newsfirstkannada.com

ಪ್ರಬುದ್ಧ ಕೊಲೆ ಕೇಸ್​.. ತಾಯಿ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ; ಪ್ರಕರಣ ಸಿಐಡಿಗೆ ಒಪ್ಪಿಸಿದ ಸಿಎಂ

Share :

Published June 25, 2024 at 7:30am

    ಕತ್ತು, ಕೈ ಕೊಯ್ದುಕೊಂಡ ಸ್ಥಿತಿಯಲ್ಲಿ ಮನೆಯಲ್ಲಿ ಪ್ರಬುದ್ಧ ಪತ್ತೆ

    ಪ್ರಬುದ್ಧಳದು ಆತ್ಮಹತ್ಯೆಯಲ್ಲ ಕೊಲೆ ಅಂತ ಹೇಳಿರುವ ತಾಯಿ

    ಸೆಕೆಂಡ್​ ಪಿಯುಸಿ ಓದುತ್ತಿದ್ದ ಪ್ರಬುದ್ಧಳನ್ನ ಕೊಲೆ ಮಾಡಿದ್ನಾ..?

ಪ್ರಬುದ್ಧ ಸಾವು ಪ್ರಕರಣ.. ಆತ್ಮಹತ್ಯೆ ಅಂತಾನೇ ಹೇಳಲಾಗಿದ್ದ ಕೇಸ್​ನಲ್ಲಿ ಯುವತಿಯ ತಾಯಿ ಟ್ವಿಸ್ಟ್ ಕೊಟ್ಟಿದ್ದರು. ಆಕೆಯದ್ದು ಆತ್ಮಹತ್ಯೆಯಲ್ಲ ಕೊಲೆ ಅಂತ ಹೇಳಿದ್ದರು. ಈ ಬೆನ್ನಲ್ಲೇ ಅಪ್ರಾಪ್ತನಿಂದ ಯುವತಿ ಹತ್ಯೆಗೀಡಾಗಿದ್ದು ಬಯಲಾಗಿತ್ತು. ಈಗ ಈ ಕೇಸ್ ಮತ್ತೆ ಚರ್ಚೆಗೆ ಬಂದಿದೆ. ಕಾರಣ ಸಿಐಡಿ.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಶಾಕ್ ಕೊಟ್ಟ ಕಿಂಗ್ ಕೊಹ್ಲಿ.. ಮತ್ತೊಮ್ಮೆ ಡಕೌಟ್

ಮೇ 15 ರಂದು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಬೃಂದಾವನ ಲೇಔಟ್​ನ ಮನೆಯಲ್ಲಿ ಆಘಾತಕಾರಿ ಘಟನೆ ನಡೆದಿತ್ತು. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಪ್ರಬುದ್ಧಾ ಕತ್ತು ಹಾಗೂ ಕೈ ಕೊಯ್ದುಕೊಂಡ ಸ್ಥಿತಿಯಲ್ಲಿ ಮನೆಯ ಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಸುದ್ದಿ ಕೇಳಿ ವಟಾರದ ಜನ ಬೆಚ್ಚಿ ಬಿದ್ದಿದ್ದರು. ನೋಡ ನೋಡುತ್ತಲೆ ಇದು ಆತ್ಮಹತ್ಯೆ ಅನ್ನೋ ಮಾತು ಕೇಳಿಬಂದಿತ್ತು. ಕೊನೆಗೆ ಗೊತ್ತಾಗಿದ್ದು ಇದು ಕೊಲೆ ಅಂತ.. ಈಗ ಈ ಪ್ರಕರಣದಲ್ಲಿ ಪ್ರಬುದ್ಧ ತಾಯಿಯ ಮನವಿಗೆ ರಾಜ್ಯ ಸರ್ಕಾರ ಮಣಿದಿದೆ.

ಇದನ್ನೂ ಓದಿ: ಜಿಮ್‌ ಟ್ರೈನರ್‌ಗೆ ಕಂಡೀಷನ್ ಹಾಕಿ ಮದುವೆ.. ಫೇಲ್ ಆಗಿದ್ದಕ್ಕೆ ಗಂಡನಿಗೆ ಡಿವೋರ್ಸ್​; ಕಾರಣವೇನು?

ಮೃತಳ ತಾಯಿ ಸಿಎಂಗೆ ಮನವಿ ಹಿನ್ನೆಲೆ ವರ್ಗಾವಣೆ

ಸಿಲಿಕಾನ್ ಸಿಟಿಯ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದ ಪ್ರಬುದ್ಧಳ ಪ್ರಕರಣವನ್ನು ಸರ್ಕಾರ ಸಿಐಡಿಗೆ ನೀಡಿದೆ. ಮೃತಳ ತಾಯಿ ಖುದ್ದು ಸಿಎಂ ಭೇಟಿಯಾಗಿ ಮನವಿ ಮಾಡಿದ ಹಿನ್ನೆಲೆ ಸಿಐಡಿಗೆ ವಹಿಸಲು ಡಿಜಿ&ಐಜಿಪಿ ಅಲೋಕ್ ಮೋಹನ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಪ್ರಬುದ್ಧ ಕೊಲೆ ಪ್ರಕರಣ ಸಿಐಡಿಗೆ!

  • ಪ್ರಬುದ್ಧ ಕತ್ತು, ಕೈ ಕೊಯ್ದುಕೊಂಡ ಸ್ಥಿತಿಯಲ್ಲಿ ಮನೆಯ ಬಾತ್ ರೂಮಿನಲ್ಲಿ ಪತ್ತೆ
  • ಮೃತಳ ತಾಯಿ ಸೌಮ್ಯ.ಕೆ.ಆರ್ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು
  • ಪ್ರಕರಣದ ತನಿಖೆಯಲ್ಲಿ ಲೋಪ, ಪೊಲೀಸರಿಂದ ಪ್ರಕರಣದ ಸಾಕ್ಷಿ ನಾಶ
  • ಆರೋಪಿಗೆ ಬೇಲ್, ತಂದೆ ಬಾರ್ ನಡೆಸುತ್ತಿದ್ದು ಪೊಲೀಸರ ಜೊತೆ ನಿಕಟ ಸಂಪರ್ಕ
  • ಪ್ರಕರಣದ ಸಾಕ್ಷಿ ನಾಶ ಯತ್ನ, ಮಗಳ ಸಾವಿಗೆ ನ್ಯಾಯ ಸಿಗುವುದು ಅನುಮಾನ
  • ಸಿಐಡಿಗೆ ವಹಿಸುವಂತೆ ಪ್ರಬುದ್ಧ ತಾಯಿ‌ ಮನವಿ ಹಿನ್ನೆಲೆ ಪ್ರಕರಣ ಸಿಐಡಿಗೆ ವರ್ಗ

ಇದನ್ನೂ ಓದಿ: ಹೊಡಿಬಡಿ ಬ್ಯಾಟಿಂಗ್ ಮಾಡ್ತಿರೋ ಕ್ಯಾಪ್ಟನ್ ರೋಹಿತ್.. ಹಾಫ್​ಸೆಂಚುರಿ ಸಿಡಿಸಿದ ಹಿಟ್​ ಮ್ಯಾನ್

ಇನ್ನು ಪ್ರಬುದ್ಧಾ ಕೊಲೆಯಾಗಿದ್ಯಾಕೆ ಅನ್ನೋದನ್ನ ನೋಡೋದಾದ್ರೆ..

ಆಡುವಾಗ ಸ್ನೇಹಿತನ ಕನ್ನಡಕ ಮುರಿದಿದ್ದ ಅಪ್ರಾಪ್ತ ರಿಪೇರಿಗಾಗಿ ಪರ್ಸ್​ನಿಂದ 2 ಸಾವಿರ ಹಣ ಕದಿದ್ದ. ಅಪ್ರಾಪ್ತ ಪರ್ಸ್​ನಿಂದ ಹಣ ಕದಿಯುವಾಗ ನೋಡಿದ್ದ ಪ್ರಬುದ್ಧ 2 ದಿನ ಬಿಟ್ಟು ಆ ಹಣವನ್ನ ಕೇಳಿದ್ದಳು. ಈ ಬಗ್ಗೆ ಪೋಷಕರಿಗೆ ತಿಳಿಸದಂತೆ ಗಲಾಟೆ ಮಾಡಿದ್ದ. ಈ ವೇಳೆ ಪ್ರಬುದ್ಧಳನ್ನ ತಳ್ಳಿದ್ದು, ತಲೆ ಗೋಡೆಗೆ ಬಡಿದು ಮೂರ್ಛೆ ಹೋಗಿದ್ದಳು. ಬಳಿಕ ಆಕೆಯನ್ನ ಬಾತ್​ರೂಮ್​ಗೆ ಎಳೆದೊಯ್ದಿದ್ದಾನೆ. ಆಕೆ ಮೃತಪಟ್ಟಿದ ಬಳಿಕ ಮ್ಯಾಟ್​ನಿಂದ ಮನೆಯನ್ನ ಒರೆಸಿದ್ದಾನೆ. ಬಳಿಕ ಚಾಕು ಮತ್ತು ಮ್ಯಾಟ್​ ತೆಗೆದುಕೊಂಡು ಹಿಂಬಾಗಿಲಿನಿಂದ ಎಸ್ಕೇಪ್​ ಆಗಿದ್ದಾನೆ. ಅಷ್ಟೇ ಅಲ್ಲ ಸಾಕ್ಷಿ ನಾಶ ಮಾಡಲು ಪ್ರಬುದ್ಧ ಬಟ್ಟೆ ಮತ್ತು ಮ್ಯಾಟ್​ ಸುಟ್ಟು ಹಾಕಿರೋದು ವಿಚಾರಣೆ ವೇಳೆ ಬಯಲಾಗಿದೆ. ಈ ಹಿಂದೆ ಯುವತಿ 2-3 ಮೂರು ಸಲ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ಆಕೆಯ ತಮ್ಮ ಆ ಅಪ್ರಾಪ್ತನ ಬಳಿ ಹೇಳಿಕೊಂಡಿದ್ದ. ಅದು ಗೊತ್ತಿದ್ದು ಚಾಕುವಿನಿಂದ ಹಳೆಯ ಮಾರ್ಕ್ ಮೇಲೆ ಮತ್ತೇ ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದ.

ಇದನ್ನೂ ಓದಿ: ರೋಹಿತ್ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್​.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್​ಮ್ಯಾನ್

ಕೊಲೆ ನಡೆದ ಸಮಯದಲ್ಲಿ ಪ್ರಬುದ್ಧ ಮನೆ ಬಳಿ ಯಾರ ಓಡಾಟವು ಇರ್ಲಿಲ್ಲ. ಕೊಲೆ ಅನ್ನೊ ಸಣ್ಣ ಸುಳಿವು ಕೂಡ ಇರ್ಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ ಆತ್ಮಹತ್ಯೆ ಅಂತಲೇ ಅಂದುಕೊಂಡಿದ್ರು. ಆದರೆ ದೂರದಲ್ಲಿ ಸಿಕ್ಕ ಅದೊಂದು ಸಿಸಿಟಿವಿ ದೃಶ್ಯ ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. ಸದ್ಯ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು ಪ್ರಬುದ್ಧಳ ಸಾವಿಗೆ ನ್ಯಾಯ ಸಿಗುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಬುದ್ಧ ಕೊಲೆ ಕೇಸ್​.. ತಾಯಿ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ; ಪ್ರಕರಣ ಸಿಐಡಿಗೆ ಒಪ್ಪಿಸಿದ ಸಿಎಂ

https://newsfirstlive.com/wp-content/uploads/2024/05/PRABUDDHA.jpg

Load More