Advertisment

ತೂಕ ಇಳಿಸಲು ಈ ಡಯಟ್ ಮಾಡೋರೆ ಎಚ್ಚರ! ಇದರಿಂದ ದೇಹದ ಮೇಲಾಗುವ ಪರಿಣಾಮವೇನು?

author-image
Ganesh Nachikethu
Updated On
ತೂಕ ಇಳಿಸಲು ಈ ಡಯಟ್ ಮಾಡೋರೆ ಎಚ್ಚರ! ಇದರಿಂದ ದೇಹದ ಮೇಲಾಗುವ ಪರಿಣಾಮವೇನು?
Advertisment
  • ಕೀಟೋ ಡಯಟ್‌ ಫುಡ್​ನಲ್ಲಿ ಶೇ.70 ಕೊಬ್ಬು, 25 ರಷ್ಟು ಪ್ರೋಟಿನ್
  • ಇದು ದೇಹಕ್ಕೆ ಪ್ರೋಟಿನ್, ಕೊಬ್ಬಿನ ಅಂಶ ಕೊಡುವ ಆಹಾರ ಪದ್ಧತಿ
  • ಈ ಪ್ರೋಟಿನ್‌ ಫುಡ್‌ಗಳಿಂದ ರಕ್ತನಾಳಗಳು ಡ್ಯಾಮೇಜ್ ಆಗುತ್ತವೆ

ಸದ್ಯ ಎಲ್ಲೆಡೆ ಕೀಟೋ ಡೈಯಟ್‌ ಫುಡ್​​ನದ್ದೇ ಸದ್ದು. ದೇಹದ ತೂಕವನ್ನು ಬಹಳ ಬೇಗ ಕಡಿಮೆ ಮಾಡೋ ಆಹಾರ ಪದ್ಧತಿ. ಇತ್ತೀಚೆಗೆ ದೇಶಾದ್ಯಂತ ಕೀಟೋ ಡೈಯಟ್‌ ಫುಡ್ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ. ಅದರಲ್ಲೂ ದೇಹದ ತೂಕ ಬಹಳ ಬೇಗ ಕಡಿಮೆ ಮಾಡೋದರಲ್ಲಿ ಇದು ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ.

Advertisment

ಇನ್ನು, ಈ ಡಯಟ್ ಫುಡ್‌ಗಳನ್ನು ಸೇವಿಸೋದ್ರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಆದ್ರೆ, ಇದರಿಂದಾಗೋ ಅಡ್ಡ ಪರಿಣಾಮಗಳು ಮಾತ್ರ ಭಯಾನಕ. ಕೀಟೋ ಡೈಯಟ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಡೈಯಟ್ ಮಾಡೋದ್ರಿಂದ ಹೃದಯಾಘಾತ ಸಂಭವಿಸೋ ಸಾಧ್ಯತೆ ಹೆಚ್ಚು ಎಂದು ವರದಿ ಆಗಿದೆ.

ಕೀಟೋ ಡೈಯಟ್‌ ಫುಡ್ ಏಕೆ ಡೇಂಜರ್​​?

ಅತಿಯಾದ ಕೀಟೋ ಡೈಯಟ್‌ ಫುಡ್ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಫುಡ್‌ನಲ್ಲಿ ಅತಿಯಾದ ಪ್ರೋಟಿನ್ ಅಂಶಗಳು ಇರುತ್ತೆ. ಕಾರ್ಬೋಹೈಡ್ರೇಟ್ ಇರೋದಲ್ಲ. ಅತಿಯಾದ ಪ್ರೋಟಿನ್‌ ಫುಡ್‌ಗಳಿಂದ ರಕ್ತನಾಳಗಳು ಡ್ಯಾಮೇಜ್ ಆಗುತ್ತವೆ. ಇದರಿಂದ ಹೃದಯಾಘಾತದ ಸಾಧ್ಯತೆಗಳು ಹೆಚ್ಚಾಗುತ್ತದೆ. ನಮ್ಮ ದೇಹಕ್ಕೆ ಪ್ರೋಟಿನ್ ಜೊತೆಗೆ ಕಾರ್ಬೋಹೈಡ್ರೇಟ್ ಕೂಡಾ ತುಂಬಾ ಮುಖ್ಯವಾಗಿದೆ. ಹೀಗಾಗಿ ಕೀಟೋ ಡೈಯೆಟ್ ಲಿಮಿಟ್ ಆಗಿ ಇರಲಿ ಎನ್ನುತ್ತಾರೆ ಹೃದ್ರೋಗ ತಜ್ಞರು.

ಕೀಟೋ ಡಯಟ್ ಎಂದರೇನು?

ದೇಹಕ್ಕೆ ಪ್ರೋಟಿನ್, ಕೊಬ್ಬಿನ ಅಂಶ ಕೊಡುವ ಆಹಾರ ಪದ್ಧತಿಯನ್ನು ಕೀಟೋ ಡಯಟ್ ಎನ್ನುತ್ತಾರೆ. ಇದರಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಅಂಶ ಇರಲಿದೆ. ಕೀಟೋ ಫುಡ್​ನಲ್ಲಿ ಶೇ.70 ಕೊಬ್ಬು, 25 ರಷ್ಟು ಪ್ರೋಟಿನ್ ಇರಲಿದೆ. ಶೇಕಡಾ 5ರಷ್ಟು ಮಾತ್ರಾ ಕಾರ್ಬೋಹೈಡ್ರೇಟ್ ಅಂಶ ಹೊಂದಿರುತ್ತೆ. ಡಯಟ್​ನಲ್ಲಿರುವವರು ಮಾಂಸ, ಮೊಟ್ಟೆ, ಬಾದಾಮಿ, ಚೀಸ್, ಕ್ರೀಮ್, ಬೆಣ್ಣೆ, ಪನ್ನೀರ್, ಸೇರಿದಂತೆ ಅನೇಕ‌ ಪ್ರೋಟಿನ್ ಸೇವನೆ ಇರುತ್ತದೆ. ಅಕ್ಕಿ, ರಾಗಿ, ಮೈದಾ, ಓಟ್ಸ್​ನಂತಹ ಕಾರ್ಬೋಹೈಡ್ರೇಟ್​ ಇರೋದಿಲ್ಲ. ಬ್ರೆಡ್, ಕಾರ್ನ್, ಆಲೂಗಡ್ಡೆ, ಸೇಬು, ಬಾಳೆಹಣ್ಣು ಸೇವನೆ ಮಾಡುವುದಿಲ್ಲ.

Advertisment

ಇದನ್ನೂ ಓದಿ:ಬಾಳೆಹಣ್ಣು ತಿನ್ನೋದರಿಂದ ದೇಹಕ್ಕಾಗೋ ಪ್ರಯೋಜನ ಏನು? ನೀವು ಓದಲೇಬೇಕಾದ ಸ್ಟೋರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment