/newsfirstlive-kannada/media/post_attachments/wp-content/uploads/2025/06/SILVER-DINNER.jpg)
ಮುಂಬೈನ ವಿಧಾನಭವನದಲ್ಲಿ ನಡೆದ ಪಾರ್ಲಿಮೆಂಟ್‌ನ ಎಸ್ಟಿಮೆಂಟ್ ಕಮಿಟಿಯ ಪ್ಲಾಟಿನಂ ಜ್ಯುಬಿಲಿ ಕಾರ್ಯಕ್ರಮ ಈಗ ವಿವಾದಕ್ಕೀಡಾಗಿದೆ. ಅದ್ದೂರಿಯಾಗಿ ಸಂಸದರಿಗೆ, ಅತಿಥಿಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
2 ದಿನಗಳ ಕಾಲ ಮುಂಬೈನ ವಿಧಾನಭವನದಲ್ಲಿ ನಡೆದ ಪಾರ್ಲಿಮೆಂಟ್ ಎಸ್ಟಿಮೆಂಟ್ ಕಮಿಟಿಯ ಸಭೆಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉದ್ಘಾಟಿಸಿದ್ದರು. ದೇಶಾದ್ಯಂತ 600 ಮಂದಿ ಅತಿಥಿಗಳು ಬಂದು ಭಾಗಿಯಾಗಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಸಂಸದರು, ಅತಿಥಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದು ಪ್ಲೇಟ್ ಊಟಕ್ಕೂ 5 ಸಾವಿರ ರೂಪಾಯಿ ಹಣ ಪಾವತಿಸಲಾಗಿದೆ. ಹೀಗೆ 600 ಮಂದಿ ಊಟಕ್ಕೆ ಬರೋಬ್ಬರಿ 27 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಈ ದುಬಾರಿ ವೆಚ್ಚ ಈಗ ಟೀಕೆಗೆ ಕಾರಣವಾಗಿದೆ.
ಇದನ್ನೂ ಓದಿ: ಸಿದ್ದು ಮುಂದೆ ಶಾಸಕರ ಸಿಟ್ಟು ಸ್ಫೋಟ.. BR ಪಾಟೀಲ್, ರಾಜು ಕಾಗೆಗೆ ಸಿಎಂ ಬುದ್ಧಿಮಾತು..!
ಅತಿಥಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಭೋಜನದ ವ್ಯವಸ್ಥೆ ಮಾಡಿದ್ದು ಏಕೆ, ಜನರ ತೆರಿಗೆ ಹಣದಲ್ಲಿ ಸಂಸದರು, ಅಧಿಕಾರಿಗಳು ಮಜಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಮಹಾರಾಷ್ಟ್ರದ ರಾಜ್ಯ ಸರ್ಕಾರ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿದೆ. ಇಂಥ ಸ್ಥಿತಿಯಲ್ಲಿ ದುಬಾರಿ ಭೋಜನ, ಬೆಳ್ಳಿ ತಟ್ಟೆಯ ಊಟದ ವ್ಯವಸ್ಥೆ ಅಗತ್ಯ ಇರಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಅಕ್ಷರಶಃ ದಿವಾಳಿಯ ಸ್ಥಿತಿಯಲ್ಲಿದೆ. ಅತಿಥಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ಬಡಿಸುವ ಅಗತ್ಯ ಏನಿತ್ತು? ಎಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ ವಡವಟ್ಟಿವಾರ್ ಪ್ರಶ್ನಿಸಿದ್ದಾರೆ. ಪ್ರತಿ ತಟ್ಟೆ ಊಟಕ್ಕೂ 5 ಸಾವಿರ ರೂಪಾಯಿ ವೆಚ್ಚ ಮಾಡಲಾಗಿದೆ. ರೈತರಿಗೆ ಸಾಲ ಮನ್ನಾ ನಿರಾಕರಿಸಲಾಗಿದೆ. ಸರ್ಕಾರಿ ನೌಕರರಿಗೆ ಬೋನಸ್ ನೀಡಿಲ್ಲ. ಕಲ್ಯಾಣ ಯೋಜನೆಗಳಿಗೆ ಬಜೆಟ್ ಕಡಿತ ಮಾಡಲಾಗಿದೆ ಎಂದು ವಿಜಯ ವಡವಟ್ಟಿವಾರ್ ಹೇಳಿದ್ದಾರೆ. ಪಾರ್ಲಿಮೆಂಟ್ ಅಂದಾಜು ಸಮಿತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಚ್ಚಗಳ ಅಂದಾಜಿನ ಬಗ್ಗೆ ಮೌಲ್ಯಮಾಪನ ಮಾಡುತ್ತೆ.
ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿ ಪ್ರವಾಸದಲ್ಲಿ ಏನೆಲ್ಲ ಆಯ್ತು..? ಹೈಕಮಾಂಡ್ ಗರಂ ಆಗಿದ್ದು ಯಾಕೆ..?
ಸಾಮಾಜಿಕ ಕಾರ್ಯಕರ್ತ ಕುಂಬಾರ್ ಹೇಳುವ ಪ್ರಕಾರ 600 ಅತಿಥಿಗಳಿಗೆ ಒಟ್ಟಾರೆ 27 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಸಾರ್ವಜನಿಕ ಹಣವನ್ನು ಐಷಾರಾಮಿಯಾಗಿ ಖರ್ಚು ಮಾಡಲಾಗಿದೆ. ಪ್ರತಿ ತಟ್ಟೆ ಊಟಕ್ಕೆ 4,500 ರೂಪಾಯಿ, ಬೆಳ್ಳಿ ತಟ್ಟೆಗೆ 550 ರೂಪಾಯಿ ನೀಡಲಾಗಿದೆ. 600 ಮಂದಿ ಅತಿಥಿಗಳಿಗೆ 27 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇದೇ ಎಸ್ಟಿಮೇಟ್ ಸಮಿತಿಯೇ ಸರಳತೆಯ ಬಗ್ಗೆ ಪಾಠ ಮಾಡುತ್ತೆ ಎಂದಿದ್ದಾರೆ. ಅತಿಥಿಗಳಿಗೆ 40 ಅಡಿ ಉದ್ದದ ಬ್ಯಾನರ್ ಹಾಕಲಾಗಿತ್ತು. ತಾಜ್ ಪ್ಯಾಲೇಸ್, ಟ್ರೈಡೆಂಟ್ ಹೋಟೇಲ್ ನಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಎಸಿ ಡೈನಿಂಗ್ ಟೆಂಟ್ , ರೆಡ್ ಕಾರ್ಪೆಟ್ ಹಾಕಿ ಜನರ ತೆರಿಗೆ ಹಣವನ್ನು ರಾಯಲ್ ಆಗಿ ವ್ಯಂಗ್ಯ ಮಾಡಲಾಗಿದೆ ಎಂದು ಕುಂಬಾರ್ ಹೇಳಿದ್ದಾರೆ.
ಅತಿಥಿಗಳಿಗೆ ಸಿಲ್ವರ್ ಕೋಟೆಡ್ ಪ್ಲೇಟ್ಗಳಿಗೆ ಊಟ ಬಡಿಸಲಾಗಿದೆ. ಇನ್ನೂ ಪ್ರತಿ ಪ್ಲೇಟ್ ಊಟಕ್ಕೆ 4 ಸಾವಿರ ರೂಪಾಯಿ ವೆಚ್ಚವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಸಚಿವಾಲಯದಿಂದ ಅಧಿಕೃತವಾಗಿ ಈ ಭೋಜನಕೂಟ, ಎಸ್ಟಿಮೇಟ್ ಕಮಿಟಿಯ ಸಭೆಗಾದ ಖರ್ಚಿನ ಬಗ್ಗೆ ವಿವರಣೆ ಸ್ಪಷ್ಟನೆ ನೀಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ