newsfirstkannada.com

ಮತ್ತೆ ಹುಟ್ಟಿ ಬಂದ ಮಗ.. ಸಿಧು ಮೂಸೆವಾಲಾ ಹೆತ್ತವರ ನೋಡಿದ್ರೆ ಎಂತಹವರ ಹೃದಯವೂ ತುಂಬಿ ಬರುತ್ತೆ!

Share :

Published March 17, 2024 at 1:15pm

    2022ರಲ್ಲಿ ಗಾಯಕ ಸಿಧು ಮೂಸೆವಾಲಾರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು

    ಆಸ್ಪತ್ರೆಯಲ್ಲೇ ಕೇಕ್ ಕಟ್ ಮಾಡಿ ಖುಷಿ ಪಟ್ಟ ಸಿಧು ಮೂಸೆವಾಲಾ ತಂದೆ

    ​ಬೆಡ್​ ಮೇಲೆಯಿಂದಲೇ ಮಗುವನ್ನ ಕಂಡು ಕಣ್ಣೀರು ಹಾಕಿದ ತಾಯಿ

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಾಗಿ ಇಲ್ಲಿಗೆ 2 ವರ್ಷಗಳು ಆಗುತ್ತಿವೆ. ಇದರ ಬೆನ್ನಲ್ಲೇ ಸಿಧು ಅವರ ತಾಯಿ 58ನೇ ವರ್ಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜಿಂದಾಲ್ ಹಾರ್ಟ್​ ಬೇಬಿ ಸೆಂಟರ್​ ಆಸ್ಪತ್ರೆಯಲ್ಲಿ ತಾಯಿ, ಮಗ ಆರೋಗ್ಯವಾಗಿದ್ದಾರೆ. ತಂದೆ ಮಗುವನ್ನು ಎತ್ತುಕೊಂಡು ಕೇಕ್​ ಕಟ್ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಎಲ್ಲರೂ ಶುಭಾಶಯ ಹೇಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಗುವನ್ನ ಕಂಡ ತಕ್ಷಣ ತಂದೆ, ತಾಯಿ ಇಬ್ಬರು ಮತ್ತೆ ಸಿಧುನೇ ಹುಟ್ಟಿ ಬಂದಿದ್ದಾನೆ ಎಂಬುವಂತೆ ಭಾವುಕರಾಗಿದ್ದಾರೆ. ಬೆಡ್​ ಮೇಲೆ ಮಲಗಿದ್ದ ಜಾಗದಿಂದಲೇ ಮಗುವನ್ನ ಕಂಡು ತಾಯಿ ಕಣ್ಣೀರು ಹಾಕಿದ್ದಾರೆ. ತಂದೆ ಕೂಡ ಮಗನನ್ನು ಎತ್ತುಕೊಂಡು ಸಂತಸ ವ್ಯಕ್ತಪಡಿಸಿ, ವೈದ್ಯರು, ನರ್ಸ್​ಗಳಿಗೆ ಕೈ ಮುಗಿದಿದ್ದಾರೆ. ತಂದೆ ಸ್ಪೂನ್​ನಿಂದ ಮಗುವಿಗೆ ಹಾಲು ಕುಡಿಸಿ ವೈದ್ಯರನ್ನ ತಬ್ಬಿಕೊಂಡು ದುಖಿಃತರಾಗಿದ್ದಾರೆ. ಬಳಿಕ ಕೇಕ್ ಕಟ್ ಮಾಡಿದ್ದಾರೆ.

ಇದನ್ನು ಓದಿ: ಸಿಧು ಮೂಸೆವಾಲಾ ತಾಯಿಗೆ ಗಂಡು ಮಗು ಜನನ.. ಸಿಹಿ ಸುದ್ದಿ ಹಂಚಿಕೊಂಡ ತಂದೆ ಬಲ್ಕೌರ್ ಸಿಂಗ್

ಗಾಯಕ ಶುಭದೀಪ್ ಸಿಂಗ್ ಸಿಧು ಅವರು ಸಿಧು ಮೂಸೆವಾಲಾ ಎಂದೇ ಪ್ರಖ್ಯಾತಿ ಪಡೆದಿದ್ದರು. ಇವರ ಹಾಡುಗಳೆಂದರೆ ಯುವಕ- ಯುವಕರಿಗೆ ಎಲ್ಲಿಲ್ಲದ ಪ್ರೀತಿ. ಇದರ ಜೊತೆಗೆ ಎಲ್ಲ ಕಡೆ ಇವರ ಹೆಸರು ಕೇಳಿ ಬರುತ್ತಿದ್ದರಿಂದ ಚುನಾವಣೆಗೂ ಸ್ಪರ್ಧೆ ಮಾಡಿದ್ದರು. 2022ರಲ್ಲಿ ಮಾನ್ಸಾ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿ ಸೋತರು. ಅದೇ ವರ್ಷ ಮೇ 29 ರಂದು ಜವಾಹರ್ಕೆ ಗ್ರಾಮದಲ್ಲಿ ಕಾರಿನಲ್ಲಿ ಕುಳಿತ್ತಿದ್ದಾಗ ದುಷ್ಕರ್ಮಿಗಳು ಗುಂಡಿಟೇಗೆ ಬಲಿಯಾದರು. ಈ ಸಂಬಂಧ ಲಾರೆನ್ಸ್​ ಬಿಷ್ಣೋಯ್​ ಸೇರಿದಂತೆ 25 ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ.

ಜನಪ್ರಿಯವಾಗಿ ಬೆಳೆದು ನಿಂತ ಮಗ ಸಿಧು ಮೂಸೆವಾಲಾ ಕೊಲೆಯಾದ ಬಳಿಕ ಚರಣ್ ಕೌರ್ (ತಾಯಿ), ಬಲ್ಕೌರ್ ಸಿಂಗ್ (ತಂದೆ) ಮತ್ತೊಂದು ಮಗುವನ್ನ ಪಡೆಯಲು ಯೋಚಿಸಿದ್ದರು. ಇದಕ್ಕಾಗಿಯೇ ವಿದೇಶಕ್ಕೆ ತೆರಳಿ ಅಲ್ಲಿ ಐವಿಎಫ್ ತಂತ್ರಜ್ಞಾನ ಆಯ್ಕೆ ಮಾಡಿಕೊಂಡಿದ್ದರು. ಆದರೆ ಇದು ಯಶಸ್ವಿ ಆಗುವವರೆಗೆ ಯಾರಿಗೂ ತಿಳಿಸಬಾರದು ಎಂದು ಅವರ ಕುಟುಂಬದವರು ಗೌಪ್ಯವಾಗಿ ಇಟ್ಟಿದ್ದರು. ಇದೀಗ ಸಿಧು ಅವರ ಪೋಷಕರ ಅದೃಷ್ಟವೋ, ಏನೋ ಅವರಿಗೆ ಗಂಡು ಮಗುವೇ ಜನನವಾಗಿದೆ. ಇದನ್ನೇ ಅವರು ಸಿಧು ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ ಎಂದು ಖುಷಿಯಾಗಿದ್ದಾರೆ. ಮಗು ಪಡೆಯುವಲ್ಲಿ ಎಲ್ಲವೂ ಯಶಸ್ವಿಯಾದ ಹಿನ್ನೆಲೆಯಲ್ಲಿ ತಂದೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಹುಟ್ಟಿ ಬಂದ ಮಗ.. ಸಿಧು ಮೂಸೆವಾಲಾ ಹೆತ್ತವರ ನೋಡಿದ್ರೆ ಎಂತಹವರ ಹೃದಯವೂ ತುಂಬಿ ಬರುತ್ತೆ!

https://newsfirstlive.com/wp-content/uploads/2024/03/SIDHU.jpg

Load More