ಪೃಥ್ವಿ ಭಟ್ ಅದ್ಧೂರಿ ರಿಸೆಪ್ಶನ್​ಗೆ ಸೆಲೆಬ್ರಿಟಿಗಳ ದಂಡೇ ದೌಡು.. ಫೋಟೋಸ್ ಇಲ್ಲಿವೆ!​

author-image
Veena Gangani
Updated On
ಪೃಥ್ವಿ ಭಟ್ ಅದ್ಧೂರಿ ರಿಸೆಪ್ಶನ್​ಗೆ ಸೆಲೆಬ್ರಿಟಿಗಳ ದಂಡೇ ದೌಡು.. ಫೋಟೋಸ್ ಇಲ್ಲಿವೆ!​
Advertisment
  • ವಿಜಯ್ ಪ್ರಕಾಶ್​ ದಂಪತಿ, ಹಂಸಲೇಖ ಪತ್ನಿ ಸೇರೆ ಯಾರೆಲ್ಲಾ ಬಂದ್ರು?
  • ಮಾರ್ಚ್‌ 27ರಂದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ ಜೋಡಿ
  • ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್‌ ಸದ್ಯ ಸಖತ್ ಖುಷಿಯಲ್ಲಿದ್ದಾರೆ

ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್‌ ಸದ್ಯ ಸಖತ್ ಖುಷಿಯಲ್ಲಿದ್ದಾರೆ. ತಮ್ಮ ಅದ್ಭುತ ಕಂಠದಿಂದಲೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ಅವರು ಕೆಲ ಸಿನಿಮಾಗಳಿಗೆ ಹಾಡು ಕೂಡ ಫೇಮಸ್ ಆಗಿದ್ದಾರೆ.

publive-image

ಇದೀಗ ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್‌ ಅವರು ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಕಳೆದ ಮಾರ್ಚ್‌ 27ರಂದು ದೇವಸ್ಥಾನವೊಂದರಲ್ಲಿ ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಅವರು ಮದುವೆಯಾಗಿದ್ದರು.

ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಶಾಕಿಂಗ್​ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್

publive-image

ಈ ಮದುವೆಗೆ ಪೃಥ್ವಿ ಭಟ್‌ ತಂದೆ ಅವರ ವಿರೋಧ ವ್ಯಕ್ತಪಡಿಸಿದ್ದರು. ಮನೆಯವರಿಗೆ ತಿಳಿಸದೆ ಪೃಥ್ವಿ ಭಟ್‌ ಮದುವೆಯಾಗಿದ್ದಕ್ಕೇ ತಂದೆ ಕೋಪಗೊಂಡಿದ್ದರು. ಪೃಥ್ವಿ ಭಟ್‌ ಮೂಲತಃ ಕಾಸರಗೋಡಿನವರು.

publive-image

ಈ ಹಿಂದೆ ಪೃಥ್ವಿ ಭಟ್‌ ತಂದೆ ನನ್ನ ಮಗಳನ್ನು ವಶೀಕರಣ ಮಾಡಿ ಮದುವೆ ಮಾಡಲಾಗಿದೆ ಆರೋಪ ಮಾಡಿದ್ದರು. ಸಂಗೀತ ಪಾಠ ಹೇಳಿಕೊಡುವ ನರಹರಿ ದೀಕ್ಷಿತ್‌ ಇದಕ್ಕೆಲ್ಲ ಕಾರಣ ಎಂದು ಅವರು ಆರೋಪ ಮಾಡಿದ್ದರು.

publive-image

ಈ ಬಗ್ಗೆ ಖುದ್ದು ನರಹರಿ ದೀಕ್ಷಿತ್‌ ಅವರು ಪ್ರತಿಕ್ರಿಯಿಸಿ, ಎರಡೂವರೆ ವರ್ಷದಿಂದ ಅಭಿಷೇಕ್‌, ಪೃಥ್ವಿಯನ್ನು ಪ್ರೀತಿ ಮಾಡುತ್ತಿದ್ದ. ಇದು ನಮಗೆ ಗೊತ್ತಾದಾಗ ನಾನೇ ಪೃಥ್ವಿ ಮನೆಗೆ ಹೋಗಿ ತಂದೆ ಬಳಿ ಮಾತನಾಡಿದ್ದೇನೆ.

publive-image

ಇನ್ನೊಂದು ಹುಡುಗನನ್ನು ನೋಡಿ ಪೃಥ್ವಿ ನಿಶ್ಚಿತಾರ್ಥ ಮಾಡಲು ರೆಡಿಯಾದಾಗ ಪೃಥ್ವಿ ಈ ರೀತಿ ಮಾಡಿದ್ದಾಳೆ. ಪೃಥ್ವಿ ಮದುವೆ ಆಗುವ ದಿನವೇ ಅವಳು ಫೋನ್‌ ಮಾಡಿ ಅರ್ಜೆಂಟ್‌ ಇಲ್ಲಿಗೆ ಬನ್ನಿ ಸರ್ ಅಂತ ಹೇಳಿದಳು. ನಾನು ಹೋದಮೇಲೆ ಮದುವೆ ಆಗಿತ್ತು. ಅಕ್ಷತೆ ಕಾಳು ಹಾಕಿ ಬಂದೆ ಎಂದು ಹೇಳಿದ್ದರು.

publive-image

ಆದ್ರೇ ಇದೀಗ ಎರಡೂವರೆ ತಿಂಗಳುಗಳ ಬಳಿಕ ಪೃಥ್ವಿ ಭಟ್‌ ಹಾಗೂ ಅಭಿಷೇಕ್ ಆರತಕ್ಷತೆ ಮಾಡಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ನಾನ್‌ ಫಿಕ್ಷನ್‌ ವಿಭಾಗದಲ್ಲಿ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಆಗಿದ್ದ ಅಭಿಷೇಕ್ ಹಾಗೂ ಗಾಯಕಿ ಆರತಕ್ಷತೆ ಸಮಾರಂಭಕ್ಕೆ ಸಾಕಷ್ಟು ಸ್ಟಾರ್​ಗಳು ಬಂದು ಶುಭ ಹಾರೈಸಿದ್ದಾರೆ.

publive-image

ನಿರೂಪಕಿ ಅನುಶ್ರೀ, ನಟಿ ಮೋಕ್ಷಿತಾ, ಪೈ, ಬಿಗ್​ಬಾಸ್​ ಸೀಸನ್ 11ರ ವಿನ್ನರ್​, ಗಾಯಕ ಹನುಮಂತ ಲಮಾಣಿ ಬಂದಿದ್ದಾರೆ. ಅಲ್ಲದೇ ಸ್ಟಾರ್​ ಗಾಯಕ ವಿಜಯ್​ ಪ್ರಕಾಶ್ ದಂಪತಿ, ನಟ ಒಳ್ಳೆ ಹುಡುಗ ಪ್ರಥಮ್, ಸಿಂಗರ್ ಸುನೀಲ್,  ಹಂಸಲೇಖ ಅವರ ಪತ್ನಿ ಲತಾ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment