ತಾರಾ ಕಾದು ನೋಡೋಣ ಎಂದಿದ್ದಾರೆ.
ಒಟ್ಟಾರೆ.. ರಾಷ್ಟ್ರ ಮಟ್ಟದಲ್ಲಿ ಹನಿಟ್ರ್ಯಾಪ್, ಅಧಿಕಾರ ಹಂಚಿಕೆ ಚರ್ಚೆ ಜೋರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನು ಉಂಟುಮಾಡಿದೆ. ಇದಕ್ಕೆ ಹೈಕಮಾಂಡ್ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ನಟಿ ರನ್ಯಾ ರಾವ್ ಗೋಲ್ಡ್ ಕೇಸ್‌ಗೆ ಹೊಸ ಟ್ವಿಸ್ಟ್.. ಸರ್ಕಾರಕ್ಕೆ 230 ಪುಟಗಳ ತನಿಖಾ ವರದಿ ಸಲ್ಲಿಕೆ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್