ಖರ್ಜೂರ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು.. ಇವರು ತಿನ್ನಲೇಬಾರದಾ..?

author-image
Bheemappa
Updated On
ಖರ್ಜೂರ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು.. ಇವರು ತಿನ್ನಲೇಬಾರದಾ..?
Advertisment
  • ಇವರ ಆರೋಗ್ಯಕ್ಕೆ ಮಾತ್ರ ಹಾನಿ ಉಂಟು ಮಾಡುವ ಖರ್ಜೂರ
  • ಖರ್ಜೂರವನ್ನು ಯಾರು ಯಾರು ತಿನ್ನಬಾರದು, ಇಲ್ಲಿದೆ ಮಾಹಿತಿ
  • ಈ ಒಣ ಹಣ್ಣು, ಕೆಲವು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ

ಖರ್ಜೂರ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಆಯಾಗುತ್ತವೆ. ಸರಿಯಾದ ಪ್ರಮಾಣದಲ್ಲಿ ಇದನ್ನು ನಮ್ಮ ಆಹಾರದ ಜೊತೆ ತಿನ್ನುತ್ತ ಇದ್ರೆ, ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಈ ಒಣ ಹಣ್ಣು, ಕೆಲವು ಜನರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾರಿಗೆ, ಹೇಗೆ ಖರ್ಜೂರ ಅಡ್ಡಪರಿಣಾಮ ಬೀರುತ್ತೆ ಎಂದರೆ..

ಯಾರೇ ಆಗಲಿ ಮೂತ್ರಪಿಂಡ (ಕಿಡ್ನಿ) ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ರೆ, ಈ ಖರ್ಜೂರವನ್ನು ಸೇವನೆ ಮಾಡಬಾರದು. ತಿನ್ನಬೇಕು ಎಂದರೆ ಆರೋಗ್ಯ ತಜ್ಞರಿಂದ ಮಾಹಿತಿ ಪಡೆದುಕೊಂಡು ನಂತರವೇ ಬೇಕಾದಷ್ಟು ಅಷ್ಟೇ ಸೇವನೆ ಮಾಡಬೇಕು. ಹೆಚ್ಚಿನ ಖರ್ಜೂರ ತಂದರೆ ದೇಹದ ತೂಕ ಹೆಚ್ಚಾಗುತ್ತದೆ. ಬೊಜ್ಜು ಕರಗಿಸುವವರು ಇದರಿಂದ ದೂರು ಇರುವುದು ಒಳ್ಳೆಯದು.

ಇದನ್ನೂ ಓದಿ:ಹ್ಯಾಟ್ರಿಕ್​ ಸೋಲಿನಿಂದ ಮುಂಬೈ ಇಂಡಿಯನ್ಸ್ ಪಾರು​.. ಹಾರ್ದಿಕ್​ ಪಾಂಡ್ಯ ಪಡೆಗೆ ಮೊದಲ ಗೆಲುವು

publive-image

ಮಹಿಳೆಯರು ಗರ್ಭಾವಸ್ಥೆಯಲ್ಲಿ ಆಹಾರದ ಬಗ್ಗೆ ಗಮನ ಹರಿಸುವುದು ಅತ್ಯಂತ ಮುಖ್ಯ ಆಗಿರುತ್ತದೆ. ಗರ್ಭಿಣಿಯರು ಹೆಚ್ಚು ಖರ್ಜೂರ ತಿನ್ನಬಾರದು. ಸೇವಿಸಲು ಇಷ್ಟವಾಗಿದ್ದರೇ ಯಾವುದಕ್ಕೂ ವೈದ್ಯರನ್ನು ಸಂಪರ್ಕಿಸಿದ ಮೇಲೆ ನಿರ್ಧಾರ ಮಾಡಬೇಕು.

ಮಧುಮೇಹ ಅಥವಾ ಡಯಾಬಿಟಿಸ್ ಇರುವ ವ್ಯಕ್ತಿಗಳು ನಿಯಮಿತವಾಗಿ ಖರ್ಜೂರ ತಿನ್ನಬಾರದು. ಖರ್ಜೂರದಲ್ಲಿ ನೈಸರ್ಗಿಕವಾಗಿಯೇ ಸಕ್ಕರೆ ಅಂಶಗಳಾದ ಸುಕ್ರೋಸ್, ಫ್ರಕ್ಟೋಸ್ ಹಾಗೂ ಗ್ಲೂಕೋಸ್‌ನಿಂದ ಸಮೃದ್ಧವಾಗಿರುತ್ತದೆ. ಜೊತೆಗೆ ಗ್ಲೂಕೋಸ್‌ಗಿಂತ ಹೆಚ್ಚಿನ ಗ್ಲೈಸೆಮಿಕ್ ಕೂಡ ಇರುತ್ತದೆ. ಹೀಗಾಗಿ ಶುಗರ್ ಇರುವವರು ಇದನ್ನು ತಿನ್ನಬಾರದು.

ಚರ್ಮ ಸಮಸ್ಯೆಗಳು (skin rashes) ಇರುವವರು ಅಥವಾ ಆಸ್ತಮಾ ಆರೋಗ್ಯ ಸಮಸ್ಯೆ ಹೊಂದಿರುವವರು ಈ ಒಣ ಹಣ್ಣನ್ನು ಸೇವಿಸಬಾರದು. ಖರ್ಜೂರದಂಥ ಒಣ ಹಣ್ಣುಗಳಲ್ಲಿ ಕಂಡುಬರುವ ಅಚ್ಚು ಅಲರ್ಜಿಗಳು (Mould allergies) ಶೇಕಡಾ 70 ರಿಂದ–80 ರಷ್ಟು ಆಸ್ತಮಾ ರೋಗಿಗಳ ಮೇಲೆ ಪರಿಣಾಮ ಬೀರುತ್ತವೆ. ಖರ್ಜೂರವನ್ನು ಹೆಚ್ಚಾಗಿ ತಿಂದರೆ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಚರ್ಮ ಸಮಸ್ಯೆ ಇರುವವರು ಹಾಗೂ ಆಸ್ತಮಾ ಇದ್ದವರು ಈ ಹಣ್ಣುಗಳಿಂದ ದೂರ ಇರಿ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment