/newsfirstlive-kannada/media/post_attachments/wp-content/uploads/2025/06/Mangli-birthday-party-2.jpg)
ಗಾಯಕಿ ಮಂಗ್ಲಿ ಬರ್ತ್ ಡೇ ಪಾರ್ಟಿ ಮೇಲೆ ಪೊಲೀಸರು ರೇಡ್ ಮಾಡಿದ್ದು, ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು. ಪೊಲೀಸರ ತನಿಖೆ ಬಳಿಕ ಖುದ್ದು ಮಂಗ್ಲಿ ಅವರೇ ಎಲ್ಲಾ ಅನುಮಾನ ಹಾಗೂ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಬರ್ತ್ ಡೇ ಪಾರ್ಟಿಗೆ ಪೊಲೀಸರ ದಾಳಿ ಕುರಿತಂತೆ ಮಂಗ್ಲಿ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಖುದ್ದು ಪೊಲೀಸರೇ ಹೇಳಿದ್ದಾರೆ. ನಮ್ಮ ಪಾರ್ಟಿಯಲ್ಲಿ ಡ್ರಗ್ಸ್ ಇರಲಿಲ್ಲ. ಪೊಲೀಸರಿಗೆ ಪಾರ್ಟಿ ಮಾಡಿದ ಜಾಗದಲ್ಲಿ ಲೋಕಲ್ ಮದ್ಯ ಬಿಟ್ಟು ಬೇರೆ ಏನೂ ಸಿಕ್ಕಿಲ್ಲ.
ನಾವು ಲೋಕಲ್ ಮದ್ಯ ಮತ್ತು ಸೌಂಡ್ ಸಿಸ್ಟಮ್ನ ಪಾರ್ಟಿಯಲ್ಲಿ ಬಳಸಿದ್ದು ನಿಜ. ನಾನು, ನನ್ನ ತಂದೆ, ತಾಯಿ, ಕುಟುಂಬಸ್ಥರು, ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದೇವೆ. ಮದ್ಯ, ಸೌಂಡ್ ಸಿಸ್ಟಮ್‌ಗೆ ಅನುಮತಿ ಪಡೆಯಬೇಕು ಅನ್ನೋದು ನನಗೆ ಗೊತ್ತಿರಲಿಲ್ಲ. ನನಗೆ ಗೊತ್ತಿದ್ದರೆ ಖಂಡಿತವಾಗಿಯೂ ನಾನು ಅನುಮತಿ ಪಡೆಯುತ್ತಿದ್ದೆ.
ಇದನ್ನೂ ಓದಿ: ಬರ್ತ್ ಡೇ ಪಾರ್ಟಿಯಲ್ಲಿ ನಶೆಯ ಅಮಲು.. ಸ್ಟಾರ್ ಗಾಯಕಿ ಮಂಗ್ಲಿ ಹೇಳಿದ್ದೇನು?
ನನ್ನ ತಂದೆ, ತಾಯಿ ಜೊತೆ ಹೋಗಿ ಈ ರೀತಿ ಮಾಡೋದಕ್ಕೆ ಆಗುತ್ತಾ? ನಮ್ಮ ಪಾರ್ಟಿಯಲ್ಲಿದ್ದ ಒಬ್ಬ ವ್ಯಕ್ತಿಗೆ ಡ್ರಗ್ಸ್ ಪಾಸಿಟಿವ್ ಬಂದಿತ್ತು. ಆದ್ರೆ ಆತ ಬೇರೆ ಎಲ್ಲೋ, ಯಾವಾಗಲೋ ಸೇವನೆ ಮಾಡಿದ್ದನಂತೆ ಎಂದು ಮಂಗ್ಲಿ ಅವರು ಹೇಳಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ