/newsfirstlive-kannada/media/post_attachments/wp-content/uploads/2024/06/Casino_NEW.jpg)
- ವ್ಯಕ್ತಿ ಕ್ಯಾಸಿನೊದಲ್ಲಿ ಎಷ್ಟು ಕೋಟಿ ರೂಪಾಯಿಗಳನ್ನ ಗೆದ್ದಿದ್ದ.?
- ಕೋಟಿ ಕೋಟಿ ಹಣ ಗೆದ್ದ ಮರುಕ್ಷಣದಲ್ಲೇ ಕಾರ್ಡಿಕ್ ಅರೆಸ್ಟ್
- ಯಾವಗಲೂ ಕ್ಯಾಸಿನೊದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದನು
ಕ್ಯಾಸಿನೊ ಗೇಮ್​​ನಲ್ಲಿ ಬರೋಬ್ಬರಿ 33 ಕೋಟಿ ರೂಪಾಯಿಗಳನ್ನು ಗೆದ್ದ ಖುಷಿಯಲ್ಲಿ ವ್ಯಕ್ತಿಯೊಬ್ಬರು ಕಾರ್ಡಿಯಾಕ್ ಅರೆಸ್ಟ್​​ನಿಂದ (ಹೃದಯ ಸ್ತಂಭನ) ಸಾವನ್ನಪ್ಪಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಿಂಗಾಪುರದ ಮರೀನಾ ಬೇಯಲ್ಲಿ ಕ್ಯಾಸಿನೊ ಗೇಮ್ ಸಖತ್ ಫೇಮಸ್ ಆಗಿದೆ. ಈ ಗೇಮ್​ ಆಡಲೆಂದೆ ವ್ಯಕ್ತಿಯೊಬ್ಬರು ಯಾವಾಗಲೂ ಕ್ಯಾಸಿನೊಗೆ ಬರುತ್ತಿದ್ದರು. ಆದರೆ ಯಾವಾಗ ಬಂದರು ಸೋತು ಬೇಸರದಿಂದ ಹೋಗುತ್ತಿದ್ದರು. ಆದರೆ ಈ ಬಾರಿ ಅವರಿಗೆ ಒಂದು ಕೋಟಿ ರೂ. ಅಲ್ಲ, 10 ಕೋಟಿ ರೂ. ಅಲ್ಲ, ಬರೋಬ್ಬರಿ 33,42,61,604 ರೂಪಾಯಿಗಳ ಜಾಕ್​ಪಾಟ್ ಹೊಡೆದಿದೆ. ಇದರಿಂದ ಗೇಮಿಂಗ್​ ಕಟ್ಟಡದಲ್ಲಿ ವ್ಯಕ್ತಿಯ ಸಂಭ್ರಮ ಮುಗಿಲು ಮುಟ್ಟಿತ್ತು.
Marina Bay Singapore Casino:
He won 4 million dollars and the excitement got a cardiac arrest and died pic.twitter.com/lu4O36bUM3— ? Ali Al Samahi ? (@alsamahi) June 23, 2024
ಕೋಟಿ ಕೋಟಿ ಹಣ ಗೆದ್ದು ಅತಿಯಾದ ಉತ್ಸಾಹದಿಂದ ವ್ಯಕ್ತಿ ಫುಲ್ ಎಕ್ಸೈಟ್​​ಮೆಂಟ್​ನಲ್ಲಿದ್ದರು. ಅವರ ಇಡೀ ಜೀವನನ್ನೇ ಇದೊಂದು ಕ್ಯಾಸಿನೊ ಆಟದ ಜಾಕ್​ಪಾಟ್ ಬದಲಿಸಿತ್ತು. ಆದರೆ ಇಂತಹ ಖುಷಿಯಲ್ಲಿದ್ದ ವ್ಯಕ್ತಿಗೆ ಕಾರ್ಡಿಕ್ ಅರೆಸ್ಟ್​​ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಕ್ಯಾಸಿನೊದ ತುರ್ತು ವೈದ್ಯಕೀಯ ಸೇವೆಗಳು ಹಾಗೂ ಅದರ ಸಿಬ್ಬಂದಿ ತಕ್ಷಣ ಅವರನ್ನು ಪರೀಕ್ಷಿಸಿದ್ದಾರೆ. ಆದರೆ ಅವರು ಕಾರ್ಡಿಕ್ ಅರೆಸ್ಟ್​​ ಆದ ತಕ್ಷಣವೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. 33 ಕೋಟಿ ಹಣ ಗೆದ್ದಾಗ ಅವರಲ್ಲಿ ಆದ ತೀವ್ರ ಉತ್ಸಾಹವೇ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ