ಗವರ್ನರ್‌ಗೆ ಸಿಎಂ ಠಕ್ಕರ್‌; ಕುಲಪತಿಗಳ ನೇಮಕ ಮಾಡುವ ಅಧಿಕಾರವನ್ನೇ ಕಸಿದುಕೊಂಡ ಸಿದ್ದರಾಮಯ್ಯ..!

author-image
Ganesh
Updated On
ನಾಳೆಯೇ FIR ಭವಿಷ್ಯ.. ದಿಢೀರ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ; ಕಾರಣವೇನು?
Advertisment
  • ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ
  • ರಾಜ್ಯಪಾಲರ ನಡೆ ವಿರುದ್ಧ ಸಿದ್ದರಾಮಯ್ಯ ಸಂಪುಟದ ಆಕ್ರೋಶ
  • ಪದೇ ಪದೆ ಸಿಎಸ್‌ಗೆ ಪತ್ರ ಬರೆಯುತ್ತಿರೋದಕ್ಕೆ ಕ್ಯಾಬಿನೆಟ್ ಬೇಸರ

ಮುಡಾ ಅಕ್ರಮದ ಭೂತ ಸರ್ಕಾರದ ಬೆನ್ನೇರಿ ಕುಣಿದು ಕುಪ್ಪಳಿಸುತ್ತಿದೆ. ಇದ್ರಿಂದ ಹೊರ ಬರಲು ಸಿಎಂ ಸೇರಿ ಇಡೀ ಸಂಪುಟವೇ ಒದ್ದಾಡುತ್ತಿದೆ. ಪ್ರಾಸಿಕ್ಯೂಶನ್ ಕಂಟಕದಿಂದ ಪಾರಾಗಲು ಹವಣಿಸುತ್ತಿದೆ. ಈ ನಿಟ್ಟಿನಲ್ಲಿ ಗವರ್ನರ್ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಆಕ್ರೋಶ ಹೊರ ಹಾಕುತ್ತಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೆ ತಿರುಮಂತ್ರ ಹಾಕುವ ಬಗ್ಗೆ ಚರ್ಚೆಯಾಗಿದೆ.

ಸಂಪುಟ ಸಭೆಯಲ್ಲಿ ರಾಜ್ಯಪಾಲರ ಧೋರಣೆ ಬಗ್ಗೆ ಆಕ್ರೋಶ!
ಹೈದ್ರಾಬಾದ್ ವಿಮೋಚನಾ ದಿನದ ಅಂಗವಾಗಿ ಕಲ್ಯಾಣಕರ್ನಾಟಕದಲ್ಲಿ ಸಚಿವ ಸಂಪುಟ ಸಭೆ ನಡೀತು. 10 ವರ್ಷಗಳ ಬಳಿಕ ಐತಿಹಾಸಿಕ ಸಂಪುಟ ಸಭೆ ನಡೆಯಿತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯ ಮಿನಿ ವಿಧಾನಸೌಧದಲ್ಲಿ ಮೀಟಿಂಗ್ ನಡೆಸಿದ್ರು. ಈ ಸಭೆಯಲ್ಲಿ ಮುಡಾ ಅಕ್ರಮವನ್ನ ಪ್ರಾಸಿಕ್ಯೂಷನ್‌ಗೆ ನೀಡಿರೋದನ್ನ ಸಿದ್ದರಾಮಯ್ಯ ಸಂಪುಟ ಖಂಡಿಸಿದೆ. ಥಾವರ್ ಚಂದ್ ಗೆಹಲೋಟ್‌ ಅವರ ನಡೆಯನ್ನ ತೀವ್ರವಾಗಿ ವಿರೋಧಿಸಿದೆ.

ಇದನ್ನೂ ಓದಿ:ಲೆಬನಾನ್​​ನಲ್ಲಿ ಪೇಜರ್​​ಗಳ ಸರಣಿ​ ಅನಾಹುತ; 9 ಸಾವು 2800 ಮಂದಿಗೆ ಗಾಯ.. ಪೇಜರ್ ಅಂದ್ರೆ ಏನು..?

ಗವರ್ನರ್ ವಿರುದ್ಧ ಕಿಡಿ!

  • ಸಂಪುಟ ಸಭೆಯಲ್ಲಿ ರಾಜ್ಯಪಾಲರ ಧೋರಣೆ ಬಗ್ಗೆ ಆಕ್ರೋಶ
  • ಸಿಎಂ ಸೇರಿದಂತೆ ಸಂಪುಟ ಸಹೋದ್ಯೋಗಿಗಳ ಅಸಮಾಧಾನ
  • ರಾಜ್ಯಪಾಲ ಗೆಹಲೋಟ್‌ರ ಇತ್ತೀಚಿನ ನಡೆ ಸರಿಯಾದುದಲ್ಲ
  • ಅನಗತ್ಯವಾಗಿ ಸರ್ಕಾರದ ಬಗ್ಗೆೆ ಪತ್ರ ಬರೆದು ವಿವರಣೆ ಕೇಳುತ್ತಾರೆ
  • ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವಿವರಣೆ‌ ಕೇಳಿ ಬರೆದಿದ್ದಾರೆ
  • ರಾಜ್ಯಪಾಲರ ಈ ನಡೆ ಸರಿಯಾದುದಲ್ಲ ಅಂತ ಸಚಿವರ ಬೇಸರ
  • ಸರ್ಕಾರದ ವಿರುದ್ಧ ಗೊಂದಲ ಸೃಷ್ಟಿಯಾಗುವಂತೆ ಮಾಡುತ್ತಿದ್ದಾರೆ
  • ಬಿಜೆಪಿ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಅಂತ ಅಸಮಾಧಾನ

ಗವರ್ನರ್‌ಗೆ ಠಕ್ಕರ್‌!
ಕೇವಲ ಅಕ್ರೋಶವಷ್ಟೇ ಅಲ್ಲ.. ಮಹತ್ವದ ನಿರ್ಣಯವನ್ನ ಕೈಗೊಂಡಿರೋ ಸಿದ್ದರಾಮಯ್ಯ ಸಂಪುಟ, ಗವರ್ನರ್‌ಗೆ ಠಕ್ಕರ್ ಕೊಟ್ಟಿದೆ. ಕುಲಪತಿ ನೇಮಕದ ನಿರ್ಧಾರವನ್ನ ರಾಜ್ಯ ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಗದಗದಲ್ಲಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ವಿಶ್ವವಿದ್ಯಾಲಯದ ಕುಲಪತಿ ನೇಮಕವನ್ನ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಮೂಲಕ ರಾಜ್ಯಪಾಲರ ಅಧಿಕಾರವನ್ನೇ ಸಿದ್ದು ಸಂಪುಟ ಕಸಿದುಕೊಂಡಿದೆ. ಅಲ್ಲದೇ ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ಠಕ್ಕರ್ ಕೊಟ್ಟಿದ್ದಾರೆ.

ಮುಡಾ ಅಕ್ರಮದ ತೂಗುಗತ್ತಿಯಿಂದ ಪಾರಾಗಲು ಸಿಎಂ ಕಾನೂನು ಹೋರಾಟ ಮಾಡ್ತಿದ್ದಾರೆ. ಜೊತೆಗೆ ರಾಜಕೀಯ ಹೋರಾಟಕ್ಕೂ ಇಳಿದಿದ್ದಾರೆ. ಸರ್ಕಾರದ ಈ ನಡೆಗೆ ಗವರ್ನರ್ ಹೇಗೆ ಉತ್ತರ ಕೊಡ್ತಾರೋ? ನೋಡ್ಬೇಕು.

ಇದನ್ನೂ ಓದಿ:ಮುನಿರತ್ನ ಅರೆಸ್ಟ್ ಬೆನ್ನಲ್ಲೇ ಕೈ ಹೈಕಮಾಂಡ್​ ಅಲರ್ಟ್​; ಸಿದ್ದರಾಮಯ್ಯಗೆ ಖಡಕ್ 6 ಸೂಚನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment