newsfirstkannada.com

ಗಾಯಕ ಸಿಧು ಮೂಸೆವಾಲಾ ತಾಯಿ ಗರ್ಭಿಣಿ! ಮಗುವಿನ ನಿರೀಕ್ಷೆಯಲ್ಲಿ 50ರ ಹರೆಯದ ಚರಣ್​ ಕೌರ್

Share :

Published February 27, 2024 at 2:09pm

    ಪಂಜಾಬ್​ ಖ್ಯಾತ ಗಾಯಕ ದಿವಂಗತ ಸಿಧು ಮೂಸೆವಾಲಾ

    2022ರಲ್ಲಿ ದುಷ್ಕರ್ಮಿಗಳ ಬಂದೂಕಿನ ದಾಳಿಗೆ ಸಿಧು ಹತ್ಯೆ

    ಮಾರ್ಚ್​ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಚರಣ್​ ಕೌರ್

ಪಂಜಾಬ್​ ಖ್ಯಾತ ಗಾಯಕ ದಿವಂಗತ ಸಿಧು ಮೂಸೆವಾಲಾ 2022ರಲ್ಲಿ ದುಷ್ಕರ್ಮಿಗಳ ಬಂದೂಕಿನ ದಾಳಿಗೆ ಹತ್ಯೆಯಾದರು. ನಡುಬೀದಿಯಲ್ಲಿ ಸಿಧು ವಾಹನವನ್ನು ಅಡ್ದಗಟ್ಟಿ ಬಂದೂಕಿನಿಂದ ಹತ್ಯೆ ಮಾಡಿದ್ದರು. ಇದ್ದಕ್ಕಿಂದ್ದಂತೆಯೇ ಶುಭದೀಪ್​ ಸಿಂಗ್ (ಮತ್ತೊಂದು ಹೆಸರು) ಹತ್ಯೆಯ ಸುದ್ದಿ ಅಂದು ಅನೇಕ ಅಭಿಮಾನಿಗಳಿಗೆ ನೋವು ನೀಡಿತ್ತು. ಆದರೂ ಇಂದಿಗೂ ಈ ಗಾಯಕನನ್ನು ಅಭಿಮಾನಿಗಳು ನೆನೆಯುತ್ತಾ ಬಂದಿದ್ದಾರೆ. ಹೀಗೆ ನೆನೆಪಿಸುತ್ತಾ, ಆರಾಧಿಸುತ್ತಾ ಬಂದಿರುವ ಅಭಿಮಾನಿಗಳಿಗೀಗ ಸಿಹಿ ಸುದ್ದಿಯೊಂದು ಇಲ್ಲಿದೆ. ಅದೇನು ಗೊತ್ತಾ?

ಸಿಧು ಮೂಸೆವಾಲಾ ತಾಯಿ ಚರಣ್​ ಕೌರ್​ ಮತ್ತೆ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರಂತೆ. ಇಂತಹದೊಂದು ಸುದ್ದಿಯನ್ನು ಸಿಧು ಕುಟಂಬದ ಮೂಲಗಳು ಖಚಿತಪಡಿಸಿವೆ. ಅಂದಹಾಗೆಯೇ ಈ ಸುದ್ದಿ ಹೊರಬಿದ್ದದ್ದೇ ತಡ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. ಮತ್ತೊಬ್ಬು ಸಿಧು ಭೂಮಿಗೆ ಬರಲು ರೆಡಿಯಾಗಿದ್ದಾನೆಂದು ಹೇಳುತ್ತಿದ್ದಾರೆ.

ಸಿಧು ತನ್ನ ಪೋಷಕರಿಗೆ ಒಬ್ಬನೇ ಮಗ. ಆದರೀಗ ತನ್ನ 50ರ ಹರೆಯದ ತಾಯಿ ಮತ್ತೊಮ್ಮೆ ಗರ್ಭಿಣಿಯಾಗುವ ಮೂಲಕ ಮತ್ತೊಬ್ಬ ಸಿಧುವನ್ನು ಮಾರ್ಚ್​ನಲ್ಲಿ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮತ್ತೊಂದು ವಿಚಾರವೆಂದರೆ ಚರಣ್​ ಕೌರ್​ ಆರು ತಿಂಗಳಿನಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿಧು 2022ರಲ್ಲಿ ಕಾಂಗ್ರೆಸ್​​ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಪಂಜಾಬ್​ ಅಸೆಂಬ್ಲಿ ಚುನಾವಣೆಯಲ್ಲಿ ಸೋತರು. ಆದರೆ ಅದೇ ವರ್ಷ 29ರಂದು ಕೊಲೆಯಾದರು. ಲಾರೆನ್ಸ್​ ಬಿಷ್ಣೋಯ್​ ಸೇರಿದಂತೆ ನಾಲ್ವರು ಸಿಧುವನ್ನ ಹತ್ಯೆ ಮಾಡಿದರು. ಈ ಸಂಬಂಧ ಸದ್ಯ 25 ಮಂದಿಯನ್ನು ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಾಯಕ ಸಿಧು ಮೂಸೆವಾಲಾ ತಾಯಿ ಗರ್ಭಿಣಿ! ಮಗುವಿನ ನಿರೀಕ್ಷೆಯಲ್ಲಿ 50ರ ಹರೆಯದ ಚರಣ್​ ಕೌರ್

https://newsfirstlive.com/wp-content/uploads/2024/02/Sidu-moose-wala.png

Load More