/newsfirstlive-kannada/media/post_attachments/wp-content/uploads/2023/06/Raichur-1.jpg)
ರಾಯಚೂರು: ಇಂದು ರಾಜ್ಯಾದ್ಯಂತ ರಾಜ್ಯ ಸರ್ಕಾರದಿಂದ ಶಕ್ತಿ ಭಾಗ್ಯ ಯೋಜನೆಗೆ ಚಾಲನೆ ಸಿಕ್ಕಿದೆ. ಇಂತಹ ಸಂತಸದ ಸಂದರ್ಭದಲ್ಲಿ ರಾಯಚೂರಿನ ಈ ಐದು ಗ್ರಾಮಗಳು ಮಾತ್ರ ಸರ್ಕಾರದ ಶಕ್ತಿ ಯೋಜನೆ ಭಾಗ್ಯದಿಂದ ವಂಚಿತಗೊಂಡಿವೆ.
ರಾಯಚೂರು ಜಿಲ್ಲೆಯ ಕುರ್ವಕಲಾ, ಕುರ್ವಖುರ್ಧಾ, ನಾರದಗಡ್ಡೆ, ದತ್ತಪೀಠ ಮತ್ತು ಸೂಲಗುಡ್ಡ ಗ್ರಾಮಗಳಿಗೆ ಬಸ್ ಪ್ರಯಾಣವಿಲ್ಲ. ಉಳಿದೆಲ್ಲಾ ಜಿಲ್ಲೆಯ ಜನರು ಉಚಿತ ಬಸ್ ಸ್ಕೀಮ್ ಪಡೆದರೆ ಈ ನಾಲ್ಕು ಗ್ರಾಮದ ಜನರು ಬಸ್ ಸೌಕರ್ಯಗಳೇ ಇಲ್ಲದೆ ತೆಪ್ಪದಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.
ತೆಪ್ಪದ ಮೂಲಕ ಪ್ರಯಾಣ
ಅಂದಹಾಗೆಯೇ ಈ ನಾಲ್ಕು ಗ್ರಾಮಗಳು ಕೃಷ್ಣಾ ನದಿಯ ದಡದಲ್ಲಿರುವ ಗ್ರಾಮಗಳಾಗಿವೆ. ಇಲ್ಲಿನ ಜನರು ತೆಪ್ಪದ ಮೂಲಕವೇ ಪ್ರಯಾಣಿಸಬೇಕಾದ ದುಸ್ಥಿತಿ ಇವರಿಗಿದೆ. ಈ 4 ಗ್ರಾಮಗಳ ನಾಲ್ಕು ದಿಕ್ಕಿನಲ್ಲಿ ಕೃಷ್ಣ ನದಿಯ ಹರಿಯುತ್ತಿದ್ದು, ಹೀಗಾಗಿ ಫ್ರೀ ಬಸ್ ಯೋಜನೆಯಿಂದ ವಂಚಿತರಾಗಿದ್ದಾರೆ.
15 ವರ್ಷದಿಂದ ಪೂರ್ಣಗೊಂಡಿಲ್ಲ ಸೇತುವೆ
ಇನ್ನು 15 ವರ್ಷಗಳಿಂದ ಸೇತುವೆ ನಿರ್ಮಿಸಲಾಗುತ್ತಿದ್ದು, ಇದುವರೆಗೆ ಸೇತುವೆ ಪೂರ್ಣಗೊಂಡಿಲ್ಲ. ಹೀಗಾಗಿ ಈ ವರೆಗೆ ಬಸ್ ಸೇರಿ ವಾಹನಗಳ ಸೇವೆ ನಾಲ್ಕು ಗ್ರಾಮದ ಜನರಿಗೆ ಸಿಕ್ಕಿಲ್ಲ.
ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಜನರೆಲ್ಲಾ ತೆಪ್ಪಗಳ ಮೂಲಕ ಪ್ರಯಾಣ ಮಾಡಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ತೆಪ್ಪದಲ್ಲಿ ಪ್ರಯಾಣಿಸುವುದಕ್ಕೆ ಸುಮಾರು 50 ರೂ ಚಾರ್ಜ್ ಮಾಡಬೇಕಿದೆ.
ಗ್ರಾಮದ ಜನರು ಎಲ್ಲೇ ಪ್ರಯಾಣಿಸಬೇಕಾದರೂ ತೆಪ್ಪವೇ ಇವರ ಖಾಸಗಿ ಸಾರಿಗೆಯಾಗಿದೆ. ಇದರ ಮೂಲಕ ತೆಪ್ಪಗಳ ಮೂಲಕವೇ ಕುರ್ವಕಲಾ, ಕುರ್ವಖುರ್ಧಾ, ನಾರದಗಡ್ಡೆ, ದತ್ತಪೀಠ ಮತ್ತು ಸೂಲಗುಡ್ಡ ಗ್ರಾಮದ ಜನರು ಪ್ರಯಾಣಿಸುತ್ತಿದ್ದಾರೆ. ಹೀಗಿದ್ದರು ಸೇತುವೆ ನಿರ್ಮಾಣ ಶುರು ಮಾಡಿ 15 ವರ್ಷ ಕಳೆದರು ಮುಕ್ತಿ ಸಿಕ್ಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ