ಚಿನ್ನದ ಬೇಟೆಗೆ ಮೊದಲ ಹೆಜ್ಜೆಯಿಟ್ಟ ಪಿ.ವಿ.ಸಿಂಧು: ಮಾಲ್ಡೀವ್ಸ್​ನ ಫಾತಿಮಾ ವಿರುದ್ಧ ಭರ್ಜರಿ ಗೆಲುವು

author-image
Gopal Kulkarni
Updated On
ಚಿನ್ನದ ಬೇಟೆಗೆ ಮೊದಲ ಹೆಜ್ಜೆಯಿಟ್ಟ ಪಿ.ವಿ.ಸಿಂಧು: ಮಾಲ್ಡೀವ್ಸ್​ನ ಫಾತಿಮಾ ವಿರುದ್ಧ ಭರ್ಜರಿ ಗೆಲುವು
Advertisment
  • ಚಿನ್ನದ ಬೇಟೆಗೆ ಮೊದಲ ಹೆಜ್ಜೆಯಲ್ಲಿ ಗೆಲುವ ದಾಖಲಿಸಿದ ಸಿಂಧು
  • ಮಾಲ್ಡೀವ್ಸ್​ನ ಫಾತಿಮಾ ವಿರುದ್ಧ ಸುಲಭ ಜಯ ಪಡೆದ ಪಿ.ವಿ.ಸಿಂಧು
  • ಕೇವಲ 29 ನಿಮಿಷಗಳಲ್ಲಿ ಮಾಲ್ಡೀವ್ಸ್ ಆಟಗಾರ್ತಿ ಸೋಲಿಗೆ ಶರಣು

ಪ್ಯಾರಿಸ್: ಫ್ರಾನ್ಸ್ ಅಂಗಳದಲ್ಲಿ ಭಾರತೀಯ ಕ್ರೀಡಾಳುಗಳು ಅದ್ಭುತ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಈಗಾಗಲೇ ಬ್ಯಾಡ್ಮಿಂಟನ್ ಡಬಲ್ಸ್​​ನಲ್ಲಿ ಸಾತ್ವಿಕ್-ಚಿರಾಗ್​ ಜೋಡಿ ಬಂಗಾರದ ಪದಕ ಬೇಟೆಗೆ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿಟ್ಟಿದ್ದಾರೆ. ಇತ್ತ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್​​​ನಲ್ಲೂ ಎರಡು ಬಾರಿ ಪದಕ ವಿಜೇತೆ, ಪಿ.ವಿ.ಸಿಂಧು ಕೂಡ ಚಿನ್ನದ ಬೇಟೆಯ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿಟ್ಟಿದ್ದಾರೆ.

ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಕೇಳಿ ಬಂದ ಅಪಸ್ವರ.. ತಂಡದ ನಾಯಕನ ಸ್ಥಾನಕ್ಕಾಗಿ ಬೂಮ್ರಾ ಓಪನ್ ಚಾಲೆಂಜ್!

ಪ್ಯಾರಿಸ್​ನಲ್ಲಿ ಮಾಲ್ಡೀವ್ಸ್​ನ ಫಾತಿಮಾ ನಬ್ಹಾ ಅಬ್ದುಲ್ ರಜಾಕ್ ವಿರುದ್ಧ ನಡೆದ ಕದನದಲ್ಲಿ ಫಾತಿಮಾರನ್ನು ಸುಲಭ ತುತ್ತಾಗಿಸಿಕೊಂಡಿದ್ದಾರೆ ಪಿ.ವಿ.ಸಿಂಧು. ಕೇವಲ 29 ನಿಮಿಷಗಳಲ್ಲಿ ಫಾತಿಮಾ ವಿರುದ್ಧ ಸುಲಭ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪಿ.ವಿ.ಸಿಂಧು ಗೆಲುವಿನ ಮೊದಲ ಮೆಟ್ಟಿಲನ್ನೇರಿದ್ದಾರೆ. ಎರಡು ಸುತ್ತಿನ ಆಟದಲ್ಲಿ 21-9, 21-6 ಪಾಯಿಂಟ್ಸ್​ ಅಂತರದಲ್ಲಿ ಫಾತಿಮಾ ವಿರುದ್ಧ ಗೆಲುವು ದಾಖಲಿಸಿಕೊಳ್ಳುವುದರ ಮೂಲಕ ಸಿಂಧು ಬಂಗಾರ ಪದಕದ ಬೇಟೆಯತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment