newsfirstkannada.com

ಲೋಕಸಭೆಯಲ್ಲಿ ಕಾಂಗ್ರೆಸ್​ ಗೆಲ್ಲದಿದ್ರೆ ಗ್ಯಾರಂಟಿ ಸ್ಕೀಮ್ಸ್​​ ನಿಂತು ಹೋಗುತ್ತಾ? ಈ ಬಗ್ಗೆ ಏನಂದ್ರು ಸಿಎಂ?

Share :

Published January 31, 2024 at 8:09pm

    ನಿಮ್ಮ ಮತ ರಾಮನ ಅಕ್ಷತೆ ಕಾಳಿಗಾ, ಪಂಚ ಗ್ಯಾರಂಟಿಗಾ?

    ಲೋಕಸಭೆಯಲ್ಲಿ ‘ಕೈ’ ಹಿಡಿಯದಿದ್ರೆ ಗ್ಯಾರಂಟಿಗಳು ಕ್ಯಾನ್ಸಲ್!

    ಯಾವುದೇ ಕಾರಣಕ್ಕೂ ಸರ್ಕಾರ ಗ್ಯಾರಂಟಿಗಳನ್ನ ನಿಲ್ಲಿಸಲ್ಲ!

ಬೆಂಗಳೂರು: ಲೋಕಸಭಾ ಎಲೆಕ್ಷನ್​​​ ಸಮರಾಭ್ಯಾಸ ನಡುವೆ ಕಾಂಗ್ರೆಸ್​​ ಶಾಸಕ ಬಾಲಕೃಷ್ಣ, ಗ್ಯಾರಂಟಿ ಬ್ಲಾಕ್​ಮೇಲ್​ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲದಿದ್ರೆ ಗ್ಯಾರಂಟಿಗಳು ಸ್ಟಾಪ್​​​ ಆಗುತ್ತೆ ಅಂತ ಹೇಳಿಕೆ ನೀಡಿದ್ದು, ಸಂಚಲನ ಸೃಷ್ಟಿಸಿದೆ. ಇದೇ ಹೇಳಿಕೆ ಸಂಬಂಧ ಕೈ-ಕಮಲ ನಾಯಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಆದ್ರೆ, ಸಿಎಂ ಮಾತ್ರ ಯಾವುದೇ ಕಾರಣಕ್ಕೂ ಐದೂ ವರ್ಷ ಗ್ಯಾರಂಟಿ ಯೋಜನೆ ನಿಲ್ಲಲ್ಲ ಅಂತ ಭರವಸೆ ನೀಡಿದ್ದಾರೆ.

ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯ, ಶಕ್ತಿ, ಯುವ ನಿಧಿ. ಪಂಚ ಗ್ಯಾರಂಟಿಗಳೇ ವಿಧಾನಸಭೆ ಎಲೆಕ್ಷನ್​​ನಲ್ಲಿ ವೋಟಿಂಗ್​​ ಕೆಮೆಸ್ಟ್ರಿ ಬದಲಿಸಿ ಗೆಲುವಿನ ದಾರಿ ತೋರಿದ ಅಸ್ತ್ರಗಳು. ಜನರನ್ನ ಮೋಡಿ ಮಾಡಿದ ಈ ಗ್ಯಾರಂಟಿಗಳು, ಕಾಂಗ್ರೆಸ್​​ಗೆ ಗದ್ದುಗೆ ಸಲೀಸು ಮಾಡಿತ್ತು. ಈಗ ಲೋಕಸಭೆ ಎಲೆಕ್ಷನ್​​ಗೂ ಫಲಾನಭವ ಪಡೆಯಲು ಮುಂದಾಗಿರುವ ಹಸ್ತಪಡೆ, ಗ್ಯಾರಂಟಿ ಯೂಟರ್ನ್​​ಗೂ ಪ್ಲಾನ್​ ರೂಪಿಸಿದ್ಯಾ ಅನ್ನೋ ಚರ್ಚೆ ಶುರುವಾಗಿದೆ. ಈ ಚರ್ಚೆಗೆ ಕಾರಣ ಇದೊಂದು ಹೇಳಿಕೆ.

ಮತದಾರರಿಗೆ ಗ್ಯಾರಂಟಿ ಬ್ಲಾಕ್​​ಮೇಲ್​​ ಮಾಡಿದ್ರಾ ಶಾಸಕ?

ಲೋಕಸಭೆ ಎಲೆಕ್ಷನ್​​​ಗೆ ಇನ್ನೆನೂ ಕೆಲವೇ ದಿನಗಳು ಬಾಕಿ ಇವೆ. ಇದೇ ಹೊತ್ತಲ್ಲೇ ರಾಜ್ಯದಲ್ಲಿ ಗ್ಯಾರಂಟಿ ಸದ್ದು ಶುರುವಾಗಿದೆ. ಲೋಕಸಭೆಯಲ್ಲಿ ಕೈ ಹಿಡಿಯದಿದ್ದರೆ ಗ್ಯಾರಂಟಿಗಳು ಕ್ಯಾನ್ಸಲ್ ಅಂತ ಸ್ವತಃ ಕಾಂಗ್ರೆಸ್​​ ಶಾಸಕನೇ ಗ್ಯಾರಂಟಿ ಬ್ಲಾಕ್​​​ಮೇಲ್​​​ ಬಾಂಬ್​ ಎಸೆದಿದ್ದು, ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಮಾಗಡಿಯ ಶ್ರೀಗಿರಿಪುರದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ, ಯೋಚಿಸಿ ಮತ ಹಾಕಿ ಅಂತ ಮತದಾರರಿಗೆ ತಾಕೀತು ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನ ನಿಲ್ಲಿಸಲ್ಲ!
ಜನರಿಗೆ ಗ್ಯಾರಂಟಿ ಭರವಸೆ ಕೊಟ್ಟ ಸಿಎಂ, ಡಿಸಿಎಂ

ಬಾಲಕೃಷ್ಣ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ಸಿಎಂ ಮತ್ತು ಡಿಸಿಎಂ ಸ್ಪಷ್ಟೀಕರಣ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ಸಿಎಂ, ಸರ್ಕಾರದ ಗ್ಯಾರಂಟಿಗಳು ಮುಂದುವರೆಯುತ್ತೆ ಎಂದ್ರು. ಇತ್ತ, ಬಾಲಕೃಷ್ಣ ಹೇಳಿಕೆಯನ್ನ ಬಿಜೆಪಿಯತ್ತ ತಿರುಗಿಸಿ ಡಿಕೆಶಿ ಸಮರ್ಥಿಸಿದ್ರು.

ಸ್ವತಃ ಸಿಎಂ, ಡಿಸಿಎಂ ಸ್ಪಷ್ಟನೆ ಬಳಿಕ ಶಾಸಕ ಬಾಲಕೃಷ್ಣ ಮಾತ್ರ ಬ್ಲಾಕ್​​​ಮೇಲ್​​ ಅಲ್ಲ, ತಮ್ಮ ಹೇಳಿಕೆಗೆ ಈಗಲೂ ಬದ್ಧ ಅಂತ ಹೇಳಿಕೆ ನೀಡಿದ್ದಾರೆ.

ಬಾಲಕೃಷ್ಣ ಅಲ್ಲ, ಅವನು ಬ್ಲಾಕ್​​ಮೇಲ್​​ ಕೃಷ್ಣ!
ಗ್ಯಾರಂಟಿ ಬೋಗಸ್​​ ಎಂದು ಬಿಜೆಪಿ ವಾಗ್ದಾಳಿ!

ಇನ್ನು, ಗ್ಯಾರಂಟಿ ಬಂದ್​ ಮಾತಿಗೆ ಕೇಸರಿ ಪಡೆ ಕೆಂಡವಾಗಿದೆ.. ಯುದ್ಧಕ್ಕೆ ಮುಂಚೆಯೇ ಕಾಂಗ್ರೆಸ್​ ಸೋಲು ಒಪ್ಪಿಕೊಂಡಿದೆ ಅಂತ ವಿಪಕ್ಷ ನಾಯಕರ ಅಶೋಕ್​​ ವಾಗ್ದಾಳಿ ನಡೆಸಿದ್ರೆ, ಕಾಂಗ್ರೆಸ್ ಭರವಸೆ ಬೋಗಸ್ ಅಂತ ವಿಜಯೇಂದ್ರ ಕಿಡಿಕಾರಿದ್ದಾರೆ.

ಒಟ್ಟಾರೆ, ಲೋಕಸಭೆ ಚುನಾವಣೆ ಹೊತ್ತಲ್ಲೇ ಹೊತ್ತಿದ ಗ್ಯಾರಂಟಿ ಕಿಡಿ, ಆಡಳಿತ-ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಎಲೆಕ್ಷನ್​​ ಫಲಿತಾಂಶದ ಮೇಲೆ ಗ್ಯಾರಂಟಿಗಳ ಭವಿಷ್ಯ ನಿಂತಿದ್ಯಾ ಅನ್ನೋ ಅನುಮಾನ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆಯಲ್ಲಿ ಕಾಂಗ್ರೆಸ್​ ಗೆಲ್ಲದಿದ್ರೆ ಗ್ಯಾರಂಟಿ ಸ್ಕೀಮ್ಸ್​​ ನಿಂತು ಹೋಗುತ್ತಾ? ಈ ಬಗ್ಗೆ ಏನಂದ್ರು ಸಿಎಂ?

https://newsfirstlive.com/wp-content/uploads/2023/12/Cm-Siddaramaiah.jpg

Load More