/newsfirstlive-kannada/media/post_attachments/wp-content/uploads/2025/06/Siddaramaiah-on-mango-andhra-cm.jpg)
ಬೆಂಗಳೂರು: ಕರ್ನಾಟಕದ ತೋತಾಪುರಿ ಮಾವಿಗೆ ಆಂಧ್ರದ ಚಿತ್ತೂರು ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ. ಇದರಿಂದ ತೋತಾಪುರಿ ಮಾವಿನ ಬೆಲೆ ಕುಸಿದು ಬಿದ್ದಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ನಿರ್ಬಂಧ ಹಿನ್ನೆಲೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ತೋತಾಪುರಿ ಮಾವಿಗೆ ವಿಧಿಸಿರುವ ನಿರ್ಬಂಧ ಹಿಂಪಡೆಯಲು ಆಂಧ್ರಪ್ರದೇಶ ಸಿಎಂಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಚಿತ್ತೂರು ಜಿಲ್ಲಾಧಿಕಾರಿ ಕರ್ನಾಟಕದ ತೋತಾಪುರಿ ಮಾವು ನಿರ್ಬಂಧ ಹೇರಿದ್ದಾರೆ. ಇದರಿಂದ ಕರ್ನಾಟಕ ಗಡಿಭಾಗದ ಮಾವು ಬೆಳೆದ ರೈತರಿಗೆ ತೊಂದರೆ ಉಂಟು ಮಾಡಿದೆ. ಹೀಗಾಗಿ ಈ ನಿರ್ಬಂಧವನ್ನ ತೆರವುಗೊಳಿಸಿ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಪತ್ರ ಕೋರಿದ್ದಾರೆ.
ಇದಕ್ಕೂ ಮುಂಚೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆಂಧ್ರಪ್ರದೇಶ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಕಳೆದ ಜೂನ್ 7ರಂದು ಚಿತ್ತೂರು ಡಿಸಿ ಅನ್ಯರಾಜ್ಯಗಳ ತೋತಾಪುರಿ ಮಾವು ನಿಷೇಧ ಮಾಡಿದ್ದಾರೆ. ಕರ್ನಾಟಕದ ಗಡಿಯಲ್ಲಿ ಹೆಚ್ಚು ತೋತಾಪುರಿ ಬೆಳೆಯಲಾಗುತ್ತಿದೆ. ಈ ಭಾಗದ ರೈತರಿಗೆ ಚಿತ್ತೂರು ಮಾರುಕಟ್ಟೆ ಮುಖ್ಯ ಪ್ರದೇಶ. ಡಿಸಿ ಅವರ ಈ ನಿರ್ಧಾರ ನೆರೆ ರಾಜ್ಯಗಳ ರೈತರಿಗೆ ಬೆದರಿಕೆಯೊಡ್ಡುವ ರೀತಿ ಇದೆ. ರೈತರಿಗೆ ಆರ್ಥಿಕ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಬಹುದು.
ಇದನ್ನೂ ಓದಿ: ಕಾಲ್ತುಳಿತ ಸಂತ್ರಸ್ತರಿಗೆ ಪರಿಹಾರ ಘೋಷಿಸಿ ಸೈಲೆಂಟ್ ಆದ RCB, KSCAನಲ್ಲೂ ಗೊಂದಲ; ಕಾರಣವೇನು?
ಈ ನಡೆಯಿಂದ ಕರ್ನಾಟಕದ ರೈತರು ಆಂಧ್ರಪ್ರದೇಶದ ತರಕಾರಿಗಳನ್ನ ತಡೆಯಬಹುದು ಎಂಬ ಆತಂಕ ಇದೆ. ಹಾಗಾಗಿ, ಸರ್ಕಾರ ಈ ವಿಚಾರದಲ್ಲಿ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಶಾಲಿನಿ ರಜನೀಶ್ ಅವರು ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿ ಕೆ.ವಿಜಯಕುಮಾರ್‌ಗೆ ಮನವಿ ಮಾಡಿದ್ದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಮನವಿ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಸಹ ಪತ್ರದ ಮೂಲಕ ನೇರವಾಗಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ