/newsfirstlive-kannada/media/post_attachments/wp-content/uploads/2025/03/HONEY-TRAP.jpg)
ಕಾಂಗ್ರೆಸ್‌ನಲ್ಲಿ ಕುರ್ಚಿ ವಿಚಾರಕ್ಕೆ ಕಿತ್ತಾಟ ನಡೀತಿದೆ. ಅದು ಅಂತಿಮ ಹಂತ ತಲುಪಿದೆ. ಇದ್ರ ಮಧ್ಯೆ ಹನಿಟ್ರ್ಯಾಪ್ ವಿಷಯ ಸದ್ದು ಮಾಡಿದೆ. ಇಲ್ಲಿ ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು? ಅನ್ನೋದು ಸ್ಪಷ್ಟ ಆಗುತ್ತಾ ಹೋಗ್ತಿದೆ. ಇದೀಗ ‘ಹನಿಟ್ರ್ಯಾಪ್ ಕಹಾನಿ ಹೈಕಮಾಂಡ್ ಕಿವಿಗೂ ಬಿದ್ದಿದೆ. ರಾಜಣ್ಣ ಪುತ್ರ ಸಿಎಂನ ಭೇಟಿ ಮಾಡಿ ‘ಹನಿ’ ವರದಿ ಸಲ್ಲಿಸಿದ್ದಾರೆ.
ಇದು ಕಲೆಯ ಬಲೆ.. ಮಕರಂದಕ್ಕಾಗಿ ನಡೆಯುವ ಸಲ್ಲಾಪದ ಸಂಕ್ರಮಣ. ಮಧು ಆಸೆಯ ಬಲೆ ಬೀಸಿದ ವಿಷಕನ್ಯೆಯ ಜಾಲದಿಂದ ಮಧುಗಿರಿ ರಾಜಣ್ಣ ಬಚಾವ್ ಆಗಿದ್ದಾರೆ.. ಮೊನ್ನೆ ವಿಧಾನಸಭೆಯಲ್ಲಿ ಹನಿ ಕಹಾನಿ ಹೇಳಿದ್ದ ರಾಜಣ್ಣ, ರಾಜ್ಯ ರಾಜಕೀಯದಲ್ಲಿ ಹಲ್‌ಚಲ್ ಎಬ್ಬಿಸಿದ್ರು. ಅದರ ಎಫೆಕ್ಟ್ ಈಗ ಹೈಕಮಾಂಡ್ ಅಂಗಳವನ್ನೂ ಮುಟ್ಟಿದೆ.
ಇದನ್ನೂ ಓದಿ:ಕ್ಷೇತ್ರ ಮರುವಿಂಗಡನೆ! ಕೇಂದ್ರ ಸರ್ಕಾರದ ವಿರುದ್ಧದ ಬಹುರಾಜ್ಯ ಒಕ್ಕೂಟಗಳ ಹೋರಾಟಕ್ಕೆ ಕರ್ನಾಟಕ ಬಲ..!
ರಾಜ್ಯದಲ್ಲಿ ಹನಿಟ್ರ್ಯಾಪ್ ಕಹಾನಿ ಭಾರೀ ಹಲ್‌ಚಲ್ ಎಬ್ಬಿಸಿದೆ. ಹನಿ ತಿಂದವರ ಕಹಾನಿ. ಹನಿ ಬಲೆ ಬೀಸಿದವರ ಕುತಂತ್ರದ ಅನಾವರಣ ಆಗುತ್ತಿದೆ. ಸದನದಲ್ಲಿ ಸದ್ದು ಮಾಡಿದ್ದ ಜೇನಿನ ಜಾಲ ಬೀಸಿದವರ ರಣತಂತ್ರವೀಗ ಹೈಕಮಾಂಡ್ ಕಿವಿಗೂ ಬಿದ್ದಿದೆ. ರಾಜ್ಯದಲ್ಲಿ ನಡೀತಿರೋ ಹನಿಟ್ರ್ಯಾಪ್ ಕಹಾನಿಯನ್ನ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್‌ಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದಿರೋ ಹನಿಟ್ರ್ಯಾಪ್ ವಿಚಾರದ ಬಗ್ಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾಹಿತಿ ಪಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್‌ಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಸದ್ಯ ನಡೀತಿರೋ ಹನಿಟ್ರ್ಯಾಪ್ ಚರ್ಚೆಯ ಬಗ್ಗೆ ಹೈಕಮಾಂಡ್ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಸದನದಲ್ಲಿ ನಡೆದ ಮಾಹಿತಿಯನ್ನೇ ಸಿದ್ದರಾಮಯ್ಯ, ವೇಣುಗೋಪಾಲ್‌ಗೆ ತಿಳಿಸಿದ್ದಾರೆ.
ಕೆ.ಎನ್. ರಾಜಣ್ಣ ಪುತ್ರ ರಾಜೇಂದ್ರ ಸಿಎಂ ಭೇಟಿ
ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎನ್. ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರಗೆ ಬುಲಾವ್ ನೀಡಿದ್ರು. ಅದರಂತೆ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ ರಾಜೇಂದ್ರ, ದಾಖಲೆಗಳ ಸಮೇತ ಸಿಎಂಗೆ ವಿವರಣೆ ನೀಡಿದ್ದಾರೆ. ಇದೇ ವೇಳೆ ಡಿಜಿಗೆ ದೂರು ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ ಅಂತ ತಿಳಿದುಬಂದಿದೆ. ಅಲ್ಲದೇ ಮತ್ತೊಮ್ಮೆ ಸಿಎಂನ ಭೇಟಿಯಾಗಿ ಹನಿಟ್ರ್ಯಾಪ್ ಬಗ್ಗೆ ದೂರು ನೀಡಲು ರಾಜೇಂದ್ರ ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಬಡ ಮನುಷ್ಯ ಅಣ್ಣಾಮಲೈ.. ತಮಿಳುನಾಡಿನಲ್ಲಿ ‘ಕಿಚ್ಚು’ ಹಚ್ಚಿದ ಡಿ.ಕೆ ಶಿವಕುಮಾರ್; ಹೇಳಿದ್ದೇನು?
ಸಿಎಂ ಭೇಟಿ ಬಳಿಕ ಮಾತನಾಡಿದ ಆರ್. ರಾಜೇಂದ್ರ, ಹನಿಟ್ರಾಪ್ ವಿಚಾರದಲ್ಲಿ ಏನೆಲ್ಲ ಹಿನ್ನೆಲೆ ಇದೆ ಅಂತ ಸಿಎಂಗೆ ಮಾಹಿತಿ ನೀಡಿದ್ದೇನೆ. ಎಲ್ಲರ ಮನೆಯಲ್ಲೂ ಹೆಣ್ಣು ಮಕ್ಕಳು ಇದ್ದಾರೆ. ಯಾರ ಮೇಲೂ ಈ ತರ ಆಗಬಾರದು. ತನಿಖೆಯಾದ್ರೆ ಎಲ್ಲ ಹೊರಗೆ ಬರಲಿದೆ ಅಂತ ರಾಜೇಂದ್ರ ಕಿಡಿಕಾರಿದ್ದಾರೆ.
48 ಜನ ಮಿಡ್ನೈಟ್ ಮೀಲ್ಸ್ ಸವಿದವರು ಯಾರು ಅನ್ನೋದು ಆ ಹನಿ ಡೈರೆಕ್ಟರ್ಗೆ ಗೊತ್ತು. ಅದ್ಯಾರು ಮಾಂಸದಂಧೆ ಬಾಡೂಟ ಉಂಡೆದ್ರೋ ಏನೋ? ಆದ್ರೆ, ಪದೇ ಪದೆ ರಾಜ್ಯದ ಮಾನ ಸಿಡಿಯಲ್ಲಿ ಹೋಗ್ತಿದೆ.. ಈ ಅನೈತಿಕ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ