ಬರ್ತ್​ ಡೇ ಪಾರ್ಟಿಯಲ್ಲಿ ನಶೆಯ ಅಮಲು.. ಸ್ಟಾರ್​ ಗಾಯಕಿ ಮಂಗ್ಲಿ ಹೇಳಿದ್ದೇನು?

author-image
Veena Gangani
Updated On
ಬರ್ತ್​ ಡೇ ಪಾರ್ಟಿಯಲ್ಲಿ ನಶೆಯ ಅಮಲು.. ಸ್ಟಾರ್​ ಗಾಯಕಿ ಮಂಗ್ಲಿ ಹೇಳಿದ್ದೇನು?
Advertisment
  • 48 ಮಂದಿಯ ಡ್ರಗ್ಸ್ ಪರೀಕ್ಷೆಯಲ್ಲಿ 9 ಜನಕ್ಕೆ ಡ್ರಗ್ಸ್ ಪಾಸಿಟಿವ್
  • ಮಂಗ್ಲಿ ಬರ್ತ್ ಡೇ ಪಾರ್ಟಿ ಮೇಲೆ ಏಕಾಏಕಿ ಪೊಲೀಸ್ ದಾಳಿ
  • ತನ್ನ ಬರ್ತ್​ ಡೇ ಪಾರ್ಟಿಯಲ್ಲಿ ಏನೆಲ್ಲಾ ಆಯ್ತು? ಮಂಗ್ಲಿ ಏನಂದ್ರು?

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಖ್ಯಾತ ಗಾಯಕಿ ಮಂಗ್ಲಿ ಅವರಿಗೆ ಪೊಲೀಸರು ಶಾಕ್​ ಕೊಟ್ಟಿದ್ದಾರೆ. ರೆಸಾರ್ಟ್​ನಲ್ಲಿ ಬರ್ತ್​ ಡೇ ಪಾರ್ಟಿ ಮಾಡುತ್ತಿದ್ದಾಗ ಏಕಾಏಕಿ ಪೊಲೀಸರು ದಾಳಿ ಮಾಡಿ ತೀವ್ರ ಶೋಧ ನಡೆಸಿದ್ದಾರೆ.

ಇದನ್ನೂ ಓದಿ: ಅಣ್ಣಾವ್ರ ಮನೆಯಲ್ಲಿ ಅಮೃತಾಧಾರೆ ಸೀರಿಯಲ್​ ನಟ ರಾಜೇಶ್​ ನಟರಂಗ್; ಏನಾದ್ರೂ ವಿಶೇಷ ಉಂಟಾ?

ಗಾಯಕಿ ಮಂಗ್ಲಿ ಅವರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದ ತ್ರಿಪುರಾ ರೆಸಾರ್ಟ್‌ನಲ್ಲಿ ಮೊನ್ನೆ ತಮ್ಮ ಬರ್ತ್‌ ಡೇ ಪಾರ್ಟಿ ಆಯೋಜನೆ ಮಾಡಿದ್ದರು. ಪೊಲೀಸರು ಈ ಪಾರ್ಟಿ ಮೇಲೆ ರೇಡ್ ಮಾಡಿದ್ದು, ಕಾರ್ಯಕ್ರಮದ ಆಯೋಜಕರಿಂದ ಅಪಾರ ಪ್ರಮಾಣದ ವಿದೇಶಿ ಮದ್ಯ, ಡ್ರಗ್ಸ್​ ವಶಕ್ಕೆ ಪಡೆದಿದ್ದಾರೆ.

ಮಂಗ್ಲಿ ಬರ್ತ್‌ ಡೇ ಪಾರ್ಟಿಯಲ್ಲಿ ಆಪ್ತ ಸ್ನೇಹಿತರು, ಕುಟುಂಬಸ್ಥರು ಸೇರಿ 48 ಮಂದಿಯಷ್ಟೇ ಭಾಗಿಯಾಗಿದ್ದರು. 48 ಮಂದಿಯ ಡ್ರಗ್ಸ್ ಪರೀಕ್ಷೆಯಲ್ಲಿ 9 ಜನಕ್ಕೆ ಡ್ರಗ್ಸ್ ಪಾಸಿಟಿವ್ ಬಂದಿದೆ. NDPS ಆ್ಯಕ್ಟ್ ಹಾಗೂ ಶಬ್ದ ಮಾಲಿನ್ಯ ಕಾಯಿದೆಯಡಿ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


">June 11, 2025

ಇನ್ನೂ, ಇದೇ ವಿಚಾರಕ್ಕೆ ಸಂಬಂಧಿಸಿದ್ದಂತೆ ಗಾಯಕಿ ಮಂಗ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪೋಷಕರ ಕೋರಿಕೆಯ ಮೇರೆಗೆ ನಾನು ಸ್ನೇಹಿತರು ಮತ್ತು ಸಂಬಂಧಿಕರಿಗಾಗಿ ಒಂದು ಸಣ್ಣ ಪಾರ್ಟಿಯನ್ನು ಆಯೋಜಿಸಿದ್ದೆ. ಮದ್ಯ ಮತ್ತು ಧ್ವನಿಮುದ್ರಣಕ್ಕೆ ಅನುಮತಿ ಅಗತ್ಯವಿದೆ ಎಂದು ನನಗೆ ತಿಳಿದಿರಲಿಲ್ಲ. ಯಾವುದೇ ಡ್ರಗ್ಸ್ ಬಳಸಿಲ್ಲ, ಸ್ಥಳೀಯ ಮದ್ಯವನ್ನ ಮಾತ್ರ ಕೊಡಲಾಗಿತ್ತಿತ್ತು. ಮಾದಕ ದ್ರವ್ಯ ಸೇವನೆಗೆ ಪಾಸಿಟಿವ್​ ಪರೀಕ್ಷೆ ನಡೆಸಿದ ವ್ಯಕ್ತಿ ಬೇರೆಡೆ ಸೇವಿಸಿದ್ದಾನೆ. ಪೊಲೀಸರು ಅದನ್ನ ತನಿಖೆ ಮಾಡುತ್ತಿದ್ದಾರೆ. ದಯವಿಟ್ಟು ಯಾವುದೇ ಆರೋಪಗಳನ್ನ ಮಾಡಬೇಡಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment