/newsfirstlive-kannada/media/post_attachments/wp-content/uploads/2025/06/SIDDARAMAIAH-2.jpg)
ದೇಶಾದ್ಯಂತ ದ್ವಿಭಾಷಾ ನೀತಿಯದ್ದೇ ಚರ್ಚೆ ಬಿರುಗಾಳಿಯಂತೆ ಅಬ್ಬರಿಸ್ತಿದೆ. ಅದರಲ್ಲೂ ದಶಕಗಳ ಬಳಿಕ ಠಾಕ್ರೆ ಸಹೋದರರು ಭಾಷೆ ವಿಚಾರವಾಗಿ ವೈರತ್ವ ಮರೆತು ಒಟ್ಟಾಗಿದ್ದಾರೆ. ಇತ್ತ ಕರ್ನಾಟಕದಲ್ಲೂ ದ್ವಿಭಾಷೆ ನೀತಿ ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದ್ದಾರೆ.
ದ್ವಿಭಾಷಾ ಸೂತ್ರ.. ಸದ್ಯ ದೇಶಾದ್ಯಂತ ಈ ಒಂದೇ ಮಾತು ಸಖತ್ ಸಂಚಲನ ಸೃಷ್ಟಿಸ್ತಿದೆ. ಆಯಾ ರಾಜ್ಯಗಳ ಭಾಷೆ ಹಾಗೂ ಇಂಗ್ಲಿಷ್ ಸೇರಿ ಶಾಲಾ-ಕಾಲೇಜುಗಳಲ್ಲಿ ದ್ವಿಭಾಷಾ ನೀತಿ ಸಾಕು. ತೃತೀಯ ಭಾಷೆಯಾಗಿ ಹಿಂದಿ ಬೇಡ ಅನ್ನೋ ಅಭಿಯಾನ ಬಿರುಗಾಳಿಯನ್ನೇ ಎಬ್ಬಿಸಿದೆ.
ಇದನ್ನೂ ಓದಿ: ‘ಅರುಂಧತಿ’ ಲುಕ್ ರೀ ಕ್ರಿಯೇಟ್ ಮಾಡಿದ ನಟಿ ಮೌನ ಗುಡ್ಡೆಮನೆ.. VIDEO
ಶೀಘ್ರ ಸರ್ಕಾರದ ಅಭಿಪ್ರಾಯ ಆಗಲು ಪ್ರಯತ್ನಿಸುತ್ತೇನೆ
ದೇಶಾದ್ಯಂತ ಭಾರೀ ಚರ್ಚೆಯಲ್ಲಿರುವ ಹಾಗೂ ಅಷ್ಟೇ ಸಂಚಲನ ಸೃಷ್ಟಿಸಿರುವ ದ್ವಿಭಾಷಾ ಸೂತ್ರ ರಾಜ್ಯದಲ್ಲೂ ಗಟ್ಟಿಯಾಗಿ ಸದ್ದು ಮಾಡ್ತಿದೆ. ಈ ನಡುವೆ ದ್ವಿಭಾಷಾ ನೀತಿಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವನಿ ಎತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ದ್ವಿಭಾಷಾ ಸೂತ್ರ ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ, ಸರ್ಕಾರದ್ದಲ್ಲ. ಈ ವೇಳೆ ನೆರೆದವರು ನಿಮ್ಮ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯ ಅಂತ ಧ್ವನಿ ಸೇರಿಸಿದ್ರು. ನನ್ನ ಅಭಿಪ್ರಾಯ ಸರ್ಕಾರದ ಅಭಿಪ್ರಾಯ ಆಗಲು ಪ್ರಯತ್ನಿಸುತ್ತೇನೆ ಅಂತ ಸಿಎಂ ಭರವಸೆ ನೀಡಿದ್ರು.
ಮಹಾರಾಷ್ಟ್ರದಲ್ಲಿ ‘ಮರಾಠಿಗರ ಧ್ವನಿ’ ಹೆಸರಲ್ಲಿ ಬೃಹತ್ ಮೆರವಣಿಗೆ
ಈ ಭಾಷಾ ಕಲಹ ಮಹಾರಾಷ್ಟ್ರದಲ್ಲಿ ಮಹಾಸಮರಕ್ಕೆ ಮುನ್ನುಡಿ ಬರೆದಿದೆ. ಶಿವ ಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಹಾಗೂ ಸಹೋದರನ ಪುತ್ರ ರಾಜ್ ಠಾಕ್ರೆ ಸಹೋದರರು 20 ವರ್ಷಗಳ ಬಳಿಕ ಒಂದಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟದ ಭಾಗವಾಗಿ ಮರಾಠಿಗರ ಧ್ವನಿ ಹೆಸರಲ್ಲಿ ಆಯೋಜಿಸಲಾದ ಬೃಹತ್ ಱಲಿಯಲ್ಲಿ ಇಬ್ಬರೂ ವೇದಿಕೆ ಹಂಚಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಡ್ಡಾ ಉತ್ತರಾಧಿಕಾರಿಗೆ ಮೂವರು ನಾಯಕಿಯರು ಫೈಟ್​.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಯಾರಿಗೆ..?
ಮಹಾರಾಷ್ಟ್ರದ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸುವ ವಿವಾದಾತ್ಮಕ ನೀತಿಯನ್ನು ಜಾರಿಗೊಳಿಸಲು ಮಹಾ ಸರ್ಕಾರ ಮುಂದಾಗಿತ್ತು. ಅದಕ್ಕೆ ವ್ಯಾಪಕ ವಿರೋಧ ಬೆನ್ನಲ್ಲೇ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು. ಇದನ್ನು ಮರಾಠಿಗರ ಬಲು ದೊಡ್ಡ ವಿಜಯ ಎಂದು ಶಿವ ಸೇನಾ ಹಾಗೂ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಬಣ್ಣಿಸಿ ಠಾಕ್ರೆ ಸಹೋದರರು ವಿಜಯೋತ್ಸವ ಆಚರಿಸಿದ್ದಾರೆ. ಈ ವೇಳೆ ಮಾತನಾಡಿದ ರಾಜ್ ಠಾಕ್ರೆ ಮುಂಬೈಯನ್ನು ಮಹಾರಾಷ್ಟ್ರದಿಂದ ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಮಹಾರಾಷ್ಟ್ರದಲ್ಲಿ ತ್ರಿಭಾಷಾ ನೀತಿ ವಿರೋಧಿಸಿದ ಠಾಕ್ರೆ ಸಹೋದರರ ನಡೆಯನ್ನು ತಮಿಳುನಾಡು ಸಿಎಂ ಸ್ಟಾಲಿನ್ ಸ್ವಾಗತಿಸಿದ್ದಾರೆ. ಒಟ್ಟಾರೆ ದೇಶದ ಹಲವು ರಾಜ್ಯಗಳಲ್ಲಿ ಅದರಲ್ಲೂ ದಕ್ಷಿಣದಲ್ಲಿ ತ್ರಿಭಾಷಾ ನೀತಿಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ. ಸದ್ಯ ತಮಿಳುನಾಡಿನಲ್ಲಿ ದ್ವಿಭಾಷಾ ನೀತಿ ಇದ್ದು ಕರ್ನಾಟಕದಲ್ಲೂ ಬರುತ್ತಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ -ಸಿಎಂ ಸ್ಥಾನದ ಬಗ್ಗೆ ಡಿಕೆಶಿ ಪಂಚ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ