/newsfirstlive-kannada/media/post_attachments/wp-content/uploads/2024/12/SWABHIMAN-SAMAVESH.jpg)
ಹಾಸನ ಅಂದ್ರೆ ದಳಪತಿಗಳ ಭದ್ರಕೋಟೆ. ಗೌಡರ ಕುಟುಂಬದ ಹಿಡಿತದಲ್ಲಿರೋ ಅಖಾಡ. ಆದ್ರೆ ಮೊನ್ನೆ ನಡೆದ ಉಪ ಸಮರದಲ್ಲಿ ದಳ ಭದ್ರಕೋಟೆಯನ್ನೇ ಕಾಂಗ್ರೆಸ್​ ಛಿದ್ರಗೊಳಿಸಿದೆ. ಸೈನಿಕನ ಮೂಲಕ ಬ್ರಹ್ಮಾಸ್ತ್ರ ಹೂಡಿ ಕೋಟೇ ಕಬ್ಜಾ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಸದ್ಯ ಹಾಸನ ಜಿಲ್ಲೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ವಾಭಿಮಾನ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ.
/newsfirstlive-kannada/media/post_attachments/wp-content/uploads/2024/12/SWABHIMAN-SAMAVESH-1.jpg)
ಸಿದ್ದರಾಮಯ್ಯ.. ಕರ್ನಾಟಕ ಕಾಂಗ್ರೆಸ್​ನ ಶಕ್ತಿ.. ಮುಡಾ ಮುಳ್ಳು ಚುಚ್ಚಿ ಕ್ಲೀನ್​ ಹ್ಯಾಂಡ್​ಗೆ ಕೆಸರು ರಾಚಿದ್ರೂ ಅದನ್ನೆಲ್ಲ ಕೊಡವಿ ಮೇಲಕ್ಕೆದ್ದ ನಾಯಕ.. ಹೀಗಾಗಿ ಗೌಡರ ಭದ್ರಕೋಟೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಶುದ್ದರಾಮಯ್ಯ ಸಜ್ಜಾಗಿದ್ದಾರೆ.
ಇದನ್ನೂ ಓದಿ:ಸಿಎಂ ಸೀಟು ಹಂಚಿಕೆಯ ಒಪ್ಪಂದ ಆಗಿದ್ಯಾ? ಸಿದ್ದು ಮಾತಿಗೆ ಜೈ ಅಂದ ಡಿಕೆಶಿ; ಹೇಳಿದ್ದೇನು?
ಇಂದು ಕಾಂಗ್ರೆಸ್ ಸಮಾವೇಶಕ್ಕೆ ಸಜ್ಜಾದ ಹಾಸನ
ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಗೆದ್ಮೇಲೆ ಸಿದ್ದರಾಮಯ್ಯ ಬಲ ಹೆಚ್ಚಾಗಿದೆ. ಹೀಗಾಗಿ ಹಾಸನದಲ್ಲಿ ಸಮಾವೇಶ ಮಾಡಲು ಕೈ ಪಡೆ ಮುಂದಾಗಿದೆ. ಈ ಮೂಲಕ ಬಲ, ವರ್ಚಸ್ಸನ್ನ ರಾಜ್ಯಕ್ಕೆ ಹಬ್ಬಿಸಲು ತಂತ್ರ ಹೆಣೆಯಲಾಗಿದೆ. ಇಂದು ನಡೆಯುವ ಈ ಶಕ್ತಿ ಪ್ರದರ್ಶನಕ್ಕೆ ಬೃಹತ್ ವೇದಿಕೆ ಸಜ್ಜಾಗಿದೆ. ಹಾಸನದ ಅರಸೀಕೆರೆ ರಸ್ತೆಯ ಎಸ್.ಎಂ ಕೃಷ್ಣ ನಗರ ಬಡಾವಣೆಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. 60 ರಿಂದ 70 ಸಾವಿರ ಜನರು ಕೂರಲು ಬೇಕಾದ ಆಸನ ವ್ಯವಸ್ಥೆ ಇದೆ. ಸಮಾವೇಶಕ್ಕಾಗಿ ಮೂರು ವೇದಿಕೆ ನಿರ್ಮಾಣ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/12/SWABHIMAN-SAMAVESH-2.jpg)
ಸಿಎಂ ಡಿಸಿಎಂ ಹಾಗು ಸಚಿವರು, ಹಿರಿಯ ನಾಯಕರಿಗಾಗಿ ಪ್ರಧಾನ ವೇದಿಕೆ ಸಿದ್ಧವಾಗಿದೆ. ವೇದಿಕೆಯ ಎಡ ಹಾಗು ಬಲ ಬದಿಯಲ್ಲಿ ನೂರಾರು ಆಸನ ವ್ಯವಸ್ಥೆಯ ಪರ್ಯಾಯ ವೇದಿಕೆಯೂ ಇದೆ. ಶಾಸಕರು, ಮಾಜಿ ಸಚಿವರು, ಹಾಗು ವಿವಿಧ ಸಂಘಟನೆಗಳ ನಾಯಕರಿಗಾಗಿ ಎರಡು ವೇದಿಕೆ ನಿರ್ಮಾಣ ಮಾಡಲಾಗಿದೆ. ಮಧ್ಯಾಹ್ನ ಕಾಂಗ್ರೆಸ್ ಸಮಾವೇಶ ಆರಂಭವಾಗಲಿದೆ. ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಜನ ಕಲ್ಯಾಣ ಸಮಾವೇಶ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕಾಂಗ್ರೆಸ್​ನ ಅಗ್ರಗಣ್ಯ ನಾಯಕರು ಭಾಗಿಯಾಗಲಿದ್ದಾರೆ. ಸಮಾವೇಶಕ್ಕಾಗಿ ಕೈ ಪಡೆ ಸಕಲ ರೀತಿಯಲ್ಲಿ ಸಜ್ಜಾಗಿದ್ದು ಎಲ್ಲೆಡೆ ಬೃಹತ್ ಕಟೌಟ್ ಗಳು, ಸಾವಿರಾರು ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಸಮಾವೇಶ ನಡೆಯೊ ರಸ್ತೆಯ ಎರಡು ಕಡೆ ಕೈ ನಾಯಕರ ಪ್ಲೆಕ್ಸ್, ಬ್ಯಾನರ್ ರಾರಾಜಿಸುತ್ತಿವೆ ಒಟ್ಟಾರೆ ರಾಜ್ಯದಲ್ಲಿ ಅಹಿಂದ ಕೋಟೆಯನ್ನ ಮತ್ತಷ್ಟು ಸ್ಟ್ರಾಂಗ್ ಮಾಡುವತ್ತ ಸಿದ್ದರಾಮಯ್ಯ ದಾಪುಗಾಲಿಟ್ಟಿದ್ದಾರೆ. ದಳಪತಿಗಳ ಕೋಟೆ ಹಾಸನದಲ್ಲಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us