ಪ್ರಸಿದ್ಧ ಸಿಂಹಾಚಲಂ ದೇಗುಲದಲ್ಲಿ ಘೋರ ದುರಂತ.. ಅನಾಹುತದ ಸ್ಥಳದಲ್ಲೇ ಜೀವಬಿಟ್ಟ 7 ಭಕ್ತರು..

author-image
Ganesh
Updated On
ಪ್ರಸಿದ್ಧ ಸಿಂಹಾಚಲಂ ದೇಗುಲದಲ್ಲಿ ಘೋರ ದುರಂತ.. ಅನಾಹುತದ ಸ್ಥಳದಲ್ಲೇ ಜೀವಬಿಟ್ಟ 7 ಭಕ್ತರು..
Advertisment
  • ಆಂಧ್ರ ಪ್ರದೇಶದಲ್ಲಿರುವ ಸಿಂಹಾಚಲಂ ದೇಗುಲ
  • ದೇಗುಲದ ‘ಚಂದನ ಉತ್ಸವ’ದಲ್ಲಿ ಸಂಭವಿಸಿದ ಅವಘಡ
  • ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ

ಆಂಧ್ರಪ್ರದೇಶ: ವಿಶಾಖಪಟ್ಟಣದ (Visakhapatnam) ಸಿಂಹಾಚಲಂ ದೇಗುಲದ ‘ಚಂದನ ಉತ್ಸವ’ (Chandanotsavam festival) ಸಂದರ್ಭದಲ್ಲಿ ಘೋರ ದುರಂತ ಸಂಭವಿಸಿದೆ.

ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ಮೇಲೆ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಪರಿಣಾಮ 7 ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಸಿಂಹಗಿರಿ ಬಸ್ ನಿಲ್ದಾಣದಿಂದ ಹೋಗುವ ಮಾರ್ಗದಲ್ಲಿ ಹೊಸ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಲಾಗುತ್ತಿದೆ. ಅದರ ಗೋಡೆ ಕುಸಿದು ಭಕ್ತರ ಮೇಲೆ ಬಿದ್ದಿದೆ. ಗುಡುಗು, ಮಿಂಚು ಸಹಿತ ಭಾರೀ ಮಳೆಯಿಂದಾಗಿ ಅನಾಹುತ ಸಂಭವಿಸಿದೆ.

ಇದನ್ನೂ ಓದಿ: ಭಕ್ತರ ಕಷ್ಟ ಕೇಳಿ ಮಾತನಾಡುವ AI ದೇವತೆ.. ಇದು ಜಗತ್ತಿನಲ್ಲೇ ಮೊಟ್ಟ ಮೊದಲು; ಏನಿದರ ವಿಶೇಷ?

ಕೂಡಲೇ ಸ್ಥಳಕ್ಕೆ ಆಗಮಿಸಿರುವ NDRF ಸಿಬ್ಬಂದಿ, ಇತರೆ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಭಕ್ತರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳ ಕೂಡ ರಕ್ಷಣಾ ಕಾರ್ಯದಲ್ಲಿ ಬ್ಯುಸಿ ಆಗಿವೆ. ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿವೆ. ಅವಶೇಷಗಳ ಅಡಿಯಲ್ಲಿ ಇನ್ನೂ ಹೆಚ್ಚಿನ ಭಕ್ತರು ಇರುವ ಅನುಮಾನ ಇದೆ. 10ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿ ಬೀಡುಬಿಟ್ಟಿವೆ.

ಸಿಂಹಾಚಲಂ ದೇಗುಲದಲ್ಲಿ ವರ್ಷಕ್ಕೊಮ್ಮೆ ಅಪ್ಪಣ್ಣ ಚಂದನೋತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವರ ಉತ್ಸವಕ್ಕೆ ಬರುತ್ತಾರೆ. ಇವತ್ತು 2 ಲಕ್ಷಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಅಂದಾಜು ಇತ್ತು. ಮಧ್ಯರಾತ್ರಿಯಿಂದಲೇ ಭಕ್ತರು ಹರಿದು ಬಂದಿದ್ದರು. ನಿನ್ನೆ ಮಧ್ಯಾಹ್ನ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು.

ಇದನ್ನೂ ಓದಿ: ‘ಗುರಿ, ಸಮಯ ನೀವೇ ನಿರ್ಧರಿಸಿ..’ ಮೋದಿ ಮೀಟಿಂಗ್​ನಲ್ಲಿ ತೆಗೆದುಕೊಂಡು 5 ನಿರ್ಧಾರಗಳು ಏನೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment