/newsfirstlive-kannada/media/post_attachments/wp-content/uploads/2025/03/DHAKA-SILENT-KILLER.jpg)
ನೆರೆದೇಶ ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಶೇಖ್ ಹಸೀನಾ ಸರ್ಕಾರ ಕಳಚಿ ಬಿದ್ದು. ಮೊಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯಸ್ಥನಾದ ಬಳಿಕ ಅದರ ಸ್ಥಿತಿ ಇನ್ನೂ ತೀವ್ರವಾಗಿ ಹದಗೆಟ್ಟು ಹೋಗಿದೆ.ದೇಶದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಉದ್ಭವಾಗುತ್ತಲೇ ಇವೆ. ಬಾಂಗ್ಲಾದೇಶದ ರಾಜಧಾನಿ ಢಾಕಾದ ವಾಯುವಿನ ಗುಣಮಟ್ಟ ತೀವ್ರ ಕಳವಳದ ಮಟ್ಟಕಕೆ ಹೋಗಿ ನಿಂತಿತ್ತು. ಇಡೀ ವಿಶ್ವದಲ್ಲಿಯೇ ಅತೀ ಕಳಪೆ ಗಾಳಿಯ ಗುಣಮಟ್ಟ ಢಾಕಾದಲ್ಲಿ ನಿರ್ಮಾಣವಾಗಿದೆ. ಅದು ಯಾವ ಮಟ್ಟಿಗೆ ಅಂದ್ರೆ ಢಾಕಾದಲ್ಲಿ ಬದುಕುತ್ತಿರುವ ಜನರಿಗೆ ಈ ವಾಯುಮಾಲಿನ್ಯವೇ ಸೈಲೆಂಟ್ ಕಿಲ್ಲರ್ ರೂಪದಲ್ಲಿ ಕಾಡುತ್ತಿದೆ. ವರದಿಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ಬಾಂಗ್ಲಾದೇಶದಲ್ಲಿ ಈ ವಿಷಗಾಳಿಯಿಂದಾಗಿಯೇ ವರ್ಷಕ್ಕೆ ಸುಮಾರು 1 ಲಕ್ಷಕ್ಕೂ ಅಧಿಕ ಜನರ ಜೀವ ಬಿಡುತ್ತಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ಬಿಡುಗಡೆಯಾದ ಗಾಳಿಯ ಗುಣಮಟ್ಟ ಮತ್ತು ಮಾಲಿನ್ಯದ Ranking ಪಟ್ಟಿಯು ಬಿಡುಗಡೆಯಾಗಿದ್ದು. ಢಾಕಾದ ಎಕ್ಯೂಐ 304ಕ್ಕೆ ತಲುಪಿದೆ. ಢಾಕಾ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: ಹಾವಿನ ದ್ವೇಷ 12 ವರುಷ.. ಟ್ರಂಪ್-ಝೆಲೆನ್ಸ್ಕಿ ದ್ವೇಷ 6 ವರುಷ; ಸ್ಪೆಷಲ್ ರಿಪೋರ್ಟ್ ಇಲ್ಲಿದೆ!
ಏರ್ ಕ್ವಾಲಿಟಿ ಇಂಡೆಕ್ಸ್ನ ಪ್ರಕಾರ ಎಕ್ಯೂಐ ವ್ಯಾಪ್ತಿಯು 151 ರಿಂದ 200ರ ವರ್ಗದಲ್ಲಿ ಇದ್ದರೆ ಅದನ್ನು ಅಪಾಯ ಎಂದು ಹೇಳಲಾಗುತ್ತದೆ. ಇದೇ ಎಕ್ಯೂಐ 201 ರಂದ 300ರಲ್ಲಿದ್ದರೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದು 301 ರಂದ 400 ತಲುಪಿದರೆ ಆಘಾತಕಾರಿ ಮಟ್ಟಕ್ಕೆ ತಲುಪಿದೆ ಎಂದೇ ಅರ್ಥ. ಸದ್ಯ ಬಾಂಗ್ಲಾದೇಶ ಈ ಆಘಾತಕಾರಿ ಹಂತವನ್ನು ತಲುಪಿದೆ. ದೇಶದ ರಾಜಧಾನಿ ಜನರು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಒಂದು ಕಳಪೆ ಗುಣಮಟ್ಟದ ಗಾಳಿಯು ಬಾಂಗ್ಲಾದೇಶಕ್ಕೆ ಸೈಲೆಂಟ್ ಕಿಲ್ಲರ್ ಆಗಿ ಕಾಡುತ್ತಿದೆ. ಉಸಿರಾಟಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಸಮಸ್ಯೆಯಿಂದ ಜನರು ಪ್ರಾಣ ಬಿಡುತ್ತಿದ್ದಾರೆ. ಪ್ರತಿ ವರ್ಷ ಇದೇ ಕಳಪೆ ಗಾಳಿಯ ಗುಣಮಟ್ಟದಿಂದಾಗಿ 1 ಲಕ್ಷಕ್ಕೂ ಅಧಿಕ ಜನರು ಜೀವ ಬಿಡುತ್ತಿದ್ದಾರೆ ಎಂದು ಶನಿವಾರ ಬಿಡುಗಡೆಯಾದ ಎಕ್ಯೂಐ Ranking ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಢಾಕಾದ ನಂತರ ಯಾವ ನಗರಗಳು ಅಪಾಯದಲ್ಲಿವೆ.
ಇದನ್ನೂ ಓದಿ:ಹುಲಿಯಿಂದ ಮಾಲೀಕನ ಕಾಪಾಡಿದ ಜರ್ಮನ್ ಶೆಪರ್ಡ್ ನಾಯಿ.. ಆದ್ರೆ ಆ ಮೇಲೆ ಆಗಿದ್ದೆ ದುಃಖಕರ
ಯನೈಟೆಡ್ ನ್ಯೂಸ್ ಬಾಂಗ್ಲಾದೇಶದ ವರದಿಯ ಪ್ರಕಾರ ಚೀನಾದ ರಾಜಧಾನಿ ಬೀಜಿಂಗ್, ಉಜ್ಬೇಕಿಸ್ತಾನದ ತಾಷ್ಕೆಂಟ್, ಮತ್ತು ಇರಾನ್ನ ಬಾಗ್ದಾದ್ ರಾಜಧಾನಿಗಳು ಎರಡನೇ, ಮೂರನೇ ಹಾಗು ನಾಲ್ಕನೇ ಸ್ಥಾನಗಳನ್ನು ಪಡೆದಿವೆ ಎಂದು ಹೇಳಲಾಗುತ್ತದೆ. ಅಲ್ಲಿಯ ಎಕ್ಯೂಐ 238, 220 ಮತ್ತು 179ರಷ್ಟಿದೆ ಎಂದು ಹೇಳಲಾಗಿದೆ.
ಬಾಂಗ್ಲಾದೇಶದ ದಿ ಡೈಲಿ ಸ್ಟಾರ್ ಪತ್ರಿಕೆ ಹೇಳುವ ಪ್ರಕಾರ ದೇಶದಲ್ಲಿ ವಾಯುಮಾಲಿನ್ಯದ ವಿಚಾರವಾಗಿ ಅನೇಕ ವಿಷಯಗಳು ಅಪಾಯವನ್ನು ಸೂಚಿಸುತ್ತಿವೆ. ಸೆಂಟರ್ ಫಾರ್ ರೀಸರ್ಚ್ಆನ್ ಎನರ್ಜಿಆ್ಯಂಡ್ ಕ್ಲೀನ್ ಏರ್ ಹೇಳುವ ಪ್ರಕಾರ. ಹವಾ ಮಾಲಿನ್ಯದಿಂದಾಗಿಯೇ ದೇಶದಲ್ಲಿ ವರ್ಷಕ್ಕೆ ಸುಮಾರು 102,456ರಷ್ಟು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ