/newsfirstlive-kannada/media/post_attachments/wp-content/uploads/2024/08/SIDDARAMAIAH.jpg)
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು, ದಸರೆ ಸಂಭ್ರಮದಲ್ಲಿ ಮಿಂದೆಳ್ತಿದೆ. ಅರಮನೆ ನಗರ ವಿದ್ಯುದ್ವೀಪಗಳ ಅಲಂಕಾರದಲ್ಲಿ ಝಗಮಗಿಸ್ತಿದೆ. ಆದ್ರೆ ನಾಡದೊರೆ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಮುಡಾ ನೆಮ್ಮದಿ ಕದ್ದಿದೆ. ಮೈಸೂರು ಮುಡಾ ಸೈಟ್ ಸಂಬಂಧ ಸಿಎಂ ವಿರುದ್ಧ ಎಫ್ಐಆರ್ ದಾಖಲಾದ ಬಳಿಕ ಸರಣಿ ವಿಚಾರಣೆ ನಡೆದಿದೆ.
ಸಿದ್ದರಾಮಯ್ಯ ಬಾಮೈದನ ವಿಚಾರಣೆ ಅಂತ್ಯ
ನಿನ್ನೆ ಬೆಳಗ್ಗೆ ಆರಂಭವಾದ ಮುಡಾ ವಿಚಾರಣೆ ರಾತ್ರಿವರೆಗೆ ನಡೆದಿದೆ. A3 ಆರೋಪಿ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು A4 ಆರೋಪಿ ದೇವರಾಜು ಸುಮಾರು 9 ಗಂಟೆ ವಿಚಾರಣೆ ನಡೆದಿದೆ. ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದ್ಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗೆ ಮತ್ತೆ ಕರೆಯುವ ಸಾಧ್ಯತೆಯೂ ಇದೆ.
ಇದನ್ನೂ ಓದಿ:ಮತ್ತೊಂದು ತಿರುವಿಗೆ ಬಂದು ನಿಂತ ಮುಡಾ ಕೇಸ್; ಆರ್ ಅಶೋಕ್ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್
ಬೆಳಗ್ಗೆ 11:30ಕ್ಕೆ ಶುರುವಾದ ವಿಚಾರಣೆ ರಾತ್ರಿವರೆಗೆ ನಡೆದಿದೆ. ಲೋಕಾಯುಕ್ತ ಕಚೇರಿಯಿಂದ ತೆರಳುವಾಗ ಮಾಧ್ಯಮಗಳ ಪ್ರಶ್ನೆಗಳಿಗೆ ಸಿಎಂ ಬಾಮೈದ ಪ್ರತಿಕ್ರಿಯಿಸಲಿಲ್ಲ. ತುಟಿಕ್ ಪಿಟಿಕ್ ಎನ್ನದ ವಿಚಾರಣೆ ಮುಗಿಸಿ ಹೊರಟರು. A4 ಆರೋಪಿ ದೇವರಾಜು ವಿಚಾರಣೆ ನಡೆದಿದೆ, ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇವೆ ಎಂದ್ರು. ನನಗೆ 80 ವರ್ಷ ವಯಸ್ಸು.. ಯಾಕೆ ತೊಂದ್ರೆ ಕೊಡ್ತೀರಿ ಅಂತ ಕೇಳಿದ್ರು.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಸಿಎಂ ಸ್ವಲ್ಪ ಗರಂ ಆದಂತೆ ಕಾಣಿಸಿದ್ರು. ಮುಡಾ, ಸಚಿವರ ಸಭೆಗಳು, ಪದೇ ಪದೆ ಸಿಎಂ ಸ್ಥಾನದ ಬಗ್ಗೆ ಮಾತುಗಳಿಂದ ಸಿದ್ದರಾಮಯ್ಯ ಕೆರಳಿದ್ದಾರೆ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ.. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಅಂತ ಸಂಪುಟ ಸಭೆಯಲ್ಲಿ ಕಡ್ಡಿ ಮುರಿದಂತೆ ಹೇಳಿದ್ದಾರೆ ಅಂತ ಗೊತ್ತಾಗಿದೆ. ನಾನು ರಾಜೀನಾಮೆ ನೀಡುವ ಯಾವುದೇ ಯೋಚನೆ ಮಾಡಿಲ್ಲ. ಇಲ್ಲಸಲ್ಲದ ಸುದ್ದಿಗಳನ್ನ ಹಬ್ಬಿಸಲಾಗ್ತಿದೆ ಅಂತ ಕಿಡಿಕಾರಿದ್ದಾರೆ. ಈ ವೇಳೆ ನೀವು ರಾಜೀನಾಮೆಯ ಮಾತನ್ನಾಡಬೇಡಿ ಎಂದ ಸಚಿವರು, ನಾವು ನಿಮ್ಮ ಜೊತೆ ಇದ್ದೀವಿ ಅಂತ ಅಭಯ ನೀಡಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಾರೆ ಮುಡಾ ಕೇಸ್ನ ವಿಚಾರಣೆ ನಡೆಯುತ್ತಿದೆ. ದಸರೆ ಕಾರಣಕ್ಕೆ ಲೋಕಾಯುಕ್ತ ಮತ್ತೆ 3 ದಿನ ಬಳಿಕ ಎನ್ಕ್ವೈರಿ ಮುಂದುವರೆಯಲಿದೆ ಅಂತ ಗೊತ್ತಾಗಿದೆ. ಎ-3 ಮತ್ತು ಎ-4 ಆರೋಪಿಗಳನ್ನ ಮತ್ತೊಮ್ಮೆ ಸಮನ್ಸ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಸಿಹಿ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ.. ದಸರಾ ಮುಗಿದ ಬಳಿಕ 110 ಹಳ್ಳಿಗಳಿಗೆ ಹರಿಯಲಿದ್ದಾಳೆ ಕಾವೇರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ