ಸಿದ್ದರಾಮಯ್ಯಗೆ ಮುಳುವಾಯ್ತ ಮುಡಾ ಕೇಸ್​​; ರಾಜ್ಯಕ್ಕೆ ಹೊಸ ಸಿಎಂ ಬರ್ತಾರಾ?

author-image
Gopal Kulkarni
Updated On
ಕೆಪಿಸಿಸಿ ನಾಯಕರಿಗೆ AICC ನಾಯಕರ ಸೂಚನೆ: ಫೋನ್​ ಕರೆಯಲ್ಲಿ ಹೈಕಮಾಂಡ್ ನಾಯಕರು ಹೇಳಿದ್ದೇನು?
Advertisment
  • ಮುಡಾ ಹಗರಣ ವೈಟ್ನರ್​​ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು
  • ವಿಪಕ್ಷಗಳಿಗೆ ದ್ವೇಷದ ಕನ್ನಡಕ ಕಳಚಿಟ್ಟು ನೋಡಿ ಎಂದಿದ್ದೇಕೆ ಸಿಎಂ ಸಿದ್ದು
  • ಸಿದ್ದ್ದು ಸೈಟ್‌ ಕುರಿತ ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್‌, ಜೋಶಿ ಹೊಸ ಬಾಂಬ್

ಬೆಂಗಳೂರು: ವಿಪಕ್ಷಗಳ ಮುಡಾ ಅಸ್ತ್ರಕ್ಕೆ ಸಿಎಂ ಸಿದ್ದರಾಮಯ್ಯ ವ್ಯವಸ್ಥಿತವಾಗಿ ಪ್ರತ್ಯಸ್ತ್ರ ಪ್ರಯೋಗಿಸ್ತಿದ್ದಾರೆ. ತಮ್ಮ ಮೇಲೆ ಬಂದ ವೈಟ್ನರ್​ ಆರೋಪ ತಳ್ಳಿಹಾಕೀರೋ ಸಿಎಂ ಸಿದ್ದರಾಮಯ್ಯ, ವಿಪಕ್ಷಗಳಿಗೆ ದ್ವೇಷದ ಕನ್ನಡಕ ಕಳಚಿಟ್ಟು ಕಣ್ಣುಬಿಟ್ಟು ನೋಡಿ ಅಂತ ತಿರುಗೇಟು ನೀಡಿದ್ದಾರೆ. ಹಾಗೇನೇ ವೈಟ್ನರ್‌ ಹಾಕಿದ್ದ ಸಾಲಿನ ರಹಸ್ಯವನ್ನೂ ಬಿಚ್ಚಿಟ್ಟಿದ್ದಾರೆ.

ಮುಡಾ ಹಗರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ ಪ್ರಕರಣ, ಶುದ್ಧ ಹಸ್ತ ಎಂದೆಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅವ್ರನ್ನೇ ಅನುಮಾನದಿಂದ ನೋಡುವಂತೆ ಮಾಡಿದ ಪ್ರಕರಣ. ವಿಪಕ್ಷಗಳು ಅಬ್ಬರಿಸಿ ಬೊಬ್ಬಿರಿದ್ರೂ ಸಿಎಂ ಸಿದ್ದರಾಮಯ್ಯ ಮಾತ್ರ ಆರೋಪವನ್ನು ತಳ್ಳಿಹಾಕಿದ್ದಾರೆ. ಕಾನೂನು ಪ್ರಕಾರವೇ ಸೈಟ್ ಪಡೆದಿದ್ದು ಅಂತ ಎದೆ ಉಬ್ಬಿಸಿರುವ ಸಿದ್ದರಾಮಯ್ಯ ವಿಪಕ್ಷಗಳ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ:ಪತ್ನಿ ಸಮೇತ ಶ್ರೀವೈಷ್ಣೋದೇವಿ ದರ್ಶನ ಪಡೆದ ಡಿಕೆಶಿ.. ಆಪತ್ಕಾಲದಲ್ಲಿ ಶಕ್ತಿದೇವಿಯ ಮೊರೆ ಹೋದ್ರಾ ಡಿಸಿಎಂ?

ಮುಡಾ ಹಗರಣದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ಒಂದರ ಮೇಲೆ ಒಂದರಂತೆ ಆರೋಪಗಳ ಅಸ್ತ್ರಗಳನ್ನು ಪ್ರಯೋಗ ಮಾಡ್ತಿದ್ದಾರೆ. ಆದ್ರೇ ಯಾರು ಏನೇ ಹೇಳಿದ್ರು, ನಾನು ಜಗ್ಗಲ್ಲ ಬಗ್ಗಲ ಅಂತ ಹೇಳಿರುವ ಸಿದ್ದರಾಮಯ್ಯ, ಇದೀಗ ಬಿಜೆಪಿಗರ ವೈಟ್ನರ್​ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.

publive-image

ಇದನ್ನೂ ಓದಿ:ಕಾಂಗ್ರೆಸ್​ನ 50 ಶಾಸಕರ ಖರೀದಿಗೆ ಒಬ್ಬೊಬ್ಬರಿಗೆ 100 ಕೋಟಿ ಆಫರ್ -ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ನಾಯಕ..!

ವೈಟ್ನರ್​ ಹಾಕಿ ದಾಖಲೆಗಳು ತಿರುಚಿದ್ದಾರೆಂದು ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋವೊಂದನ್ನ ಪೋಸ್ಟ್​ ಮಾಡಿದ್ದಾರೆ. ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್‌ ಹಚ್ಚಿದನ್ನೇ ಮಹಾನ್‌ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ ಜೆಡಿಎಸ್‌ ನಾಯಕರೇ, ವೈಟ್ನರ್‌ ಹಿಂದಿರುವ ಅಕ್ಷರಗಳೇನು ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ ಅಂತ ವಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ.


">August 26, 2024

publive-imageಹೊಸ ಸಿಎಂ ಎಂಬ ಹೊಸ ಬಾಂಬ್ ಸಿಡಿಸಿದ ಜೋಶಿ

ಕಾಂಗ್ರೆಸ್​​ ಸರ್ಕಾರಕ್ಕೆ ವಾಲ್ಮೀಕಿ ಮತ್ತು ಮುಡಾ ಹಗರಣ ತಲೆ ನೋವಾಗಿ ಪರಿಣಮಿಸಿದೆ. ಈ ಹೊತ್ತಲ್ಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೊಸ ಬಾಂಬ್​ ಸಿಡಿಸಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ಹಗರಣದ ದಾಖಲೆ ಕೊಟ್ಟಿದ್ದೇ ಕಾಂಗ್ರೆಸ್ ಅಂತ ಜೋಶಿ ಹೇಳಿದ್ದಾರೆ.ಕೇಂದ್ರ ಸಚಿವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಸೃಷ್ಟಿಸಿದೆ. ಇದಷ್ಟೇ ಅಲ್ಲದೇ ಕಾಂಗ್ರೆಸ್​​ನಲ್ಲಿ ಹೊಸ ಸಿಎಂ ಬರ್ತಾರೆ ಅಂತ ಮತ್ತೊಮ್ಮೆ ಜೋಶಿ ಭವಿಷ್ಯ ನುಡಿದಿದ್ದಾರೆ. ಒಟ್ಟಾರೆ, ಮುಡಾ ಪ್ರಕರಣ ಸಿದ್ದರಾಮಯ್ಯ ಅವರ ಸಿಎಂ ಸೀಟು ಅಲಗಾಡಿಸುವಷ್ಟು ಬೆಳೆದು ನಿಂತಿದೆ. ಆದ್ರೆ ಇಡೀ ಹಸ್ತಪಡೆಯೇ ಸಿಎಂ ಬೆನ್ನಿಗೆ ನಿಂತಿದ್ದು, ಮುಂದೆನಾಗುತ್ತದೆ ಅಂತ ಕುತೂಹಲವು ಮೂಡಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment