/newsfirstlive-kannada/media/post_attachments/wp-content/uploads/2024/10/SIM-CARD.jpg)
ಟ್ರಾಯ್ ಸಹಯೋಗದಲ್ಲಿ ದೇಶದ ಟೆಲಿಕಾಂ ಇಲಾಖೆ ಸುಮಾರು 122 ಕೋಟಿ ಮೊಬೈಲ್ ಬಳಕೆದಾರರ ರಕ್ಷಿಸಲು ಕಠಿಣ ಕ್ರಮ ತೆಗೆದುಕೊಂಡಿದೆ.
ಟ್ರಾಯ್ ಮತ್ತು ಟೆಲಿಕಾಮ್ ಇಲಾಖೆ ಇತ್ತೀಚೆಗೆ 1.77 ಕೋಟಿ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಿದೆ. ಕ್ಯಾನ್ಸಲ್ ಆಗಿರುವ ಸಿಮ್​ ಕಾರ್ಡ್​ಗಳಿಂದ ನಕಲಿ ಫೋನ್ ಕರೆ ಮಾಡಲು ಬಳಕೆ ಆಗುತ್ತಿತ್ತು. ಟೆಲಿಕಾಂ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪ್ರತಿದಿನ ಸುಮಾರು 1.35 ಕೋಟಿ ನಕಲಿ ಕರೆಗಳನ್ನು ತಡೆಹಿಡಿಯಲಾಗುತ್ತಿದೆ. ನಕಲಿ ಕರೆಗಳು ಬರುತ್ತಿದ್ದ 1.77 ಕೋಟಿ ಸಿಮ್​ಗಳನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದೆ.
ಸಾರ್ವಜನಿಕ ದೂರುಗಳ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಐದು ದಿನಗಳಲ್ಲಿ 7 ಕೋಟಿ ಕರೆಗಳನ್ನು ಟ್ರಾಯ್ ತಡೆ ಹಿಡಿಯಲಾಗಿದೆ. ನಕಲಿ ಕರೆ ಬರುವ ಸಿಮ್​ ಕಾರ್ಡ್​ಗಳನ್ನು ಬ್ಯಾನ್ ಮಾಡ್ತಿರೋದು ಇದೆ ಮೊದಲೇನೂ ಅಲ್ಲ. ಈ ಹಿಂದೆಯೂ ಲಕ್ಷಗಟ್ಟಲೆ ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಲಾಗಿದೆ. ದೂರಸಂಪರ್ಕ ಇಲಾಖೆ (DoT) ಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಟೆಲಿಕಾಂ ಸೇವಾ ಆಪರೇಟರ್‌ಗಳು (TSPs) 45 ಲಕ್ಷ ನಕಲಿ ಅಂತರರಾಷ್ಟ್ರೀಯ ಕರೆಗಳನ್ನು ಟೆಲಿಕಾಂ ನೆಟ್‌ವರ್ಕ್ ತಲುಪದಂತೆ ನಿರ್ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us