/newsfirstlive-kannada/media/post_attachments/wp-content/uploads/2024/10/SIM-CARD.jpg)
SIM ಕಾರ್ಡ್ ಸಕ್ರಿಯವಾಗಿಡಲು ತಿಂಗಳಿಗೆ ಕನಿಷ್ಠ ರೀಚಾರ್ಜ್ ಮಾಡಬೇಕು. ಅದಕ್ಕಾಗಿ ಬಳಕೆದಾರರು 28 ದಿನಗಳ ವ್ಯಾಲಿಡಿಟಿ ಹೊಂದಿರೋ 199 ರೂಪಾಯಿ ಮೌಲ್ಯದ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ತಾರೆ. ಕೆಲವು ಟೆಲಿಕಾಮ್ ಕಂಪನಿಗಳು ಆಗಾಗ ಕಮ್ಮಿ ಬೆಲೆಗೆ ರಿಚಾರ್ಜ್ ಪ್ಲಾನ್ ಪರಿಚಯಿಸುತ್ತವೆ.
ಇದೀಗ TRAI (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಮೊಬೈಲ್ ಬಳಕೆದಾರರಿಗೆ ಸಮಾಧಾನ ತರುವ ನಿಯಮ ಜಾರಿಗೆ ತಂದಿದೆ. ಅದರ ಪ್ರಕಾರ, ನೀವು ಕನಿಷ್ಠ ಪ್ರಿಪೇಯ್ಡ್ ಬ್ಯಾಲೆನ್ಸ್ ಹೊಂದುವ ಮೂಲಕ ಸಿಮ್ ಕಾರ್ಡ್ ಸಕ್ರಿಯವಾಗಿರಿಸಿಕೊಳ್ಳಬಹುದು. ಅದರ ಬೆಲೆ ಕೇವಲ 20 ರೂಪಾಯಿ ಮಾತ್ರ. ನಿಮ್ಮ ಸಿಮ್ ಖಾತೆಯಲ್ಲಿ 20 ರೂಪಾಯಿ ಇದ್ದರೆ ಅದು 90 ದಿನಗಳವರೆಗೆ ಸಕ್ರಿಯವಾಗಿರುತ್ತದೆ. ಇಲ್ಲಿ 20 ರೂಪಾಯಿ ರಿಚಾರ್ಜ್ನ ವ್ಯಾಲಿಡಿಟಿ ಕೇವಲ 30 ದಿನ. ಆದರೆ ಅದನ್ನು ನೀವು ಹಾಗೆ ಮುಂದುವರಿಸಿದರೆ ಸಿಮ್ ವ್ಯಾಲಿಡಿಟಿ 90 ದಿನಗಳವರೆಗೆ ಇರುತ್ತದೆ. ಅದರ ಹೊರತಾಗಿಯೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಇದನ್ನೂ ಓದಿ: Credit card ಬಳಸುವಾಗ ಹುಷಾರ್.. ಈ ತಪ್ಪು ಮಾಡಿದ್ರೆ ಮುಂದೆ ಕಷ್ಟಕ್ಕೆ ಬೀಳ್ತೀರಿ..!
ಟ್ರಾಯ್ ಹೊಸ ಮಾರ್ಕೆಟ್ ಪ್ಲಾನ್ ಪಾಲಿಸಿ ಜಾರಿಗೆ ತಂದಿದೆ. ಈ ಪಾಲಿಸಿ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೆ ಅನ್ವಯಿಸುತ್ತದೆ. ಅಂದರೆ Jio, Airtel, VI ಅಥವಾ BSNLನ ಸೇರಿದಂತೆ ಯಾವುದೇ ಸೇವೆಯನ್ನು ಬಳಸುತ್ತಿದ್ದರೂ ನೀವು ಈ ಸೌಲಭ್ಯ ಪಡೆಯುತ್ತೀರಿ.
Jio, Airtel, Vi ಕೂಡ ತಮ್ಮ ವೆಬ್‌ಸೈಟ್‌ನಲ್ಲಿ ಹೊಸ ಪ್ಲಾನ್ ಬಗ್ಗೆ ಮಾಹಿತಿ ನೀಡಿವೆ. ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ.. ಸಿಮ್ನಲ್ಲಿ 20 ರೂಪಾಯಿ ಬಾಕಿಯಿರುವ ಕಾರಣ ಅದು ಸಕ್ರಿಯವಾಗಿರುತ್ತದೆ. ಒಳಬರುವ, ಹೊರಹೋಗುವ ಕರೆಗಳು, ಎಸ್‌ಎಂಎಸ್, ಇತರ ಸೇವೆಗಳ ಸಿಂಧುತ್ವಕ್ಕೂ ಇದಕ್ಕೂ ಸಂಬಂಧ ಇರಲ್ಲ. ಅಂದರೆ 20 ರೂಪಾಯಿಗೆ ಸಿಮ್ ಕಾರ್ಡ್ ಸಕ್ರಿಯವಾಗಿರುತ್ತದೆ. ಆದರೆ ಸೇವೆಗಳು ಸಿಗಲ್ಲ. ಕನಿಷ್ಠ ರೀಚಾರ್ಜ್ ಮಾಡದಿದ್ದರೆ ಟೆಲಿಕಾಂ ಕಂಪನಿಗಳು OTP, ಒಳಬರುವ ಕರೆಗಳ ಸೌಲಭ್ಯವನ್ನು ಸಹ ನಿಲ್ಲಿಸುತ್ತವೆ.
ಏನು ಹೇಳುತ್ತೆ ಟ್ರಾಯ್ ನಿಯಮ..?
TRAI ನಿಯಮಗಳ ಪ್ರಕಾರ.. ನೀವು ಡೇಟಾ, ಧ್ವನಿ, SMS ಅಥವಾ ಯಾವುದೇ ಇತರ ಸೇವೆ ಬಳಸದಿದ್ದರೆ ಮತ್ತು ರೀಚಾರ್ಜ್ ಮಾಡದಿದ್ದರೆ SIM ಕಾರ್ಡ್ 90 ದಿನಗಳ ನಂತರ ನಿಷ್ಕ್ರಿಯಗೊಳ್ಳುತ್ತದೆ. ಆಗ ಟೆಲಿಕಾಂ ಆಪರೇಟರ್ ಸಂಖ್ಯೆಯನ್ನು ನೋಂದಾಯಿಸಬಹುದು. ಅದನ್ನು ಇನ್ನೊಬ್ಬ ಬಳಕೆದಾರರಿಗೆ ನೀಡಬಹುದು. ಇದರಿಂದ ನಿಮ್ಮ ಸಿಮ್ ನಂಬರ್ ಬೇರೆಯವರ ಕೈಸೇರುತ್ತದೆ. ಇದರಿಂದ ಪಾರಾಗಲು ಇನ್ಮುಂದೆ ನಿಮ್ಮ ಸಿಮ್ ಖಾತೆಯಲ್ಲಿ ಕನಿಷ್ಠ 20 ರೂಪಾಯಿ ಹೊಂದಿರಬೇಕು. ನೀವು 90 ದಿನಗಳ ಅವಧಿಯಲ್ಲಿ ಸಿಮ್ ಕಾರ್ಡ್‌ನಿಂದ ಯಾವುದೇ ಕರೆ ಅಥವಾ ಡೇಟಾ, SMS ಸೇವೆ ಬಳಸದಿದ್ದರೂ ಆ ಹಣ ಕಟ್ ಆಗುತ್ತದೆ. ನಿಮ್ ಸಿಮ್ನಲ್ಲಿ ರಿಚಾರ್ಜ್ ಮಾಡಿಸಿಕೊಂಡಿರುವ ಮೊತ್ತವು ಸಂಪೂರ್ಣವಾಗಿ ಖಾಲಿಯಾದರೆ 15 ದಿನಗಳ ಗ್ರೇಸ್ ಅವಧಿ ಸಿಗಲಿದೆ. ಈ 15 ದಿನದಲ್ಲಿ ರೀಚಾರ್ಜ್ ಮಾಡದಿದ್ದರೆ ಸಿಮ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. TRAI ತಂದಿರುವ ಈ ನಿಯಮ ಹೊಸದಲ್ಲ, ಆದರೆ ಟೆಲಿಕಾಂ ಕಂಪನಿಗಳು ಇದನ್ನು ಪಾಲಿಸುತ್ತಿಲ್ಲ.
ಇದನ್ನೂ ಓದಿ: WhatsApp ನಿಂದ ಮತ್ತೊಂದು ಬೆಂಕಿ ಫೀಚರ್; ಇನ್ಮೇಲೆ ಕೇಳಂಗೇ ಇಲ್ಲ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ