newsfirstkannada.com

‘ಶ್ರೀರಾಮ, ಜಯ ರಾಮ, ಜಯ ಜಯ ರಾಮ’- ಗಾಯಕಿ ಚಿತ್ರಾ ಮೇಲೆ ಆಕ್ರೋಶ; ಕಾರಣವೇನು?

Share :

Published January 16, 2024 at 9:11pm

  ಜನವರಿ 22 ರಂದು ಮಧ್ಯಾಹ್ನ 12.20ಕ್ಕೆ ರಾಮನ ಧ್ಯಾನ ಮಾಡಿ ಗಾಯಕಿ ಕರೆ

  ಶ್ರೀರಾಮ, ಜಯ ರಾಮ, ಜಯ ಜಯ ರಾಮ ಮಂತ್ರವನ್ನು ಪಠಿಸಿ ಎಂದು ಮನವಿ

  ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾದ ಕೆ. ಎಸ್. ಚಿತ್ರಾ ವಿಡಿಯೋ

ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆಯ ವಿಧಿವಿಧಾನ ಇಂದಿನಿಂದಲೇ ಆರಂಭವಾಗಲಿವೆ. ಸಂಪ್ರದಾಯ ಬದ್ಧವಾಗಿ ರಾಮನ ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳು ನಡೆದಿವೆ. ಇದೇ ಹೊತ್ತಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಚಿತ್ರಾ ಅವರು ಆಕ್ರೋಶಕ್ಕೆ ಗುರಿಯಾಗಿದ್ದಾರೆ. ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಸಂದರ್ಭದಲ್ಲಿ ರಾಮ ನಾಮ ಭಜನೆ ಮಾಡಿ ಎಂದು ಖ್ಯಾತ ಹಿನ್ನೆಲೆ ಗಾಯಕಿ ಕೆ. ಎಸ್. ಚಿತ್ರಾ ವಿಡಿಯೋ ಮಾಡಿದ್ದರು. ಗಾಯಕಿ ವಿಡಿಯೋ ಸಂದೇಶ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಆದರೆ ಇದೀಗ ಗಾಯಕಿ ಕೆ. ಎಸ್. ಚಿತ್ರಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಎರಡು ದಿನಗಳ ಹಿಂದಷ್ಟೇ ಕೆ. ಎಸ್. ಚಿತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪುಟ್ಟದೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋದಲ್ಲಿ ಚಿತ್ರಾ ಅವರು ಜನವರಿ 22 ರಂದು ಮಧ್ಯಾಹ್ನ 12.20ಕ್ಕೆ ಎಲ್ಲರೂ ‘ಶ್ರೀರಾಮ, ಜಯ ರಾಮ, ಜಯ ಜಯ ರಾಮ’ ಎಂಬ ಮಂತ್ರವನ್ನು ಭಜನೆ ಮಾಡುವಂತೆ ಮಲೆಯಾಳಂ ಭಾಷೆಯಲ್ಲಿ ಕರೆ ನೀಡಿದರು. ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಲ್ಲಿ ಎಲ್ಲರೂ ರಾಮ ನಾಮ ಭಜಿಸಿ ಧ್ಯಾನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವಂತೆ, ಕೃತಾರ್ಥರಾಗುವಂತೆ ಕೆ. ಎಸ್. ಚಿತ್ರಾ ಕರೆ ನೀಡಿದ್ದರು.

ಇನ್ನು, ಈ ವಿಡಿಯೋ ನೋಡಿದ ಅನೇಕರು ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡುತ್ತಾರೆ. ಈ ರೀತಿಯ ವಿಡಿಯೋ ಮಾಡಿ ಯಾವ ರೀತಿ ಸಂದೇಶ ರವಾನೆ ಮಾಡ್ತಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಕ ಜಿ. ವೇಣುಗೋಪಾಲ್ ಕೂಡಾ ಚಿತ್ರಾ ಅವರ ಪರ ನಿಂತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಾ ಅವರ ಅವಹೇಳನ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದಿದ್ದಾರೆ. ಸಿನಿಮಾ ಗೀತೆಗಳ ಹಿನ್ನೆಲೆ ಗಾಯಕಿ ಆಗಿರುವ ಕೆ. ಎಸ್. ಚಿತ್ರಾ, ರಾಷ್ಟ್ರೀಯ ಪ್ರಶಸ್ತಿ ವಿಜೇತರು ಆಗಿದ್ದಾರೆ. ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳ ಗೀತೆಗಳ ಗಾಯನ ಮಾಡಿರುವ ಕೆ. ಎಸ್. ಚಿತ್ರಾ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಶ್ರೀರಾಮ, ಜಯ ರಾಮ, ಜಯ ಜಯ ರಾಮ’- ಗಾಯಕಿ ಚಿತ್ರಾ ಮೇಲೆ ಆಕ್ರೋಶ; ಕಾರಣವೇನು?

https://newsfirstlive.com/wp-content/uploads/2024/01/singar.jpg

Load More