newsfirstkannada.com

ಇಂದು ರಾತ್ರಿ ಭರ್ಜರಿ ಮಳೆ.. ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್​ ಇರಲ್ಲ!

Share :

Published May 15, 2024 at 10:23pm

    ಕಳೆದ ಒಂದು ತಿಂಗಳಿನಿಂದ ರಣಬಿಸಿಲಿಗೆ ಕಂಗೆಟ್ಟ ರಾಜ್ಯದ ಜನ

    ಆದಷ್ಟು ಬೇಗ ಮಳೆಯಾಗಲಿ ಎಂದಿದ್ದ ಜನರಿಗೆ ಭರ್ಜರಿ ಗುಡ್​ನ್ಯೂಸ್​​

    ಮಳೆ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಇಂದು ರಾತ್ರಿ ಭರ್ಜರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 5 ದಿನಗಳಿಂದಲೂ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದ್ದು, ಇಂದು ಕೂಡ ರಾತ್ರಿ ವರುಣನ ಆರ್ಭಟ ಜೋರಾಗಿ ಇರಲಿದೆ ಎಂದು ತಿಳಿಸಿದೆ.

ರಾಜಧಾನಿ ಬೆಂಗಳೂರಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ. ಯಾವಾಗಲೂ ಮಳೆಯಿಂದ ದಾಖಲೆ ಬರೆಯುತ್ತಿದ್ದ ಬೆಂಗಳೂರು ಈಗ ಬಿಸಿಲಿನ ವಿಚಾರದಲ್ಲೂ ರೆಕಾರ್ಡ್​​​ ಕ್ರಿಯೇಟ್​ ಮಾಡುತ್ತಿದೆ. ಮಳೆಗಾಗಿ ಕಾಯುತ್ತಿರೋ ಬೆಂಗಳೂರು ಮಂದಿಗೆ ಮೂರು ದಿನಗಳಿಂದ ವರುಣನ ದರ್ಶನವಾಗಿದೆ.

ಈ ವಾರ ಪೂರ್ತಿ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ. ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ಇದೆ. ನಾಳೆಯಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, ಬೆಂಗಳೂರಲ್ಲೂ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಷ್ಟೇ ಬೆಂಗಳೂರಿನ ಎಲ್ಲೆಡೆ ರಾತ್ರಿ 10 ಗಂಟೆ ಮೇಲೆ ವಿದ್ಯುತ್​ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬನಶಂಕರಿ, ಬಸವನಗುಡಿ, ಜಯನಗರ, ಕೋರಮಂಗಲ, ಕೆಆರ್​ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಗಿರಿನಗರ, ಶ್ರೀನಿವಾಸನಗರ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರೆಂಟ್​ ಇರಲ್ಲ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ರಾತ್ರಿ ಭರ್ಜರಿ ಮಳೆ.. ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್​ ಇರಲ್ಲ!

https://newsfirstlive.com/wp-content/uploads/2024/05/Heavy-Rains-Karnataka.jpg

Load More