newsfirstkannada.com

ರಾಮಭಕ್ತರಿಗೆ ಗುಡ್​ನ್ಯೂಸ್​​ ಕೊಟ್ಟ ಸರ್ಕಾರ: ಅಯೋಧ್ಯೆಗೆ ಹೋಗೋರಿಗೆ ವಿಶೇಷ ಟ್ರೈನ್​​!

Share :

Published January 24, 2024 at 6:06am

  ರಾಮ ಭಕ್ತರ ಕನಸು ನನಸಾಗಿಸಲು ಮುಂದಾದ ಮುಜರಾಯಿ ಇಲಾಖೆ!

  ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆ ಒದಗಿಸಲು ಸರ್ಕಾರ ಸಕಲ ಸಿದ್ಧತೆ

  ಸರ್ಕಾರ ಸಹಾಯಧನವನ್ನ ಮತ್ತಷ್ಟು ಏರಿಕೆ ಮಾಡುವ ಸಾಧ್ಯತೆಯೆಲ್ಲ ಇದೆ

ದೇವಭೂಮಿ ಅಯೋಧ್ಯೆಯಲ್ಲಿ ಶತಮಾನದ ಕನಸಿನ ಭವ್ಯ ರಾಮಮಂದಿರದ ಲೋಕಾರ್ಪಣೆ ಅಚ್ಚುಕಟ್ಟಾಗಿ ನೆರವೇರಿದೆ. ಇದೇ ಹೊತ್ತಲ್ಲಿ ರಾಮನನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯ್ತಿದ್ದ ರಾಮ ಭಕ್ತರಿಗೆ ಮುಜರಾಯಿ ಇಲಾಖೆಯಿಂದ ಗುಡ್​ನ್ಯೂಸ್​ ಸಿಕ್ಕಿದೆ. ಅಯೋಧ್ಯೆ ತಲುಪಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲು ಚರ್ಚೆ ನಡೆಸಲಾಗ್ತಿದೆ.

ದೇವಭೂಮಿ ಅಯೋಧ್ಯೆಯಲ್ಲಿ ಶತಮಾನ ಕನಸಿನ ಭವ್ಯರಾಮಮಂದಿರದ ಲೋಕಾರ್ಪಣೆ ಅಚ್ಚುಕಟ್ಟಾಗಿ ನೆರವೇರಿದೆ. ಇದೇ ಹೊತ್ತಲ್ಲಿ ರಾಮನನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯ್ತಿದ್ದ ರಾಮ ಭಕ್ತರಿಗೆ ಮುಜರಾಯಿ ಇಲಾಖೆ ಗುಡ್​ನ್ಯೂಸ್ ಕೊಟ್ಟಿದೆ. ಅಯೋಧ್ಯೆ ತಲುಪಲು ವಿಶೇಷ ರೈಲುಗಳ ವ್ಯವಸ್ಥೆ ಮಾಡಲು ಚರ್ಚೆ ನಡೆಸುತ್ತಿದೆ.

ಜ.22 ಭಾರತದ ಕೋಟಿ ಕೋಟಿ ಹೃದಯಗಳ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದ ಐತಿಹಾಸಿಕ ದಿನ. ಟೆಂಟ್​ನಿಂದ ಮಂದಿರಲ್ಲಿ ಪ್ರಭು ಶ್ರೀರಾಮ ಚಂದ್ರ ವಿರಾಜಮಾನನಾದ ಸಂಭ್ರಮದ ಘಳಿಗೆ. ಇದೇ ಹೊತ್ತಲ್ಲಿ, ರಾಮಲಲ್ಲಾನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯ್ತುತಿರುವ ರಾಮಭಕ್ತರಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರ್ತಿದ್ದಾರೆ ಭಕ್ತರು

ಪುಣ್ಯಭೂಮಿ ಅಯೋಧ್ಯೆಯಲ್ಲಿ ಕನಸಿನ ಭವ್ಯ ರಾಮಮಂದಿರ ತಲೆ ಎತ್ತಿ ನಿಂತಿದೆ. ಈ ಹಿನ್ನೆಲೆಯಲ್ಲಿ ಬಾಲರಾಮನನ್ನ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದು ಬರ್ತಿದ್ದಾರೆ. ಹೀಗಾಗಿ, ಮುಜರಾಯಿ ಇಲಾಖೆ ಕಾಶಿಯಾತ್ರೆಯಂತೆ ಅಯೋಧ್ಯೆಗೆ ಹೋಗುವವರಿಗೆ ವಿಶೇಷ ಟ್ರೈನ್​ಗಳ ವ್ಯವಸ್ಥೆ ಮಾಡಲು ಮುಂದಾಗಿದೆ.

ಸಹಾಯಧನವನ್ನ ಮತ್ತಷ್ಟು ಏರಿಕೆ ಮಾಡೋ ಸಾಧ್ಯತೆಯಿದೆ

ಈ ಹಿಂದೆ ಕಾಶಿಯಾತ್ರೆಗೆ ಅಂತಾ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರದಿಂದ 15 ಸಾವಿರದಷ್ಟು ಯಾತ್ರಾ ವೆಚ್ಚ ನೀಡಲಾಗ್ತಾಯಿತ್ತು. ಇದೀಗಾ ಅಯೋಧ್ಯೆ ದರ್ಶನಕ್ಕೂ ರೈಲುಗಳ ವ್ಯವಸ್ಥೆ ಕಲ್ಪಿಸ್ತಿದ್ದು, ಸಹಾಯಧನವನ್ನ ಮತ್ತಷ್ಟು ಏರಿಕೆ ಮಾಡೋ ಸಾಧ್ಯತೆಯಿದೆ ಎನ್ನಲಾಗ್ತಿದೆ. ಈಗಾಗಲೇ, ಮುಜರಾಯಿ ಇಲಾಖೆ, ರೈಲ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಅಂತಿಮ ಹಂತದ ಚರ್ಚೆ ಮಾಡಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಇನ್ನು, ಈ ವಿಚಾರವಾಗಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕಾಶಿಯಂತೆ ಅಯೋಧ್ಯೆಗೂ ರೈಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ರು.

ರೈಲಿಗೆ ಸುಮ್ಮನೆ ಬಾಡಿಗೆ ಕಟ್ಟಬೇಕು ಅಂತ ರಾಮೇಶ್ವರ, ತಿರುವನಂತಪುರ, ಮದುರೈ ಕಡೆ ಎಲ್ಲ ಆಯಿತು. ಈಗ ಚಳಿ ಕಡಿಮೆ ಆದಮೇಲೆ ಕಾಶಿ, ಅಯೋಧ್ಯೆ ಕಡೆಗೆ ಟ್ರೈನ್ ಹೋಗುತ್ತೆ.

ರಾಮಲಿಂಗ ರೆಡ್ಡಿ, ಸಾರಿಗೆ ಸಚಿವ

‘ಅಯೋಧ್ಯೆ ಟಾಸ್ಕ್’!

 • ಬಿಜೆಪಿ ಎಂಪಿಗಳಿಗೆ ಜನರನ್ನ ಅಯೋಧ್ಯೆಗೆ ಕರೆದ್ಯೊಯಲು ಟಾಸ್ಕ್!
 • 250 ಕಾರ್ಯಕರ್ತರನ್ನ ಆಯ್ದು, ಸಂಸದರ ಸ್ವಂತ ಖರ್ಚಿನಲ್ಲಿ ಟ್ರಿಪ್
 • ನೀತಿ ಸಂಹಿತೆ ಜಾರಿಯಾಗೋದ್ರೊಳಗೆ ಟ್ರಿಪ್ ಮುಗಿಸಲು ಪ್ಲ್ಯಾನ್!
 • ಅದರಂತೆ ಸಕಲ ರೀತಿಯಲ್ಲೂ ತಯಾರಿ ಆರಂಭಿಸಿದ್ದ ಕೇಸರಿ ಕಲಿಗಳು

‘ರಾಮನ ವಿಚಾರದಲ್ಲಿ ಬಿಜೆಪಿ ಅನಗತ್ಯ ರಾಜಕೀಯ ಮಾಡ್ತಿದೆ’

ಬಿಜೆಪಿ ವತಿಯಿಂದ ಜನರನ್ನ ಅಯೋಧ್ಯೆಗೆ ಕಳುಹಿಸಲು ವ್ಯವಸ್ಥೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ. ನಾವು ವಿರೋಧಿಸುತ್ತಿರುವುದು ಬಿಜೆಪಿಯ ರಾಜಕೀಯ ಹಾಗೂ ಬಿಜೆಪಿಯ ರಾಮನನ್ನ. ಆದ್ರೆ ನಾವು ಗಾಂಧೀಜಿಯ ರಾಮನನ್ನ ಆರಾಧಿಸುತ್ತೇವೆ. ನಮ್ಮ ಕರ್ನಾಟಕದಲ್ಲಿ ರಾಮಮಂದಿರಗಳು ಇಲ್ವಾ?ಹಳ್ಳಿಗಳಲ್ಲೂ ರಾಮ, ಸೀತೆ, ಲಕ್ಷ್ಮಣ ಇಲ್ವಾ? ಅಂತ ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಮ ರಾಜಕೀಯದ ಮಧ್ಯೆ ರಾಮಭಕ್ತರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಮುಜರಾಯಿ ಇಲಾಖೆಯ ಈ ನಿರ್ಧಾರದಿಂದ ರಾಮಭಕ್ತರ ಕನಸು ನನಸಾಗೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಭಕ್ತರಿಗೆ ಗುಡ್​ನ್ಯೂಸ್​​ ಕೊಟ್ಟ ಸರ್ಕಾರ: ಅಯೋಧ್ಯೆಗೆ ಹೋಗೋರಿಗೆ ವಿಶೇಷ ಟ್ರೈನ್​​!

https://newsfirstlive.com/wp-content/uploads/2024/01/SIDDARAMIAH_RAM.jpg

Load More