ಈ 4 ಪ್ರಮುಖ ಅಭ್ಯಾಸಗಳು ನಿಮ್ಮ ದಂತಗಳನ್ನು ಸ್ವಚ್ಛ ಹಾಗೂ ಬಿಳಿಯಾಗಿಸುತ್ತವೆ.. ಯಾವುವು?

author-image
Gopal Kulkarni
Updated On
ಈ 4 ಪ್ರಮುಖ ಅಭ್ಯಾಸಗಳು ನಿಮ್ಮ ದಂತಗಳನ್ನು ಸ್ವಚ್ಛ ಹಾಗೂ ಬಿಳಿಯಾಗಿಸುತ್ತವೆ.. ಯಾವುವು?
Advertisment
  • ಒಟ್ಟಾರೆ ಬಾಯಿ ಹಾಗೂ ಹಲ್ಲಿನ ಆರೋಗ್ಯಕ್ಕಾಗಿ ಈ ಕೆಲಸ ಮಾಡಿ
  • ಈ 4 ಅಭ್ಯಾಸಗಳು ನಿಮ್ಮದಾದಲ್ಲಿ ನಿಮ್ಮ ಹಲ್ಲುಗಳಿಗೆ ಬರುತ್ತೆ ಬಲ
  • ಹಲ್ಲು ಉಜ್ಜುವುದರ ಜೊತೆಗೆ ಈ ಅಭ್ಯಾಸಗಳು ಕೂಡ ನಿಮ್ಮದಾಗಲಿ

ಹಲ್ಲನ್ನು ಸ್ವಚ್ಛವಾಗಿ ಹಾಗೂ ಪಳಪಳ ಹೊಳೆಯುವಂತೆ ಬಿಳಿಯಾಗಿಟ್ಟುಕೊಳ್ಳಬೇಕು ಎಂಬುದು ಎಲ್ಲರ ಬಯಕೆ. ಆದರೆ ಕೆಲವು ಅಭ್ಯಾಸಗಳು ನಮ್ಮವು ಆಗದೇ ಹೋದಲ್ಲಿ ಅದು ಸಾಧ್ಯವಿಲ್ಲ. ಹಲ್ಲುಗಳ ಆರೋಗ್ಯವನ್ನು ಕಾಪಾಡಲು ನಾವು ಕೇವಲ ಹಲ್ಲುಜ್ಜಿದರೆ ಸಾಲದು ಅದರ ಜೊತೆಗೆ ಇನ್ನು  ಹಲವು ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳಬೇಕು.

ಹಲ್ಲುಗಳನ್ನು ಸ್ವಚ್ಛವಾಗಿ ಹಾಗೂ ಬಿಳಿಯಾಗಿಟ್ಟುಕೊಳ್ಳುವುದು ಕೇವಲ ಆಕರ್ಷಣೆಗೆ ಮಾತ್ರವಲ್ಲ. ಆರೋಗ್ಯಕ್ಕಾಗಿಯೂ ಕೂಡ ಎಂಬುದು ನೆನಪಿರಬೇಕು. ದಿನಕ್ಕೆ ಎರಡು ಬಾರಿ ಬ್ರಶ್ ಮಾಡುವುದು, ಬಾಯಿ ಮುಕ್ಕಳಿಸುವುದು ಇದು ಹಲ್ಲುಗಳ ಆರೋಗ್ಯ ರಕ್ಷಣೆಗೆ ನೀಡುವ ಸಲಹೆಗಳು. ಅದೇ ವಿಶ್ವ ಆರೋಗ್ಯ ಸಂಸ್ಥೆಯು ಮತ್ತೊಂದು ಆಘಾತಕಾರಿ ಕೊಡುವ ಸುದ್ದಿಯೆಂದರೆ ಅದು ವಿಶ್ವದಲ್ಲಿ ಸುಮಾರು 300 ಕೋಟಿಗೂ ಅಧಿಕ ಜನರು ಹಲ್ಲಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ ಎಂದು. ಹಲ್ಲಿನ ಆರೋಗ್ಯದ ವಿಚಾರದಲ್ಲಿ ಆಯುರ್ವೇದ ಅನೇಕ ಅದ್ಭುತ ವಿಷಯಗಳನ್ನು ಹೇಳಿದೆ. ಕೆಲವು ಸರಳ ಅಭ್ಯಾಸಗಳನ್ನು ನಮ್ಮದಾಗಿ ಮಾಡಿಕೊಂಡಿದ್ದೇ ಆದಲ್ಲಿ ಅದ್ಬುತವಾದ ಬದಲಾವಣೆಗಳು ಆಗಲಿವೆ.

publive-image

1.ಬೇವಿನ ಎಲೆಯನ್ನು ಅಗಿಯಬೇಕು
ಬೇವನ್ನು ಗ್ರಾಮೀಣ ಔಷಧಿ ಅಂತಲೇ ಕರೆಯುತ್ತಾರೆ. ಇದರಲ್ಲಿ ಆ್ಯಂಟಿಮೈಕ್ರೊಬೈಲ್ ಅಂಶ ಇದೆ. ಇದು ವಸಡು ಹಾಗೂ ಹಲ್ಲಿನ ಮೇಲೆ ಇಲ್ಲದ ಫ್ಲೇಕ್​ಗಳು ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತದೆ ಅದರ ಜೊತೆಗೆ ವಸಡಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತದೆ. ದಿನಕ್ಕೆ ಎರಡು ಬಾರಿ ಬೇವಿನಿಂದ ಅಗಿಯುವುದಿರಂದ ಇಲ್ಲವೇ ಅದರ ಕಡ್ಡಿಯಿಂದ ಬ್ರಶ್ ಮಾಡುವುದರಿಂದ ಹಲ್ಲಿನ ಮೇಲೆ ಬೇಡದ ಫ್ಲೇಕ್​ಗಳು ಬೆಳೆಯುವುದಿಲ್ಲ. ಇಷ್ಟು ಮಾತ್ರವಲ್ಲ ಒಟ್ಟಾರೆ ಹಲ್ಲಿನ ಆರೋಗ್ಯವನ್ನು ಈ ಬೇವಿನ ಎಲೆ ಕಾಪಾಡುತ್ತದೆ. ಬೇವಿನ ಎಲೆಯಲ್ಲಿ ಇರುವ ಆ್ಯಂಟಿ ಬ್ಯಾಕ್ಟಿರಿಯಾ ಅಂಶ ಹಲ್ಲನ್ನು ಸ್ವಚ್ಚಗೊಳಿಸುವಲ್ಲಿ ತುಂಬಾ ಸಹಾಯಕವಾಗಿ ನಿಲ್ಲುತ್ತದೆ. ಅದರ ಜೊತೆಗೆ ಬಾಯಿಯಿಂದ ತಾಜಾ ಉಸಿರು ಆಚೆ ಬರುವಂತೆ ಮಾಡಲು ಇದು ತುಂಬಾ ಸಹಾಯಕಾರಿ.

publive-image

2. ಮಸಾಲೆ ಪದಾರ್ಥಗಳು ಹಲ್ಲಿನ ಆರೋಗ್ಯಕ್ಕೆ ಸಹಕಾರಿ
ಇನ್ನು ಮಸಾಲೆ ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದಲೂ ಕೂಡ ಹಲ್ಲು ಹಾಗೂ ವಸಡಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತದೆ ಆಯುರ್ವೇದ. ಹಲ್ಲಿನ ಸ್ವಚ್ಛತೆಗಾಗಿ ಲವಂಗ, ದಾಲ್ವಿನ್ನಿ ಏಲಕ್ಕಿಗಳಲ್ಲಿ ತುಂಬಾ ಬಲಿಷ್ಠವಾದ ಆ್ಯಂಟಿಮೈಕ್ರೊಬಿಯಲ್ ಅಂಶವಿರುತ್ತದೆ. ಈ ಮೂರನ್ನು ಮಿಕ್ಸ್ ಮಾಡಿ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ರೀತಿಯಾಗಿ ಮಾಡಿಕೊಂಡು, ನಿತ್ಯವನ್ನು ಹಲ್ಲನ್ನು ಉಜ್ಜಿದರೆ ಹಲ್ಲಿನ ಮೇಲಿರುವ ಕಲೆಗಳೂ ಕೂಡ ತೊಲಗಿ ಹೋಗುವುದರ ಜೊತೆಗೆ ವಸಡಿನ ಆರೋಗ್ಯವು ಉತ್ತಮಗೊಳ್ಳುತ್ತದೆ.

publive-image

3. ಎಣ್ಣೆ ಮುಕ್ಕಳಿಸುವುದು.
ಬ್ರಶ್ ಮಾಡುವ ಮೊದಲು ತೆಂಗಿನ ಎಣ್ಣೆ ಇಲ್ಲವೇ ಸಾಸಿವೆ ಎಣ್ಣೆಯನ್ನು ಮುಕ್ಕಳಿಸುವ ಅಭ್ಯಾಸ ತುಂಬಾ ಒಳ್ಳೆಯದು. 2017ರಲ್ಲಿ ಬಹಿರಂಗವಾದ ಒಂದು ಅಧ್ಯಯನದಲ್ಲಿ ಈ ವಿಚಾರವನ್ನು ಹೇಳಲಾಗಿದೆ. ಒಟ್ಟಾರೆ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ತೆಂಗಿನ ಎಣ್ಣೆ ಇಲ್ಲವೇ ಎಳ್ಳು ಎಣ್ಣೆಯನ್ನು ಮುಕ್ಕಳಿಸಬೆಕು. ಇವು ಬಾಯಿಯಲ್ಲಿರುವ ಅಪಾಯಕಾರಿ ಬ್ಯಾಕ್ಟಿರಿಯಾಗಳನ್ನು ಇಲ್ಲಗೊಳಿಸುತ್ತವೆ. ಅದು ಮಾತ್ರವಲ್ಲ ನಿಮ್ಮ ಹಲ್ಲುಗಳಿಗೆ ಇನ್ನಷ್ಟು ಹೊಳಪನ್ನು ಕೂಡ ಕೊಡುತ್ತವೆ. ಒಂದು ಟೇಬಲ್ ಸ್ಪೂನ್​ನಷ್ಟು ಎಣ್ಣೆಯನ್ನು ತೆಗೆದುಕೊಂಡು 10 ರಿಂದ 15 ನಿಮಿಷ ನಿಮ್ಮ ಬಾಯಿಯ ಸುತ್ತಲು ಹಚ್ಚಿಕೊಳ್ಳಿ ನಂತರ ಉಗುಳಿ. ಇಲ್ಲವೇ ಆ ಒಂದು ಟೇಬಲ್ ಸ್ಪೂನ್ ಎಣ್ಣೆಯನ್ನು ಐದರಿಂದ ಹತ್ತು ನಿಮಿಷ ಮುಕ್ಕಳಿಸಿ. ನಂತರ ಹಲ್ಲುಜ್ಜಿ. ಬಾಯಿಯ ಸಮಸ್ಯೆಗಳು ಇದರಿಂದ ದೂರವಾಗುವುದರ ಜೊತೆಗೆ ಹಲ್ಲುಗಳು ಕೂಡ ಹೊಸ ಹೊಳಪು ಪಡೆಯುತ್ತವೆ.

ಇದನ್ನೂ ಓದಿ: ಚಳಿಗಾಲದಲ್ಲಿ ಸ್ನಾನ ಮಾಡದೇ ಇರುವುದರಿಂದ ಆಯಸ್ಸು ಹೆಚ್ಚುತ್ತದೆಯಾ? ವೈರಲ್ ಆದ ವಿಡಿಯೋ ಏನ್ ಹೇಳುತ್ತೆ?publive-image

4. ನಾಲಿಗೆ ಸ್ಚಚ್ಛಗೊಳಿಸುವುದು
ನಿತ್ಯ ಟಂಗ್ ಕ್ಲೀನ್ ಅಂದ್ರೆ ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳುವ ರೂಡಿಯನ್ನು ಇಟ್ಟುಕೊಳ್ಳಬೇಕು. ನಾಲಿಗೆಯ ಮೇಲೆ ಬೆಳೆದಿರುವ ಆಹಾರದಿಂದ ಬೆಳದಂತ ಕಣಗಳು ಹಾಗೂ ಬ್ಯಾಕ್ಟಿರಿಯಾಗಳನ್ನು ನಾಲಿಗೆಯನ್ನು ಸ್ವಚ್ಛಗೊಳಿಸಿವುದರಿಂದ ಅವುಗಳನ್ನು ಇಲ್ಲದಂತೆ ಮಾಡುತ್ತದೆ. ಈ ಒಂದು ಆಭ್ಯಾಸದಿಂದ ಒಟ್ಟಾರೆ ಬಾಯಿಯ ಆರೋಗ್ಯವನ್ನು ಕಾಪಾಡುವುದರಿಂದ ತಾಜಾ ಉಸಿರನ್ನು ಕೂಡ ನೀಡುತ್ತದೆ.

ಇದನ್ನೂ ಓದಿ:ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡೋದು ಒಳ್ಳೆಯದಾ? ಈ ಅನುಮಾನ ಕಾಡಿದೆಯಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment