Advertisment

’ಅವಳು ಲವ್ಲಿ ಅಲ್ಲವೇ‘ ನಟಿ ಅದಿತಿ ರಾವ್ ಹೈದರಿ ಹುಟ್ಟು ಹಬ್ಬಕ್ಕೆ ಶುಭಕೋರಿದ ನಟ ಸಿದ್ದಾರ್ಥ್​.. ಪೋಸ್ಟ್​ ವೈರಲ್​

author-image
Veena Gangani
Updated On
’ಅವಳು ಲವ್ಲಿ ಅಲ್ಲವೇ‘ ನಟಿ ಅದಿತಿ ರಾವ್ ಹೈದರಿ ಹುಟ್ಟು ಹಬ್ಬಕ್ಕೆ ಶುಭಕೋರಿದ ನಟ ಸಿದ್ದಾರ್ಥ್​.. ಪೋಸ್ಟ್​ ವೈರಲ್​
Advertisment
  • 37ನೇ ವರ್ಷಕ್ಕೆ ಕಾಲಿಟ್ಟಿರುವ ಬಾಲಿವುಡ್​ ನಟಿ ಅದಿತಿ ರಾವ್ ಹೈದರಿ
  • ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಫ್ಯಾನ್ಸ್​ಗಳಿಂದ ಶುಭಾಶಯ ಮಹಾಪೂರ
  • ನಟಿ ಅದಿತಿ ರಾವ್ ಹೈದರಿ ಬರ್ತ್​ಡೇಗೆ ಡಿಫರೆಂಟ್​ ಆಗಿ ವಿಶ್​ ಮಾಡಿದ ನಟ ಸಿದ್ಧಾರ್ಥ್

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 37ನೇ ವರ್ಷಕ್ಕೆ ಕಾಲಿಟ್ಟಿರುವ ನಟಿ ಅದಿತಿ ರಾವ್ ಹೈದರಿ ಅವರಿಗೆ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಇನ್ನೂ ನಟಿ ಅದಿತಿ ರಾವ್ ಹೈದರಿ ಅವರ ಹುಟ್ಟು ಹಬ್ಬಕ್ಕೆ ನಟ ಸಿದ್ಧಾರ್ಥ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

Advertisment

ನಟ ಸಿದ್ಧಾರ್ಥ್ ಶೇರ್​ ಮಾಡಿಕೊಂಡ ಫೋಟೋದಲ್ಲಿ ನಟಿ ಅದಿತಿ ರಾವ್ ಹೈದರಿ ಅವರ ಪಕ್ಕದಲ್ಲೇ ಕುಳಿತುಕೊಂಡು ಫೋಟೋಗೆ ಪೋಸ್​​ ನೀಡಿದ್ದಾರೆ. ಈ ಫೋಟೋ ಜೊತೆಗೆ ಅವಳು ಸುಂದರವಲ್ಲವೇ? ಜನ್ಮದಿನದ ಶುಭಾಶಯಗಳು ಸಂಗಾತಿ ಆಗಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಮುಖದಲ್ಲಿ ನಗುವಿಗಾಗಿ ಎಲ್ಲರೂ ಕಾಯುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಫೋಸ್ಟ್​ ಸಾಮಾಹಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ಫೋಟೋವನ್ನು ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ. ನೀವಿಬ್ಬರು ಚೆನ್ನಾಗಿದ್ದೀರಾ, ಒಳ್ಳೆಯ ಜೋಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಅದಿತಿ ಮತ್ತು ಸಿದ್ಧಾರ್ಥ್ 2021ರ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ಮಹಾ ಸಮುದ್ರಂನಲ್ಲಿ ಸಹ ನಟಿಸಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment