ಹನಿ ಕಹಾನಿ ಕೇಳಿ ಹೈಕಮಾಂಡ್ ಫುಲ್ ಗರಂ.. ಸಚಿವ ಸ್ಥಾನದ ಆಕಾಂಕ್ಷಿಗಳಿಗೂ ಶಾಕ್..!

author-image
Ganesh
Updated On
ಹನಿ ಕಹಾನಿ ಕೇಳಿ ಹೈಕಮಾಂಡ್ ಫುಲ್ ಗರಂ.. ಸಚಿವ ಸ್ಥಾನದ ಆಕಾಂಕ್ಷಿಗಳಿಗೂ ಶಾಕ್..!
Advertisment
  • ವೇಣುಗೋಪಾಲ್​ ಜೊತೆ ಸಿಎಂ ಒನ್​ ಟು ಒನ್​ ಮೀಟಿಂಗ್​
  • ಹನಿಟ್ರ್ಯಾಪ್​ ವಿಷ್ಯ ಪ್ರಸ್ತಾಪ.. ರಾಜಣ್ಣ ನಡೆಗೆ ಅಸಮಾಧಾನ
  • ಸಂಪುಟ ಪುನಾರಚನೆ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಶಾಕ್​..

‘ಹನಿ’ಟ್ರ್ಯಾಪ್ ಕಹಾನಿ.. ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ.. ಕುರ್ಚಿ ಜಟಾಪಟಿ.. ಇಷ್ಟೆಲ್ಲಾ ಕಚ್ಚಾಟವೀಗ ರಾಷ್ಟ್ರರಾಜಧಾನಿ ತಲುಪಿದೆ. ಇಡೀ ಅರ್ಧ ಸರ್ಕಾರವೇ ದೆಹಲಿಯಲ್ಲಿ ಬೀಡುಬಿಟ್ಟಿದೆ. ಸಿಎಂ, ಡಿಸಿಎಂ ದೆಹಲಿಯಲ್ಲಿ ಹೈಕಮಾಂಡ್​ ನಾಯಕರನ್ನು ಭೇಟಿಯಾಗಿ ವರದಿ ಒಪ್ಪಿಸುತ್ತಿದ್ದಾರೆ. ಇದೇ ವೇಳೆ ಹನಿ ಕಹಾನಿ ಕೇಳಿ ವೇಣುಗೋಪಾಲ್​ ಗರಂ ಆಗಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳಿಂದ ಹರಿದು ಬಂದಿದೆ.

ಒನ್​ ಟು ಒನ್​ ಮೀಟಿಂಗ್​

ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ.ವೇಣುಗೋಪಾಲ್​ರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ, ಒನ್​ ಟು ಒನ್​ ಸಭೆ ನಡೆಸಿದ್ರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವೇಣುಗೋಪಾಲ್​ ಜೊತೆ ಎಂಎಲ್ ಸಿ ನಾಮನಿರ್ದೇಶನ, ಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಿಎಂ ಮುಂದೆ ಕರ್ನಾಟಕದ ಹನಿ ಗದ್ದಲವನ್ನು ಪಸ್ತಾಪಿಸಿ, ಶಾಸನಸಭೆಯಲ್ಲಿ ರಾಜಣ್ಣ ತಮ್ಮ ನಿಲುವು ವ್ಯಕ್ತಪಡಿಸಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಕ್ಫ್​ ತಿದ್ದುಪಡಿ ಮಸೂದೆ ಸ್ವಾಗತಿಸಿದ ದೇವೇಗೌಡ.. ಬಿಜೆಪಿ ಮೈತ್ರಿ ಪಕ್ಷ ಜೆಡಿಯುನ ಹಿರಿಯ ನಾಯಕ ರಾಜೀನಾಮೆ..!

publive-image

ಸಂಪುಟಕ್ಕೆ ಸದ್ಯಕ್ಕಿಲ್ಲ ಸರ್ಜರಿ..!

ನಾಲ್ಕು ಪ್ರಮುಖ ಅಜೆಂಡಾಗಳೊಂದಿಗೆ ಸಿಎಂ, ಡಿಸಿಎಂ ದೆಹಲಿಗೆ ತೆರಳಿದ್ದಾರೆ.. ಅದರಲ್ಲಿ ಸಚಿವ ಸಂಪುಟ ಪುರಾಚರನೆಯೂ ಒಂದು. ರಾಹುಲ್​ ಗಾಂಧಿ ಜೊತೆ ಭೇಟಿ ವೇಳೆ ಸದ್ಯಕ್ಕೆ ಸಂಪುಟ ಸರ್ಜರಿಗೆ ಕೈ ಹಾಕೋದು ಬೇಡ ಎಂಬ ಚರ್ಚೆ ಆಗಿದ್ಯಂತೆ.

ಚರ್ಚೆ ಏನು?

  • ನಾಗೇಂದ್ರಗೆ ಅವಕಾಶ ಮಾಡಿಕೊಡಬೇಕು ಎಂಬ ತೀರ್ಮಾನ
  •  ನಾಗೇಂದ್ರ ವಿಚಾರದಲ್ಲಿ ಈ ಹಿಂದೆಯೇ ನಿರ್ಧಾರ ಆಗಿತ್ತು
  •  ಒಬ್ಬರಿಗೆ ಅವಕಾಶ ಮಾಡಿಕೊಟ್ಟರೇ ಬೇರೆ ಸಂದೇಶ ರವಾನೆ
  •  ಸರ್ಕಾರದ 2ನೇ ವರ್ಷ ಆಚರಣೆ ಬಳಿಕ ಸಂಪುಟಕ್ಕೆ ಕೈ ಹಾಕೋಣ
  •  ರಾಹುಲ್ ಗಾಂಧಿಯ ಜೊತೆ ಮಾತುಕತೆಯಲ್ಲಿ ಸಿದ್ದು ಅಭಿಪ್ರಾಯ
  •  ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರವೂ ಸೂಕ್ಷ್ಮವಾಗಿ ಪ್ರಸ್ತಾಪ
  •  ರಾಹುಲ್ ಗಾಂಧಿ ಭೇಟಿ ವೇಳೆ ಹನಿಟ್ರ್ಯಾಪ್ ವಿಚಾರ ಚರ್ಚೆ

ಕಾಂಗ್ರೆಸ್​ ಸರ್ಕಾರದ 2ನೇ ವರ್ಷಾಚರಣೆಗೆ ‘ರಾಗಾ’ಗೆ ಆಹ್ವಾನ

ಮೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಎರಡು ವರ್ಷ ಪೂರೈಸಲಿದೆ. ಈ 2ನೇ ವರ್ಷದ ಆಚರಣೆಯನ್ನು ಅದ್ಧೂರಿಯಾಗಿ ಮಾಡಲು ಸಿಎಂ ತೀರ್ಮಾನಿಸಿದ್ದಾರೆ.. ನಾಲ್ಕು ಕಂದಾಯ ವಿಭಾಗಗಳಲ್ಲಿ ಅದ್ದೂರಿ ಸಮಾರಂಭ ಮಾಡಲು ಸಿದ್ದು ಸರ್ಕಾರ ಪ್ಲಾನ್​ ಮಾಡಿದೆ. ಹೀಗಾಗಿ 2ನೇ ವರ್ಷಾಚರಣೆಗೆ ಅತಿಥಿಯಾಗಿ ಬರುವಂತೆ ರಾಹುಲ್ ಗಾಂಧಿಗೆ ಸಿಎಂ ಆಹ್ವಾನ ನೀಡಿದ್ದಾರೆ. ಇನ್ನು ಸಿಎಂ ಆಹ್ವಾನಕ್ಕೆ ರಾಹುಲ್​ ಸಕಾರಾತ್ಮ ಸ್ಪಂದನೆ ನೀಡಿದ್ದಾರೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಮತ್ತೊಂದು ಆಘಾತ; ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮನೋಜ್ ಕುಮಾರ್ ಇನ್ನಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment