/newsfirstlive-kannada/media/post_attachments/wp-content/uploads/2025/05/cold-water.jpg)
ಈ ಬಾರಿಯಂತೂ ಬಿಸಿಲಿನ ಅಬ್ಬರ ಬಲು ಜೋರಾಗಿದ್ದು, ಸೆಕೆ, ಉರಿ ಬಿಸಿಲಿನ ಶಾಖದಿಂದ ಜನ ಹೈರಾಣಾಗಿ ಹೋಗಿದ್ದಾರೆ. ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ ಕಾಣಿಸಿಕೊಳ್ಳುವುದು, ಬಾಡಿ ಹೀಟ್ ಕಾಣಿಸಿಕೊಳ್ಳುವುದು ಸಾಮಾನ್ಯ.
ಇದನ್ನೂ ಓದಿ:ಕದನ ವಿರಾಮದ ಕಳ್ಳಾಟ.. ಪಾಕ್ ಒಪ್ಪಿಕೊಂಡಿದ್ದೇಕೆ? ಉಲ್ಲಂಘನೆ ಮಾಡಿದ್ದೇಕೆ? ಸಂಪೂರ್ಣ ವಿವರ ಇಲ್ಲಿದೆ
ಹೆಚ್ಚಿನ ಜನರು ಈ ಬೇಸಿಗೆ ಬಂತೆಂದರೆ ಸಾಕು ಉರಿ ಬಿಸಿಲಿನ ಶಾಖದಿಂದ ರಕ್ಷಿಸಿಕೊಳ್ಳಲು ಎಳನೀರು, ನೀರು, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಪಾನೀಯಗಳನ್ನು ಸೇವನೆ ಮಾಡುತ್ತಾರೆ. ಬೇಸಿಗೆಯಲ್ಲಿ ಬಿಸಿಲಿನ ಶಾಖ ಹೆಚ್ಚಾದಂತೆ ಜನರು ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಆದರೆ ಬೇಸಿಗೆಯಲ್ಲಿ ಅತಿಯಾಗಿ ತಣ್ಣೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ ಅಂತ ನಿಮಗೆ ಗೊತ್ತಾ?
ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ..!
ತಣ್ಣೀರು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಆಹಾರದಿಂದ ಕೊಬ್ಬನ್ನು ಗಟ್ಟಿಗೊಳಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಊಟ ಮಾಡುವಾಗ ಅಥವಾ ನಂತರ ನಿಯಮಿತವಾಗಿ ತಣ್ಣೀರು ಕುಡಿದರೆ ಹೊಟ್ಟೆ ಉಬ್ಬರ, ಅಜೀರ್ಣ, ಹೊಟ್ಟೆ ಸೆಳೆತ ಉಂಟಾಗಬಹುದು.
ಗಂಟಲು ನೋವು ಬರಬಹುದು..!
ಬೇಸಿಗೆಯಲ್ಲಿ ತಣ್ಣೀರು ಕುಡಿಯುವುದರಿಂದ ತಕ್ಷಣವೇ ಶೀತ ಬರಬಹುದು ಇದರಿಂದ ಗಂಟಲು ನೋವು ಹಾಗೂ ಶೀತ ಉಂಟಾಗುತ್ತದೆ.
ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ..!
ತುಂಬಾ ತಣ್ಣೀರು ಕುಡಿಯುವುದರಿಂದ ವೇಗಸ್ ನರವು ಉತ್ತೇಜಿಸುತ್ತದೆ, ಇದು ಹೃದಯ ಬಡಿತ ಸೇರಿದಂತೆ ಅನೇಕ ದೈಹಿಕ ಕಾರ್ಯಗಳಿಗೆ ಕಾರಣವಾಗಿದೆ. ಕೆಲವು ಜನರಲ್ಲಿ, ಇದು ಹೃದಯ ಬಡಿತದಲ್ಲಿ ಸ್ವಲ್ಪ ಇಳಿಕೆಗೆ ಕಾರಣವಾಗಬಹುದು. ಹೀಗಾಗಿ ಮಿತವಾಗಿ ಬೇಸಿಗೆ ಸಮಯದಲ್ಲಿ ತಣ್ಣೀರು ಕುಡಿಯಿರಿ, ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ