ಒಂದು ಸೀಟಿನ ಸುತ್ತ ನಾಯಕರ ಮ್ಯೂಸಿಕಲ್​​ ರೌಂಡ್ಸ್​; ಸತೀಶ್ ಜಾರಕಿಹೊಳಿ ಇಟ್ಟ ಡಿಮ್ಯಾಂಡ್ ಏನು?

author-image
Ganesh
Updated On
ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಬಿಗ್​ ಫೈಟ್​​; ನಾನು ಆಕಾಂಕ್ಷಿ ಎಂದ ಸತೀಶ್​ ಜಾರಕಿಹೊಳಿ
Advertisment
  • ಡೆಲ್ಲಿ ಅಂಗಳದಲ್ಲಿ ಗರಿಗೆದರಲಿದ್ಯಾ ಪವರ್​​​ ಪಾಲಿಟಿಕ್ಸ್
  • ಸಿಎಂ ಸಿದ್ದು ನಿವಾಸದಲ್ಲಿ ಗರಿಗೆದರಿದ ರಾಜಕೀಯ
  • ರಾಜಕೀಯ ಜಂಜಾಟ ಮರೆತು ಕ್ರಿಕೆಟ್​​ ಆಡಿದ ಜಾರಕಿಹೊಳಿ

ರಾಜ್ಯ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧ, ಭಿನ್ನಾಭಿಪ್ರಾಯ, ಪವರ್​​ ಶೇರಿಂಗ್​​ ಫೈಟ್​​ ತಾರಕಕ್ಕೇರಿದೆ. ಹೊತ್ತಿದ ಬೆಂಕಿ ಸದ್ಯಕ್ಕೆ ಶಮನ ಆಗಿದ್ರೂ ಪೂರ್ತಿ ಆರಿಲ್ಲ ಅನ್ನೋದೇ ಸತ್ಯ. ಈ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ತೀವ್ರ ಕುತೂಹಲ ಮೂಡಿಸಿದೆ.

ಒಂದು ಸೀಟಿನ ಸುತ್ತ ನಾಯಕರ ಮ್ಯೂಸಿಕಲ್​​ ರೌಂಡ್

ದೆಹಲಿಯಲ್ಲಿ ಎಐಸಿಸಿ ಕಾರ್ಯಕ್ರಮ ಇದೆ.. ಹೆಡ್​ಕ್ವಾರ್ಟರ್ಸ್ ಇಂದಿರಾಗಾಂಧಿ ಭವನ ಉದ್ಘಾಟನೆ ಇದೆ.. ಅದಕ್ಕೂ ಮುಖ್ಯವಾಗಿ ಹೈಕಮಾಂಡ್ ನಾಯಕರನ್ನ ಈ ಇಬ್ಬರೂ ಪ್ರತ್ಯೇಕ ಭೇಟಿ ಆಗುವ ಸಾಧ್ಯತೆ ಇದೆ. ಈ ವೇಳೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ.. ಇಂಟ್ರಸ್ಟಿಂಗ್​​ ಅಂದ್ರೆ ಮೊನ್ನೆ ಸಭೆಗಳಿಗೆ ಚಕ್ಕರ್​​​ ಆಗಿದ್ದ ಗೃಹ ಸಚಿವ ಪರಮೇಶ್ವರ್ ಸಹ ದೆಹಲಿಗೆ ತೆರಳ್ತಿದ್ದಾರೆ ಅಂತ ಗೊತ್ತಾಗಿದೆ. ಹೀಗಾಗಿ ಸಿದ್ದು-ಡಿಕೆಶಿ-ಪರಂ ದೆಹಲಿ ಯಾತ್ರೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ‘ಲಕ್ಕಿ’ ಕಾರು ಅಪಘಾತ; ಅಸಲಿಗೆ ಆಗಿದ್ದೇನು? ಚನ್ನರಾಜ್ ಹಟ್ಟಿಹೊಳಿ ಏನಂದ್ರು?

publive-image

ಡೆಲ್ಲಿಗೆ ಹೋಗುವ ಮುನ್ನ ಗರಿಗೆದರಿದ ರಾಜಕೀಯ

ಸಿಎಂ ಡೆಲ್ಲಿಗೆ ಹೋಗುವ ಮುನ್ನ ಫುಲ್ ಬ್ಯುಸಿಯಾಗಿದ್ರು. ಕೆಪಿಸಿಸಿ ಅಧ್ಯಕ್ಷರ ನೇಮಕ, ಪವರ್​​​ ಫೈಟ್​​, ಸಂಪುಟ ಪುನಾರಚನೆ.. ಹತ್ತಾರು ಸುದ್ದಿಗಳ ನಡುವೆ ಸಿದ್ದರಾಮಯ್ಯ ನಿವಾಸ ಹಬ್ಬದ ದಿನವೂ ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಿತ್ತು.. ಹಲವು ಸಚಿವರು ಸಿದ್ದರಾಮಯ್ಯರನ್ನ ಭೇಟಿಯಾದ್ರು.. ಎಂ.ಬಿ.ಪಾಟೀಲ್​, ಬೈರತಿ ಸುರೇಶ್​​ ಭೇಟಿ ಕೊಟ್ಟು ಮರಳಿದ್ರು. ಸತೀಶ್ ಜಾರಕಿಹೊಳಿ ಸಹ ಸಿಎಂ ನಿವಾಸಕ್ಕೆ ಬಂದು 30 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ರೆಕ್ಕೆಪುಕ್ಕ ಹುಟ್ಕೊಂಡ್ವು.. ಮೊನ್ನೆ ಸಿಎಲ್​ಪಿಯಲ್ಲಿ ವೈಲೆಂಟ್​​ ಆಗಿದ್ದ ಸೈಲೆಂಟ್​​ ಸತೀಶ್​​, ಬಳಿಕ ಸುರ್ಜೇವಾಲ ಮುಂದೆ ಡಿಮ್ಯಾಂಡ್​​ ಮುಂದಿಟ್ಟಿದ್ದಾರೆ.

ಕೆಪಿಸಿಸಿ ಸಾರಥಿ ಸ್ಥಾನಕ್ಕೆ ಡಿಮ್ಯಾಂಡ್​​​!

  • ಸುರ್ಜೇವಾಲಾ ಮುಂದೆ ಸತೀಶ್​​​ ಜಾರಕಿಹೊಳಿ, ಕೆಪಿಸಿಸಿ ಬೇಡಿಕೆ
  • ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಕೇಳಿದ ಸಚಿವ ಜಾರಕಿಹೊಳಿ
  • ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ರೆ ಪಕ್ಷವನ್ನ ಗೆಲ್ಲಿಸಿಕೊಂಡು ಬರುತ್ತೇನೆ
  • ತನ್ನ ಬೆನ್ನಿಗೆ ನಿಂತಿರುವ ಶಾಸಕರ ಪಟ್ಟಿಯನ್ನ ನೀಡಿರುವ ಸತೀಶ್​

ಪಾಲಿಟಿಕ್ಸ್​​ನಲ್ಲಿ ಬಿಸಿ ಆಗಿರುವ ಸತೀಶ್​​ ಜಾರಕಿಹೊಳಿ ನ್ಯೂಬಿಇಎಲ್ ರಸ್ತೆಯಲ್ಲಿರುವ ಕ್ರಿಕೆಟ್ ಮೈದಾನದಲ್ಲಿ ಬಿಂದಾಸ್ ಆಗಿ ಬ್ಯಾಟ್​​​ ಬೀಸಿದ್ರು. ಬೌನ್ಸರ್​​​ಗೆ ಹುಕ್​​​ ಮಾಡಿದ ಸತೀಶ್​​​ ಆಟ ಬೆರಗಾಗಿಸ್ತು. ಸತೀಶ್​​ಗೆ ಸಚಿವ ಲಾಡ್, ಶಾಸಕ ಅನಿಲ್ ಚಿಕ್ಕಮಾದು ಸಾಥ್​​ ಕೊಟ್ರು. ಅಲ್ಲಿ ಚದುರಂಗ.. ದಾಳ ಉರುಳಿಸಿದ್ರೆ ಅಧಿಕಾರ.. ಇಲ್ಲಿ ಎದುರಾಳಿ ಬೌಲರ್​​​ನ್ನ ನಿರ್ದಯವಾಗಿ ದಂಡಿಸಿದ್ರೆ ಮಾತ್ರ ಶತಕ. ಆಟ ಯಾವುದಾದ್ರೆನೋ ಎದುರಾಳಿ ಗುಹೆಗೆ ನುಗ್ಗಿದ್ರೆ ಮಾತ್ನ ಗೆಲುವಿನ ಸಂಭ್ರಮ.

ಇದನ್ನೂ ಓದಿ: ದಕ್ಷಿಣ ಭಾರತದ ಕುಂಭ ಎಂದೇ ಪ್ರಖ್ಯಾತಿ.. ಗವಿ ಸಿದ್ದೇಶ್ವರ ಜಾತ್ರೆಗೆ ಎಷ್ಟು ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment