newsfirstkannada.com

SIIMA Awards: ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡ ಕಾಂತಾರ.. ರಕ್ಷಿತ್​ ಶೆಟ್ಟಿಯ 777 ಚಾರ್ಲಿಗೆ ಏನೆಲ್ಲ ಸಿಕ್ಕಿದೆ..?

Share :

Published September 16, 2023 at 8:59am

    ಬ್ಯೂಟಿ ಸಪ್ತಮಿ ಗೌಡಗೆ ಯಾವ ವಿಭಾಗದ ಆವರ್ಡ್ ಸಿಕ್ಕಿದೆ..?

    ಪವನ್ ಒಡೆಯರ್, ಆಪೇಕ್ಷಾ ದಂಪತಿಗೆ ಒಲಿದು ಬಂತು ಪ್ರಶಸ್ತಿ

    ಬೆಸ್ಟ್​ ಮ್ಯೂಸಿಕ್​ ಡೈರೆಕ್ಟರ್ ಪ್ರಶಸ್ತಿ ಯಾವ ಸಿನಿಮಾಕ್ಕೆ ಒಲಿದಿದೆ?

ದುಬೈನ ವಿಶ್ವ ವ್ಯಾಪಾರ ಕೇಂದ್ರದಲ್ಲಿ ನಡೆದ ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ (SIIMA)ಗಳ ಅದ್ಧೂರಿ ಕಾರ್ಯಕ್ರಮದಲ್ಲಿ ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಕನ್ನಡ ವಿಭಾಗ ಚಿತ್ರಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದರಿಂದ ರಿಷಬ್ ಶೆಟ್ಟಿಯವರಿಗೆ ಉತ್ತಮ ಸಿನಿಮಾಗಳನ್ನು ಕನ್ನಡಿಗರಿಗೆ ಕೊಡಲು ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ.

ರಿಷಬ್ ಶೆಟ್ಟಿ ಪ್ರಶಸ್ತಿ ಸ್ವೀಕಾರ ಮಾಡುತ್ತಿರುವುದು

ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತೆಲುಗಿನ ದೀ ಬೆಸ್ಟ್​ ಸಿನಿಮಾಗಳಿಗೆ ಸೈಮಾ ಪ್ರಶಸ್ತಿ ನೀಡಲಾಯಿತು. ಕನ್ನಡ ವಿಭಾಗದಲ್ಲಿ 2022 ಸೆಪ್ಟೆಂಬರ್ 30 ರಂದು ತೆರೆಕಂಡಿದ್ದ ಕಾಂತಾರ ಮೂವಿಯಲ್ಲಿ ಅದ್ಭುತವಾಗಿ ಅಭಿನಯಿಸಿದ್ದಕ್ಕೆ ಲೀಡಿಂಗ್​ ರೋಲ್​ನಲ್ಲಿ ಅತ್ಯತ್ತಮ ನಟ ಎಂದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿಶೇಷ ಜನ ಮೆಚ್ಚುಗೆ ಪ್ರಶಸ್ತಿ ಕೂಡ ರಿಷಬ್ ಪಡೆದುಕೊಂಡರು.

ಕಾಂತಾರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆಯಲ್ಲಿ ಸಪ್ತಮಿ ಗೌಡಗೆ ಪ್ರಶಸ್ತಿ ಸಿಕ್ಕಿದೆ. ಇದೇ ಕಾಂತಾರದಲ್ಲಿ ಅಭಿನಯಿಸಿದ್ದಕ್ಕಾಗಿ ಕನ್ನಡದ ಅತ್ಯತ್ತಮ ನೆಗಟಿವ್​ ರೋಲ್ (ಖಳನಟ) ಸೈಮಾ ಪ್ರಶಸ್ತಿ ನಟ ಅಚ್ಯುತ್ ಕುಮಾರ್​ಗೆ ಒಲಿಯಿತು. ಬೆಸ್ಟ್​ ಕಾಮಿಡಿಯನ್ ಕನ್ನಡ ವಿಭಾಗದಲ್ಲಿ ಪ್ರಕಾಶ್ ತುಮಿನಾಡ್ ಪಡೆದುಕೊಂಡಿದ್ದಾರೆ. ಈ ಸಿನಿಮಾಕ್ಕೆ ಸಂಗೀತ ನೀಡಿದ್ದ ಬಿ. ಅಜನೀಶ್ ಲೋಕನಾಥ್ ಅವರಿಗೆ ಬೆಸ್ಟ್​ ಮ್ಯೂಸಿಕ್​ ಡೈರೆಕ್ಟರ್ ಪ್ರಶಸ್ತಿ ನೀಡಲಾಗಿದೆ. ಪ್ರಮೋದ್ ಮರವಂತೆ ಅವರಿಗೆ ಬೆಸ್ಟ್ ಲಿರಿಕಲ್ ರೈಟರ್ ಆವರ್ಡ್ ತಮ್ಮದಾಗಿಸಿಕೊಂಡರು.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಮೂವಿ ಕನ್ನಡದ ಅತ್ಯುತ್ತಮ ಸಿನಿಮಾ ಎಂದು ಪ್ರಶಸ್ತಿಗೆ ಭಾಜನವಾಗಿದೆ. ಗಾಳಿಪಟ 2 ಚಿತ್ರದಲ್ಲಿ ನಟಿಸಿದ್ದ ನಟ ದಿಗಂತ್ ಮಂಚಲೆ ಅವರು ಸಪೋರ್ಟಿಂಗ್ ರೋಲ್​ನಲ್ಲಿ ಬೆಸ್ಟ್ ಆ್ಯಕ್ಟರ್​ ಪ್ರಶಸ್ತಿ ಪಡೆದಿದ್ದಾರೆ. ಪದವಿಪೂರ್ವ ಚಿತ್ರದ ನಟನೆಗೆ ಪೃಥ್ವಿ ಶಾಮನೂರು ಅವರು ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿಗೆ ಭಾಜನರಾದರು. ಇನ್ನು ಡೊಳ್ಳು ಸಿನಿಮಾಕ್ಕಾಗಿ ಪವನ್ ಒಡೆಯರ್, ಆಪೇಕ್ಷಾ ದಂಪತಿ ಅವರು ಅತ್ಯುತ್ತಮ ಚೊಚ್ಚಲ ನಿರ್ಮಾಪಕರು ಎಂದು ಸೈಮಾ ಪ್ರಶಸ್ತಿ ಮುಡಿಗೇರಿಸಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SIIMA Awards: ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡ ಕಾಂತಾರ.. ರಕ್ಷಿತ್​ ಶೆಟ್ಟಿಯ 777 ಚಾರ್ಲಿಗೆ ಏನೆಲ್ಲ ಸಿಕ್ಕಿದೆ..?

https://newsfirstlive.com/wp-content/uploads/2023/09/KANTARA.jpg

Load More