Advertisment

ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ’; ಬಿಗ್​ಬಾಸ್​ ಸ್ಪರ್ಧಿ ಮೇಲೆ ಗಾಯಕ​ ಅರ್ಮಾನ್ ಮಲಿಕ್​ ಕೆಂಡಾಮಂಡಲ

author-image
Veena Gangani
Updated On
ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ’; ಬಿಗ್​ಬಾಸ್​ ಸ್ಪರ್ಧಿ ಮೇಲೆ ಗಾಯಕ​ ಅರ್ಮಾನ್ ಮಲಿಕ್​ ಕೆಂಡಾಮಂಡಲ
Advertisment
  • ಇಬ್ಬರು ಹೆಂಡತಿಯರ ಜೊತೆ ಬಿಗ್​​ ಮನೆಗೆ ಎಂಟ್ರಿ ಕೊಟ್ಟಿದ್ದ ಅರ್ಮಾನ್ ಮಲಿಕ್​
  • ಆತನ ಹೆಸರನ್ನು ಅರ್ಮಾನ್ ಮಲಿಕ್ ಎಂದು ಬದಲಾಯಿಸಿಕೊಂಡ ಯೂಟ್ಯೂಬರ್​
  • ಈ ಬಾರಿಯ ಬಿಗ್​ಬಾಸ್​ ಓಟಿಟಿ ನನಗೆ ಕಿರಿಕಿರಿ ಉಂಟು ಮಾಡುತ್ತಿದೆ- ಗಾಯಕ

ಹಿಂದಿ ಬಿಗ್​ಬಾಸ್ ಒಟಿಟಿ ಸೀಸನ್​ 3 ಈ ಸಲ ಸಖತ್​ ಸದ್ದು ಮಾಡುತ್ತಿದೆ. ಈ ಬಾರಿಯ ಬಿಗ್​ಬಾಸ್​ ರಿಯಾಲಿಟಿ ಶೋಗೆ ಯೂಟ್ಯೂಬರ್ ಅರ್ಮಾನ್ ಮಲಿಕ್ ತಮ್ಮ ಇಬ್ಬರು ಹೆಂಡತಿಯರಾದ ಕೃತಿಕಾ ಮತ್ತು ಪಾಯಲ್ ಜೊತೆ ಎಂಟ್ರಿ ಕೊಟ್ಟಿದ್ದರು. ಇದೀಗ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಹೈಡ್ರಾಮ ನಡೆದಿದ್ದು, ಸಹ ಕಂಟೆಸ್ಟಂಟ್ ವಿಶಾಲ್​​​ಗೆ ಅರ್ಮಾನ್ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

Advertisment

publive-image

ಇದನ್ನೂ ಓದಿ:ಅನಿಲ್ ಅಂಬಾನಿ ಸಾಮ್ರಾಜ್ಯಕ್ಕೆ ಹೊಸ ಆಶಾಕಿರಣ.. ಜೈ ಅನ್ಮೋಲ್ ಯಶಸ್ಸಿನ ಗುಟ್ಟೇನು ಗೊತ್ತಾ?

ನಿನ್ನ ಹೆಂಡ್ತಿ ಸುಂದರವಾಗಿದ್ದಾಳೆ ಅಂತ ಹೇಳಿದ್ದ್ದಕ್ಕೆ ಸಹ ಸ್ಪರ್ಧಿಗೆ ಯೂಟ್ಯೂಬರ್ ಅರ್ಮಾನ್ ಮಲಿಕ್ ವಿಶಾಲ್​​ ಅವರಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಮಲಿಕ್​​ ಎರಡನೇ ಪತ್ನಿ ಕೃತಿಕಾಗೆ ಬಾಬಿ ಚೆನ್ನಾಗಿದ್ದಾಳೆ ಎಂದು ವಿಶಾಲ್ ಕಾಮೆಂಟ್ ಮಾಡಿದ್ದಾರೆ. ಇದು ಅರ್ಮಾನ್​ಗೆ ಇಷ್ಟವಾಗದೇ ಮಾತಿಗೆ ಮಾತು ಬೆಳೆದು ಅರ್ಮಾನ್ ವಿಶಾಲ್ ಕೆನ್ನೆಗೆ ಭಾರಿಸಿದ್ದಾನೆ. ಇದೀಗ ಈ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.

publive-image

ಅರ್ಮಾನ್ ಮಲ್ಲಿಕ್ ಇಬ್ಬರು ಪತ್ನಿಯರಲ್ಲಿ, ಮೊದಲ ಪತ್ನಿ ಪಾಯಲ್ ಬಿಗ್​ಬಾಸ್​ ಮನೆಯಿಂದ ಹೊರ ಬಂದಿದ್ದಾರೆ. ಎರಡನೇ ಪತ್ನಿ ಕೃತಿಕಾ ಬಿಗ್ ಮನೆಯಲ್ಲಿದ್ದಾರೆ. ವಿಶಾಲ್ ಪಾಂಡೆ, ಲವಕೇಶ್ ಕಟಾರಿಯಾ ಜೊತೆ ಮಾತನಾಡುವಾಗ ಕೃತಿಕಾಳ ಸೌಂದರ್ಯ ಬಗ್ಗೆ ಹಾಡಿ ಹೊಗಳಿದ್ದಾರೆ. ಹಾಗಾಗಿ ಅರ್ಮಾನ್, ವಿಶಾಲ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ವಿಶಾಲ್ ಮೇಲೆ ಕೈ ಮಾಡಿದ್ದಾರೆ. ಹಲ್ಲೆ ಮಾಡಿದ ವಿರುದ್ಧ ವಿಶಾಲ್ ಫ್ಯಾಮಿಲಿ ಮತ್ತು ಸೆಲೆಬ್ರಿಟಿಗಳು ಅರ್ಮಾನ್ ವಿರುದ್ಧ ಕಿಡಿ ಕಾರಿದ್ದಾರೆ. ಬಿಗ್​ಬಾಸ್​ ರೂಲ್ಸ್ ಪ್ರಕಾರ ಮ್ಯಾನ್ ಹ್ಯಾಂಡಲಿಂಗ್ ಮಾಡಿದವ್ರನ್ನ ಶೋನಿಂದ ಹೊರಹಾಕಬೇಕು.

Advertisment

ಇದನ್ನೂ ಓದಿ:ಕೊನೆಗೂ ಬದಲಾದ ದಾಸ.. ಜೈಲಿನಲ್ಲಿ ನಗು, ನಗುತ್ತಾ ಕಾಲ ಕಳೆಯುತ್ತಿರುವ ದರ್ಶನ್‌; ಏನಾಯ್ತು ಗೊತ್ತಾ?

ಹೀಗೆ ಮಾಡಿದ್ದರಿಂದ ಈ ಹಿಂದೆ ಬಿಗ್ ಬಾಸ್ 7ರಿಂದ ನಟ ಕುಶಾಲ್ ಟಂಡನ್​ನ್ನು ಹೊರಹಾಕಲಾಗಿತ್ತು. ಅರ್ಮಾನ್ ಮಲಿಕ್ ಸಹ ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ ಮೇಲೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಸುಂದರವಾಗಿದ್ದಾಳೆ ಅಂದ್ರೆ ಸ್ಪರ್ಧಿ ಮೇಲೆ ಕೈ ಮಾಡೋದು ಎಷ್ಟು ಸರಿ ಎಂದು ಸಹ ಪ್ರಶ್ನಿಸಿದ್ದಾರೆ. ಇನ್ನೊಂದು ಕಡೆ ಸಿಂಗರ್ ಅರ್ಮಾನ್ ಮಲ್ಲಿಕ್​ಗೆ ಬಿಗ್​ಬಾಸ್​ ಓಟಿಟಿ ಸೀಸನ್ ಕಿರಿಕಿರಿ ಉಂಟು ಮಾಡ್ತದೆಯಂತೆ. ಏಕೆಂದರೆ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಅರ್ಮಾನ್ ಮಲ್ಲಿಕ್ ಬದಲಿಗೆ ಸಿಂಗರ್ ಅರ್ಮಾನ್ ಮಲ್ಲಿಕ್​ನ ಟ್ಯಾಗ್ ಮಾಡುತ್ತಿದ್ದಾರೆ. ಇದು ಸಹಜವಾಗೇ ಗಾಯಕ ಅರ್ಮಾನ್​ಗೆ ಸಿಟ್ಟು ತರಿಸಿದೆ.

Advertisment


">July 8, 2024

 publive-image

ಇದನ್ನೂ ಓದಿ:ದೇವರು ಇಚ್ಛಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ.. ನಾಯಕತ್ವದ ಬಗ್ಗೆ ಸೂರ್ಯ ಕುಮಾರ್ ಏನಂದ್ರು ಗೊತ್ತಾ?

ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ನಾನೇ ಬೇರೆ. ಬಿಗ್​ಬಾಸ್ ಶೋನಲ್ಲಿ ಇರೋ ಅರ್ಮಾನೇ ಬೇರೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಸಂದೀಪ್ ಅನ್ನೋರು ನನ್ನ ಹೆಸರನ್ನೇ ಇಟ್ಟುಕೊಂಡು ಬಿಗ್​ಬಾಸ್ ಹಿಂದಿ ಓಟಿಟಿ ಶೋಗೆ ಬಂದಿದ್ದಾರೆ. ಇದರಿಂದ ಸಾಕಷ್ಟು ಜನರಿಗೆ ಕನ್​ಫ್ಯೂಸ್​​ ಆಗುತ್ತಿದೆ. ನನ್ನ ಲೈಫ್​ ಸ್ಟೈಲ್ ಬೇರೆ, ಅವರ ಲೈಫ್​ ಸ್ಟೈಲ್ ಬೇರೆ.. ಇದರಿಂದ ನನ್ನ ಖ್ಯಾತಿಗೆ ಚುಕ್ಕೆ ಇಟ್ಟಂತೆ ಆಗ್ತಿದೆ. ದಯವಿಟ್ಟು ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನನಗೆ ಟ್ಯಾಗ್ ಮಾಡಬೇಡಿ ಅಂತ ರಿಕ್ಟೆಸ್ಟ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಹಿಂದಿ ಬಿಗ್​ಬಾಸ್​ ಓಟಿಟಿ ಸಕತ್ ಸದ್ದು ಮಾಡ್ತಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment