Advertisment

ಸಿದ್ದರಾಮಯ್ಯಕ್ಕೆ AICC ಮಹತ್ವದ ಜವಾಬ್ದಾರಿ.. ರಾಷ್ಟ್ರ ರಾಜಕಾರಣದಲ್ಲೂ ಸಿಎಂ ಸಿದ್ದು..!

author-image
Ganesh
Updated On
ಸಿದ್ದರಾಮಯ್ಯಕ್ಕೆ AICC ಮಹತ್ವದ ಜವಾಬ್ದಾರಿ.. ರಾಷ್ಟ್ರ ರಾಜಕಾರಣದಲ್ಲೂ ಸಿಎಂ ಸಿದ್ದು..!
Advertisment
  • ಕಳೆದ ವಾರ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯಗೆ ಮಹತ್ವದ ಹೊಣೆ
  • ಸಿದ್ದರಾಮಯ್ಯರ ವರ್ಚಸ್ಸು ಬಳಸಿಕೊಳ್ಳಲು ಮುಂದಾದ ಕಾಂಗ್ರೆಸ್
  • ಇದೇ ತಿಂಗಳ 15ರಂದು ಬೆಂಗಳೂರಿನಲ್ಲೇ ನಡೆಯುವ ಮೊದಲ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಐಸಿಸಿ ಮಹತ್ವದ ಜವಾಬ್ದಾರಿ ನೀಡಿದೆ. ‘ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ’ರಾಗಿ ಅವರನ್ನು ನೇಮಕ ಮಾಡಿದೆ. ಆ ಮೂಲಕ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಳ್ಳಲಿದ್ದಾರೆ.

Advertisment

ಕಳೆದ ವಾರ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. ಈ ವೇಳೆ ‘ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ’ ಅಸ್ತಿತ್ವಕ್ಕೆ ಬಂದಿದೆ. ಜುಲೈ 15ರಂದು ಬೆಂಗಳೂರಿನಲ್ಲಿ ಇದರ ಮೊದಲ ಸಭೆ ನಡೆಯಲಿದೆ. ದೇಶದಲ್ಲಿ ಹಿಂದುಳಿದ ವರ್ಗಗಳ ಸಮೂದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕೂಲಂಕಷ ಚರ್ಚೆಗೆ ಇದು ವೇದಿಕೆ ಒದಗಿಸಲಿದೆ.

ಇದನ್ನೂ ಓದಿ: ದ್ವಿಭಾಷಾ ಸೂತ್ರಕ್ಕೆ ಜೈ ಎಂದ ಸಿದ್ದರಾಮಯ್ಯ; ದೇಶದಲ್ಲಿ ಹಿಂದಿ ವಿರುದ್ಧ ಹೊಸ ಅಲೆ..!

ಏನೆಲ್ಲ ಮಾಡಲಿದೆ ಈ ಸಲಹಾ ಮಂಡಳಿ..?

  • ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿ ರಚನೆ
  • ಹಿಂದುಳಿದ ವರ್ಗಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಕೂಲಂಕಷ ಚರ್ಚೆ
  • ಸಮಸ್ಯೆ ಪರಿಹಾರ ಒದಗಿಸುವ ದಿಕ್ಕಿನಲ್ಲಿ ಕಾರ್ಯತಂತ್ರ ರೂಪಿಸಲು ಸಲಹಾ ಮಂಡಳಿ
  • ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಮುಂದಿನ ಕಾರ್ಯಯೋಜನೆಗಳು, ಅನುಷ್ಠಾನ
  • ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್‌ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಸಲಹೆ ಸೂಚನೆ
Advertisment

ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿ 24 ಸದಸ್ಯರಿರುವ ಈ ಸಲಹಾ ಮಂಡಳಿಯನ್ನು ಸಿದ್ದರಾಮಯ್ಯ ಮುನ್ನಡೆಸಲಿದ್ದಾರೆ. ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್​ ಪ್ಲಾನ್ ಮಾಡಿದೆ. ಹಿಂದುಳಿದ ವರ್ಗಗಳ ಸಮಸ್ಯೆ, ಸವಾಲುಗಳನ್ನು ಕುರಿತು ಸಲಹೆ ನೀಡುವುದರ ಜೊತೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಲಹೆಗಳನ್ನು ನೀಡಲಿದೆ. ಇನ್ನು, ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅನುಮೋದನೆ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್‌ ನಾಯಕರ ಪೈಕಿ ಸಿದ್ದರಾಮಯ್ಯ, ಹರಿಪ್ರಸಾದ್‌ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಕೂಡ ಮಂಡಳಿಯಲ್ಲಿದ್ದಾರೆ.

ಜುಲೈ 15ಕ್ಕೆ ಮೊದಲ ಸಭೆ

ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ಮುಂದಾಗಿದೆ. ಜುಲೈ 15ರಂದು ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ‘ಭಾರತ್‌ ಜೋಡೊ ಭವನ’ದಲ್ಲಿ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ:ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ ಎಲಾನ್ ಮಸ್ಕ್​​.. ಡೊನಾಲ್ಡ್ ಟ್ರಂಪ್​ಗೆ ದೊಡ್ಡ ಪೆಟ್ಟು..!

Advertisment

ಐವರು ಮಾಜಿ ಮುಖ್ಯಮಂತ್ರಿಗಳು, ಹತ್ತು ಮಂದಿ ಕೇಂದ್ರದ ಮಾಜಿ ಸಚಿವರು ಕೂಡ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಭೆ ಸಂಬಂಧ ಸಲಹಾ ಮಂಡಳಿಯ ಸದಸ್ಯ ಬಿ.ಕೆ. ಹರಿಪ್ರಸಾದ್​ ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಯಾರೆಲ್ಲ ಇದ್ದಾರೆ

1. ಸಿದ್ದರಾಮಯ್ಯ
2. ಬಿ.ಕೆ. ಹರಿಪ್ರಸಾದ್‌
3. ಅಶೋಕ್‌ ಗೆಹ್ಲೋಟ್
4. ಭೂಪೇಶ್‌ ಬಘೇಲ್‌
5. ವಿ.ನಾರಾಯಣಸ್ವಾಮಿ
6. ಸಚಿನ್‌ ಪೈಲಟ್‌
7. ಗುರುದೀಪ್‌ ಸಿಂಗ್‌ ಸಪ್ಪಲ್‌
8. ಅರುಣ್‌ ಯಾದವ್‌
9. ವಿಜಯ್‌ ನಾಮ್‌ದೇವ್‌ರಾವ್‌ ವಡೆಟ್ಟಿವಾರ್‌
10. ವಿ. ಹನುಮಂತರಾವ್‌
11. ಅಮಿತ್‌ ಚಾವ್ಡಾ
12. ಬಿ. ಮಹೇಶ್‌ ಕುಮಾರ್‌ ಗೌಡ್‌
13. ಪೊನ್ನಮ್‌ ಪ್ರಭಾಕರ್‌
14. ಡಾ. ವೀರಪ್ಪ ಮೊಯಿಲಿ
15. ಎಸ್‌.ಜೋತಿಮಣಿ (ಸಂಸದೆ)
16. ಶ್ರೀಕಾಂತ್‌ ಜೇನಾ
17. ಕಮಲೇಶ್ವರ್‌ ಪಟೇಲ್‌
18. ಅಜಯ್‌ ಕುಮಾರ್‌ ಲಲ್ಲು
19. ಸುಭಾಷಿಣಿ ಯಾದವ್‌
20. ಅಡೂರು ಪ್ರಕಾಶ್‌ (ಸಂಸದ)
21. ಧನೇಂದ್ರ ಸಾಹು
22. ಹೀನಾ ಕಾವ್ರೆ
23. ಡಾ. ಅನಿಲ್‌ ಜೈಹಿಂದ್-‌ ಸಲಹಾ ಮಂಡಳಿಯ ಸಂಚಾಲಕರು
24. ಜಿತೇಂದರ್‌ ಬಘೇಲ್-‌ ಸಲಹಾ ಮಂಡಳಿಯ ಕಾರ್ಯದರ್ಶಿ

ಇದನ್ನೂ ಓದಿ: ಮತ್ತೆ ಸುವರ್ಣಾವಕಾಶ ಕೈಚೆಲ್ಲಿದ ಕನ್ನಡಿಗ.. ಅಭಿಮಾನಿಗಳಿಂದ ಭಾರೀ ಆಕ್ರೋಶ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment