‘ಬಾ ಹುಡುಗಿ ಪಂಚಮಿಗೆ’ ಹಿಟ್ ಸಾಂಗ್ ಹಾಡಿದ್ದ ಜಾನಪದ ಗಾಯಕ ಇನ್ನಿಲ್ಲ

author-image
Bheemappa
Updated On
ಜಾನಪದ ಗಾಯಕ ಮಾರುತಿ ಲಟ್ಟೆ ಅಪಘಾತ ಕೇಸ್​​ಗೆ ಬಿಗ್​ ಟ್ವಿಸ್ಟ್; 5 ಸಾವಿರ ರೂಗಾಗಿ ಜೀವವನ್ನೇ ತೆಗೆದರು..
Advertisment
  • ಅಪಘಾತವಲ್ಲ ಉದ್ದೇಶ ಪೂರ್ವಕವಾಗಿ ಕೃತ್ಯವೆಂದು ಆರೋಪ
  • ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಕುಟುಂಬಸ್ಥರು ಆಗ್ರಹ
  • ಬಾ ಹುಡುಗಿ ಪಂಚಮಿಗೆ ಹಾಡು ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು

ಬೆಳಗಾವಿ: ಬಾ ಹುಡುಗಿ ಪಂಚಮಿಗೆ ಹಿಟ್ ಸಾಂಗ್​ ಹಾಡಿದಂತ ಜಾನಪದ ಗಾಯಕ ಭಯಾನಕ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯ ರಾಯಬಾಗ ತಾಲೂಕಿನ ಭೂದಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಾಯಬಾಗ ತಾಲೂಕಿನ ಭೂದಿಹಾಳ ಗ್ರಾಮದ ಯುವಕ ಗಾಯಕ ಮಾರುತಿ ಲಟ್ಟೆ (21) ನಿಧನರಾಗಿದ್ದಾರೆ. ತಾಲೂಕಿನ ಭೂದಿಹಾಳ ಗ್ರಾಮದ ಬಳಿ ಜುಲೈ 10 ರಂದು ಗುರುವಾರ ರಾತ್ರಿ ಬೈಕ್ ಹಾಗೂ ಕಾರಿನ ನಡುವೆ ಭಯಾನಕವಾದ ಅಪಘಾತ ಸಂಭವಿಸಿದೆ. ಈ ವೇಳೆ ಜಾನಪದ ಗಾಯಕ ಮಾರುತಿ ಲಟ್ಟೆ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ಪಾಕ್​ ನಟಿಯ ದುರಂತ ಅಂತ್ಯ.. 9 ತಿಂಗಳ ಹಿಂದೆಯೇ ಹೋದ ಜೀವ, ತನಿಖೆಯಲ್ಲಿ ಬೆಚ್ಚಿ ಬೀಳಿಸೋ ಅಂಶ ಪತ್ತೆ!

publive-image

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಾಯಬಾಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಕ ಮಾರುತಿ ಲಟ್ಟೆ ಅವರಿಗೆ ಅಪಘಾತವಾಗಿಲ್ಲ. ಯಾರೋ ಉದ್ದೇಶ ಪೂರ್ವಕವಾಗಿ ಈ ಕೃತ್ಯ ಎಸಗಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇನ್ನು ಈ ಘಟನೆ ಕುರಿತು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment