/newsfirstlive-kannada/media/post_attachments/wp-content/uploads/2025/01/Microfinance-6.jpg)
ಮೈಕ್ರೋ ಫೈನಾನ್ಸ್.. ಕಷ್ಟದಲ್ಲಿ ಇರೋರಿಗೆ ನೆರವಾಗುವ ನೆಪದಲ್ಲಿ ಸಾಲವೆಂಬ ಶೂಲಕ್ಕೆ ಏರಿಸುತ್ತಿವೆ. ಕಂಡಾಬಟ್ಟೆ ಬಡ್ಡಿ ಹಾಕಿ ಜನರನ್ನ ಸಾವಿನ ಹಾದಿಗೆ ತಳ್ಳುತ್ತಿವೆ. ರಾಜ್ಯದಲ್ಲಿ ‘ಮೈಕ್ರೋ’ ಕಾಟಕ್ಕೆ ಜೀವ ಕಳೆದುಕೊಳ್ಳುತ್ತಿರೋರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಲೋನ್ ಎಂಬ ಯಮಬೆನ್ನುಬಿದ್ದು ಜನರು ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.
ಮೈಕ್ರೋ ಫೈನಾನ್ಸ್​​ ಕಿರುಕುಳಕ್ಕೆ ಬೇಸತ್ತು ಜೀವ ಕಳೆದುಕೊಂಡವರ ಸಂಖ್ಯೆ ಏರುತ್ತಲೇ ಇದೆ. ಸಾಲ ಕೊಟ್ಟವರ ಕಾಟಕ್ಕೆ ಜನರು ನೆಮ್ಮದಿಯಿಂದ ಜೀವನ ಮಾಡದಂತಾಗಿದೆ. ಮಿತಿಮೀರಿದ ಬಡ್ಡಿಗೆ ಕೂಲಿ ನಾಲಿ ಮಾಡಿ ಸಾಲ ಕಟ್ಟಲು ಆಗದೆ ಜನ ಗೋಳಾಡುತ್ತಿದ್ದಾರೆ. ಇಂತಹ ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರ ಮೂಗುದಾರ ಹಾಕಬೇಕಿದೆ. ಇದೇ ವಿಚಾರಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂದು ಮಹತ್ವದ ಸಭೆ ನಡೆಸ್ತಿದೆ.
/newsfirstlive-kannada/media/post_attachments/wp-content/uploads/2025/01/Microfinance-5.jpg)
ಬಾಕಿ ವಸೂಲಿ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವ ಮೈಕ್ರೋ ಫಿನಾನ್ಸ್​ ಸಂಸ್ಥೆಗಳಗಳನ್ನು ನಿಯಂತ್ರಿಸಲು ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ತರುವ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ರಾಜ್ಯದಲ್ಲಿ ಜನ ಕಂಗಾಲಾಗಿರುವುದು ನಿಜ. ಸಾಲ ವಸೂಲಿ ಮಾನವೀಯ ಹಾಗೂ ನಾಗರಿಕ ದಾರಿಯಲ್ಲಿ ಆಗಬೇಕು. ಮುಗ್ಧರು ಯಾವ ರೀತಿಯಲ್ಲೂ ಶೋಷಣೆಗೆ ಒಳಗಾಗಬಾ ರದು. ಹೀಗಾಗಿಕಾನೂನುಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ವಿಧೇ ಯಕ ತೆರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿವೇಕಾ ವಿದ್ಯಾಸಂಸ್ಥೆ ವಾರ್ಷಿಕೋತ್ಸವ; ಶಿಕ್ಷಣದ ಮಹತ್ವ ತಿಳಿಸಿಕೊಟ್ಟ ನ್ಯೂಸ್ ಫಸ್ಟ್ ಸಿಇಓ S ರವಿಕುಮಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us