/newsfirstlive-kannada/media/post_attachments/wp-content/uploads/2023/06/SIDDARAMAIAH-14-1.jpg)
ಕೊಟ್ಟ ಗ್ಯಾರಂಟಿಗಳನ್ನ ಈಡೇರಿಸೋಕೆ ಕಾಂಗ್ರೆಸ್ ಸರ್ಕಾರ ಹರಸಾಹಸ ಪಡ್ತಿದೆ. ಅನ್ನಭಾಗ್ಯಕ್ಕಾಗಿ ಅಕ್ಕಿ ಹೊಂದಿಸೋಕೆ ಪರದಾಡುತ್ತಿದೆ. ಇತ್ತ ಸರ್ಕಾರದ ವಿರುದ್ಧ ಬಿಜೆಪಿ ಗ್ಯಾರಂಟಿ ಅಸ್ತ್ರವನೇ ಬಳಸುತ್ತಿದೆ. ಈ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸೋಕೆ, ಬಿಜೆಪಿ ಬಾಯಿ ಮುಚ್ಚಿಸೋಕೆ ಇವತ್ತಿನ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ.
ಒಂದು ಕಡೆ ಕೊಟ್ಟ ಮಾತನ್ನು ಈಡೇರಿಸಿಕೊಳ್ಳಬೇಕಾದ ಅನಿರ್ವಾಯತೆ. ಇದರ ಮಧ್ಯೆ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸೋಕೆ ಸಾಲು ಸಾಲು ಸವಾಲು. ಕೇಂದ್ರ ಅಕ್ಕಿ ಕೊಡ್ತಿಲ್ಲ. ಬೇರೆ ರಾಜ್ಯಗಳಲ್ಲಿ ಅಕ್ಕಿ ಸಿಗುತ್ತಿಲ್ಲ. ಹೀಗಾರುವಾಗ ಕೊಟ್ಟ ಗ್ಯಾರಂಟಿಯನ್ನ ಜಾರಿಗೊಳಿಸಲೇಬೇಕು ಅಂತಾ ಬಿಜೆಪಿ ಪಟ್ಟು ಹಿಡಿದಿದೆ. ಪ್ರತಿಭಟನೆಯ ಎಚ್ಚರಿಕೆಯನ್ನೂ ಕೊಟ್ಟಿರೋದು ಕಾಂಗ್ರೆಸ್ ಸರ್ಕಾರಕ್ಕೆ ಟೆನ್ಶನ್ ಹೆಚ್ಚಿಸಿದೆ.
ಗ್ಯಾರಂಟಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡ ಕಾಂಗ್ರೆಸ್
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯ ಇಕ್ಕಟ್ಟಿನಲ್ಲಿ ಸಿಲಿಕೊಂಡಿದೆ. ಶತಾಯಗತಾಯ ಕೊಟ್ಟ ಭರವಸೆಗಳನ್ನ ಈಡೇರಿಸಲೇ ಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಇತ್ತ ಗ್ಯಾರಂಟಿಯನ್ನೇ ಅಸ್ತ್ರವಾಗಿ ಬಳಸುತ್ತಿರುವ ಬಿಜೆಪಿಯವರ ಬಾಯಿಯನ್ನ ಮುಚ್ಚಿಸೋದು ಕೂಡ ಕಾಂಗ್ರೆಸ್ಗೆ ಅನಿವಾರ್ಯವಾಗಿದೆ. ಆದ್ರೆ ಹೇಗೆ ಅನ್ನೋದೇ ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳಿಗೂ ಇವತ್ತು ನಡೆಯೋ ಹೈವೋಲ್ಟೇಜ್ ಕ್ಯಾಬಿನೇಟ್ ಮೀಟಿಂಗ್ನಲ್ಲಿ ಉತ್ತರ ಸಿಗಲಿದೆ.
ಸಚಿವ ಸಂಪುಟ ಸಭೆಯಲ್ಲಿ ಏನೆಲ್ಲಾ ಚರ್ಚೆ?
- ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆ
- ವಿಧಾನಸೌಧದ ಸಂಪುಟ ಸಭಾಂಗಣದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ
- ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಗಂಭೀರವಾದ ಚರ್ಚೆ
- ಅಕ್ಕಿ ಖರೀದಿ ಸಂಬಂಧ ಇವತ್ತಿನ ಸಂಪುಟ ಸಭೆಯಲ್ಲಿ ತೀರ್ಮಾನ
- ಜೊತೆಗೆ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಕುರಿತು ದಿನಾಂಕ ನಿಗದಿ ಬಗ್ಗೆ ಚರ್ಚೆ
- ಮಳೆಯ ಕೊರತೆ ಹಿನ್ನೆಲೆ ಪರಿಹಾರ ಕ್ರಮಗಳ ಬಗ್ಗೆಯೂ ಚರ್ಚೆ ಸಾಧ್ಯತೆ
- ದಶಪಥ ಕಾಮಗಾರಿ ಪರಿಶೀಲನೆಗೆ ತಾಂತ್ರಿಕ ತಂಡ ರಚಿಸೋ ಬಗ್ಗೆ ಚರ್ಚೆ
- ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಕ್ರಮಗಳ ತನಿಖೆ ಬಗ್ಗೆ ಚರ್ಚೆ
ಖುದ್ದು ಸಿಎಂ ಸಿದ್ದರಾಮಯ್ಯರೇ ಹಿಂದಿನ ಸರ್ಕಾರದ ಅವಧಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸೋದಾಗಿ ಗುಡುಗಿದ್ದಾರೆ. ಬಿಟ್ ಕಾಯಿನ್, ಪಿಎಸ್ಐ ಡೀಲ್, 40 ಪರ್ಸೆಂಟ್ ಕಮಿಷನ್, ಹೀಗೆ ಇಂಥಹ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದಿದ್ದಾರೆ. ಸಿದ್ದರಾಮಯ್ಯರ ಈ ಮಾತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರನ್ನ ಕೆರಳಿಸಿದೆ. ಏನೋ ಮಾಡುತ್ತೇವೆ ಎಂದು ಹೆದರಿಸುವುದನ್ನು ಬಿಟ್ಟು ಮೊದಲು ತನಿಖೆ ನಡೆಸಲಿ ಅಂತಾ ಕಿಡಿ ಕಾರಿದ್ದಾರೆ.
ಅದೇನೆ ಇರಲಿ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸೋದೇ ದೊಡ್ಡ ಸವಾಲಾಗಿದ್ರೆ, ಇತ್ತ ಬಿಜೆಪಿ, ಸರ್ಕಾರದ ವಿರುದ್ಧ ಗ್ಯಾರಂಟಿ ಬಾಣವನ್ನ ಹೂಡಿದೆ. ಇದೇ ಕಾರಣಕ್ಕೆ ಬಿಜೆಪಿ ಬಾಯಿ ಮುಚ್ಚಿಸೋಕೆ ಕಾಂಗ್ರೆಸ್ ತನಿಖಾಸ್ತ್ರವನ್ನು ಕೈಗೆತ್ತಿಕೊಂಡಿದೆ. ಇಂದು ನಡೆಯಲಿರುವ ಸಚಿವ ಸಂಪುಟ ಸಭೆ ಎಲ್ಲರ ಕುತೂಹಲ ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ