ಎಲ್ಲಾ ಕ್ಷೇತ್ರಗಳಿಗೂ 2,000 ಕೋಟಿ ಆಶ್ವಾಸನೆ.. ಬೆನ್ನಲ್ಲೇ ಶಾಸಕರಿಗೆ ಟಾಸ್ಕ್​ ಕೊಟ್ಟ ಸಿದ್ದರಾಮಯ್ಯ..!

author-image
Ganesh
Updated On
ಎಲ್ಲಾ ಕ್ಷೇತ್ರಗಳಿಗೂ 2,000 ಕೋಟಿ ಆಶ್ವಾಸನೆ.. ಬೆನ್ನಲ್ಲೇ ಶಾಸಕರಿಗೆ ಟಾಸ್ಕ್​ ಕೊಟ್ಟ ಸಿದ್ದರಾಮಯ್ಯ..!
Advertisment
  • ಸಿಎಲ್​ಪಿ ಸಭೆಯಲ್ಲಿ ಅನುದಾನ ಗ್ಯಾರಂಟಿ ಆಶ್ವಾಸನೆ
  • ಎಲ್ಲ ಪಕ್ಷದ ಶಾಸಕರ ಕ್ಷೇತ್ರಗಳಿಗೂ 2,000 ಕೋಟಿ ಭರವಸೆ
  • ವಿಪಕ್ಷಗಳ ಆರೋಪಕ್ಕೆ ತಕ್ಕ ಉತ್ತರ ನೀಡುವಂತೆ ಸಿಎಂ ಸಲಹೆ

ಬೆಳಗಾವಿ ಚಳಿಗಾಲ ಅಧಿವೇಶನ ಅಂತ್ಯಕ್ಕೆ ಬಂದಿದೆ. ನಾಳೆ ಒಂದೀನ ಕಳೆದ್ರೆ 10 ದಿನದ ಬೆಳಗಾವಿ ಟೂರ್​ ಮುಗಿಯಲಿದೆ. ಬರೀ ಮಾತಿಗೆ ಸೀಮಿತವಾದ ಅಧಿವೇಶನ ಗದ್ದಲ ಗಲಾಟೆಗಳಿಂದ ಅಂತ್ಯಕ್ಕೆ ಬಂದಿದೆ. ಗ್ಯಾರಂಟಿ ಮಂಥನದಲ್ಲಿ ಕೂತ ಸರ್ಕಾರಕ್ಕೆ ಅಭಿವೃದ್ಧಿಯ ಚಿಂತೆಯೇ ಮರೆತಿದೆ. ಶಾಸಕರ ಅನುದಾನಕ್ಕೂ ಅಡಚಣೆ ಆಗಿದೆ. ಇದು ವಿಪಕ್ಷಗಳ ಆರೋಪವಷ್ಟೇ ಅಲ್ಲ, ಆಡಳಿತರೂಢ ಶಾಸಕ ಕೊರಗು ಆಗಿದೆ. ನಿನ್ನೆ ನಡೆದ ಸಿಎಲ್​ಪಿ ಸಭೆಯಲ್ಲಿ ಈ ಕೊರಗು ನೀಗಿಸುವ ಭರವಸೆ ಸಿಕ್ಕಿದೆ.

ಸತ್ಯದ ದಾಖಲೆಗಳನ್ನು, ಅಂಕಿ ಅಂಶಗಳನ್ನು ಜನರ ಮುಂದಿಡಿ!
ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ಸಭೆಯಲ್ಲಿ ಎದ್ದ ಮೊದಲ ಕೂಗೇ, ಅದು ಅನುದಾನ.. ದುಡ್ಡು ಕೊಡಿ, ಕಾಸು ಕೊಡಿ ಎಂಬ ಬೇಡಿಕೆ. ಸಭೆಯಲ್ಲಿ ಮಾತಿಗೆ ನಿಂತ ಸಿಎಂ, ಭರವಸೆಯ ಮಳೆಯನ್ನೇ ಸುರಿಸಿದ್ರು.

ಅನುದಾನದ ಆಶ್ವಾಸನೆ!
ಸಿಎಲ್​ಪಿ ಸಭೆಯಲ್ಲಿ ಸಿದ್ದರಾಮಯ್ಯ ಅನುದಾನದ ಆಶ್ವಾಸನೆ ನೀಡಿದ್ದಾರೆ. ಎಲ್ಲಾ ಪಕ್ಷದ ಶಾಸಕರಿಗೂ ಅನುದಾನ ನೀಡುತ್ತೇವೆ ಅಂತ ಹೇಳಿರುವ ಸಿಎಂ, ಮಳೆ ಹಾನಿ ಸರಿಪಡಿಸಲು ಅಪೆಂಡಿಕ್ಸ್ ಇ ನಲ್ಲಿ 4000 ಕೋಟಿ, ಗ್ರಾಮೀಣ ರಸ್ತೆ ಹಾಳಾಗಿರುವುದಕ್ಕೆ 2000 ಕೋಟಿ ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಮುಂದಿನ ವರ್ಷದಿಂದ ರಾಜ್ಯದ ಆರ್ಥಿಕ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಆಗ ಇನ್ನಷ್ಟು ಅಭಿವೃದ್ಧಿಗೆ ವೇಗ ಸಿಗಲಿದೆ. ಎಲ್ಲಾ ಕ್ಷೇತ್ರಗಳಿಗೂ ಎಲ್ಲಾ ಪಕ್ಷದ ಶಾಸಕರ ಕ್ಷೇತ್ರಗಳಿಗೂ 2,000 ಕೋಟಿ ವಿತರಣೆ ಮಾಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಇಸ್ರೋ ಮತ್ತೊಂದು ಮೈಲಿಗಲ್ಲಿಗೆ ಸಜ್ಜು; ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿ ಹೆಸರು ಫೈನಲ್​​

ಇದೇ ವೇಳೆ ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ. ಬಿಜೆಪಿಯವರ ಆರೋಪದಂತೆ ಆರ್ಥಿಕವಾಗಿ ರಾಜ್ಯ ಹಿನ್ನಡೆಯಾಗಿದ್ದರೆ GST ಸಂಗ್ರಹದಲ್ಲಿ ಮೊದಲ ಸ್ಥಾನಕ್ಕೆ ಹೇಗೆ ಬರುತ್ತಿತ್ತು ಎಂದು ಸಿಎಂ ಪ್ರಶ್ನಿಸಿದ್ದಾರೆ. ವಿಧಾನಸಭೆ-ಪರಿಷತ್​ನಲ್ಲಿ ಮತ್ತು ಸದನದ ಹೊರಗೆ ನಮ್ಮ ಅಭಿವೃದ್ಧಿ ದಾಖಲೆಗಳನ್ನು, ಅಂಕಿ ಅಂಶಗಳನ್ನು ಮನೆ ಮನೆ ತಲುಪಿಸಿ ಅಂತ ಶಾಸಕರಿಗೆ ಸೂಚಿಸಿದ್ದಾರೆ ಅಂತ ಗೊತ್ತಾಗಿದೆ.

ಸಭೆಯಲ್ಲಿ ವಕ್ಫ್​ ವಿಚಾರವೂ ಪ್ರಸ್ತಾಪವಾಗಿದೆ.. ಪ್ರಾದೇಶಿಕ ತಾರತಮ್ಯ ಹೋಗಲಾಡಿಸಲು ಬಿಜೆಪಿ ಪ್ರಯತ್ನಿಸಿಲ್ಲ.. ನಂಜುಂಡಪ್ಪ ವರದಿಯ ಅನುಷ್ಠಾನ ಮತ್ತು ಸಾಮಾಜಿಕ, ಆರ್ಥಿಕ ಬದಲಾವಣೆ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಗೋವಿಂದರಾವ್ ಅವರ ಸಮಿತಿಯನ್ನ ರಚಿಸಲಾಗಿದೆ ಅಂತ ಸಿಎಂ ಮಾಹಿತಿ ನೀಡಿದ್ದಾರೆ. 371ಜೆ ಸಂವಿಧಾನ ತಿದ್ದುಪಡಿಗೆ ಬಿಜೆಪಿ ಒಪ್ಪಿರಲಿಲ್ಲ. ಮಹದಾಯಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದ ಬಿಜೆಪಿ ಪ್ರಾಮಿಸ್ ಉಳಿಸಿಕೊಂಡಿಲ್ಲ. ಅಪಪ್ರಚಾರಗಳಿಗೆ ಸರಿಯಾಗಿ ಉತ್ತರ ನೀಡಿ ಅಂತ ಸಿಎಂ ಶಾಸಕರಿಗೆ ಸಲಹೆ ಕೊಟ್ಟಿದ್ದಾರೆ.. ಜನ ಸಂಪರ್ಕ ಸಭೆ ಹೆಚ್ಚೆಚ್ಚು ಮಾಡಿ ಅಂತ ಸೂಚಿಸಿದ್ದಾರೆ.

ಇದನ್ನೂ ಓದಿ:224 ಶಾಸಕರಿಗೂ ಅನುದಾನದ ಭಾಗ್ಯ ಕರುಣಿಸಿದ ಸಿಎಂ ಸಿದ್ದರಾಮಯ್ಯ; ಬೀಸೋ ದೊಣ್ಣೆಯಿಂದ ಪಾರು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment