ಸರಿಗಮಪ ಸಿಂಗರ್ ಪೃಥ್ವಿ ಭಟ್‌ಗೆ ವಶೀಕರಣದ ಮದುವೆ? ಗಾಯಕಿ ತಂದೆ ಸ್ಫೋಟಕ ಆರೋಪ; ಹೇಳಿದ್ದೇನು?

author-image
Bheemappa
Updated On
ಸರಿಗಮಪ ಸಿಂಗರ್ ಪೃಥ್ವಿ ಭಟ್‌ಗೆ ವಶೀಕರಣದ ಮದುವೆ? ಗಾಯಕಿ ತಂದೆ ಸ್ಫೋಟಕ ಆರೋಪ; ಹೇಳಿದ್ದೇನು?
Advertisment
  • ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ್ರಾ ಗಾಯಕಿ ಪೃಥ್ವಿ ಭಟ್..?
  • ನಮ್ಮನ್ನ ಬಿಟ್ಟು ಹೋದ ಮೇಲೆ ಜಾತಿ ತಗೊಂಡು ಮಾಡೋದು ಏನಿಲ್ಲ
  • ಪೃಥ್ವಿ ಭಟ್ ಪ್ರೇಮವಿವಾಹ, ಸರಿಗಮಪ ಜ್ಯೂರಿ ಮೇಲೆ ಆರೋಪ

ಸರಿಗಮಪ ಗಾಯಕಿಯಾಗಿ ಮಿಂಚಿದ್ದ ಪೃಥ್ವಿ ಭಟ್ ಅವರು ತಮ್ಮ ಮನೆ ಹಾಗೂ ಪೋಷಕರನ್ನು ಬಿಟ್ಟು ಹೋಗಿದ್ದು ದೇವಾಲಯವೊಂದರಲ್ಲಿ ಮದುವೆಯಾಗಿದ್ದಾರೆ. ಕನ್ನಡದ ಯುವ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಈ ಸಂಬಂಧ ಗಾಯಕಿಯ ತಂದೆ ಅವರು ಮಾಡಿರುವ ಆರೋಪ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಾಯಕಿ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್​ ಅವರು ವೈರಲ್ ಆಗಿರುವ ಆಡಿಯೋದಲ್ಲಿ ಮಾತನಾಡಿರುವುದು ಹೀಗಿದೆ. ನನ್ನ ಮಗಳು ಕಳೆದ 20ನೇ ತಾರೀಖಿನಂದು ದೇವಾಸ್ಥಾನದಲ್ಲಿ ಯಾರನ್ನೋ ಮದುವೆ ಆಗಿದ್ದಾರೆ. ನಮ್ಮನ್ನು ಬಿಟ್ಟು ಹೋಗಿದ್ದು ಈಗ ನಮ್ಮ ಸಂಪರ್ಕದಲ್ಲಿ ಇಲ್ಲ. ಕನ್ನಡ ವಾಹಿನಿಯೊಂದರಲ್ಲಿ ಕೆಲಸ ಮಾಡುವ ಅಭಿಷೇಕ್ ಎನ್ನುವನ ಜೊತೆ ಮದುವೆ ಆಗಿದ್ದಾರೆ. ಅಭಿಷೇಕ್ ಹವ್ಯಕನೂ ಅಲ್ಲ, ಬ್ರಾಹ್ಮಣನೂ ಅಲ್ಲ. ಜಾತಿ ಯಾವುದಾದರೇನು, ಅವಳು ನಮ್ಮನ್ನು ಬಿಟ್ಟು ಹೋದ ಮೇಲೆ ಜಾತಿ ಕಟ್ಟಿಕೊಂಡು ಮಾಡೋದು ಏನಿಲ್ಲ ಎಂದು ಆಡಿಯೋದಲ್ಲಿ ಇದೆ.

publive-image

ಇದು ಯಾರೂ ನಿರೀಕ್ಷೆ ಮಾಡುವಂತ ಸಮಯವೇ ಅಲ್ಲ. ನಮ್ಮನ್ನು ಬಿಟ್ಟು ಹೋಗಿ 20 ಆಗಿ ಮರೆತು ಹೋಗಿದ್ದಾರೆ. ಮಗಳನ್ನು ಯಾವ ರೀತಿ ಬೆಳೆಸಿದ್ದೇವು ಅಂತ ನಿಮಗೆಲ್ಲಾ ಗೊತ್ತಿರಬಹುದು. ಪೃಥ್ವಿ ಭಟ್​ಳನ್ನು ಮದುವೆ ಮಾಡಿ ಕೊಟ್ಟಿದ್ದು ಗಿರಿನಗರದ ಭಯಂಕರ ಸಂಗೀತ ಶಿಕ್ಷಕ ಮಹಾದುಷ್ಟ ನರಹರಿ ದೀಕ್ಷಿತ್. ಇವನು ಬೇರೆ ಬೇರೆ ಕಡೆ ಕ್ಲಾಸ್​ಗಳನ್ನು ಮಾಡುತ್ತಾನೆ. ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಮಾಡಿದ್ದಾನೆ. ಇವನು ಮಾರ್ಚ್ 7 ರಂದು ನಾನೇ ಮನೆಗೆ ಕರೆಸಿದ್ದೇ. ಹವ್ಯಕ ಸಮುದಾಯದಲ್ಲಿ ಯಾರದರೂ ವರನಿದ್ರೆ ಹೇಳಿ, ಮಗಳಿಗೆ ಮದುವೆ ಮಾಡಬೇಕಾಗಿದೆ ಎಂದು ಅವನಿಗೆ ಹೇಳಿದ್ದೆ.

ಕನ್ನಡವಾಹಿನಿಯ ಅಭಿಷೇಕ್ ಎನ್ನುವ ಹುಡುಗ ಪೃಥ್ವಿ ಹಿಂದೆ ಬಿದ್ದು ಇಷ್ಟ ಪಡುತ್ತಿದ್ದಾನೆ. ಪರಿಸ್ಥಿತಿ ಕೈಮಿರಿದೆ, ಮದುವೆ ಹಂತಕ್ಕೆ ಬಂದಿದೆ ಎನ್ನುವುದೂ ಯಾವುದು ಹೇಳಿಲ್ಲ. ನರಹರಿ ದೀಕ್ಷಿತ್ ಹೋದ ಮೇಲೆ ಪೃಥ್ವಿ ಬಳಿ ವಿಚಾರಿಸಿದೆ. ಆಗ ನನ್ನನ್ನು ಅವನು ಇಷ್ಟ ಪಡುತ್ತಿದ್ದಾನೆ. ನೀವು ಒಪ್ಪಿದ್ರೆ ಓಕೆ, ಇಲ್ಲ, ಇಷ್ಟ ಇಲ್ಲ ಅಂದ್ರೆ ನನಗೆ ಬೇಡ. ದೇವರ ಮುಂದೆ ಪ್ರಮಾಣ ಮಾಡಿ, ನನ್ನ ತಲೆ ಮುಟ್ಟಿ ನೀವು ಹೇಳಿದ ಹುಡುಗನನ್ನೇ ಮದುವೆ ಆಗೋದಾಗಿ ಮಗಳು ಹೇಳಿದ್ದಳು ಎಂದು ಆಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:RCB vs RR ಹೈವೋಲ್ಟೇಜ್ ಮ್ಯಾಚ್​.. ಪಂದ್ಯದಿಂದಲೇ ರಾಯಲ್ಸ್​ ಕ್ಯಾಪ್ಟನ್​ ಔಟ್, ಆಗಿದ್ದೇನು?​

publive-image

ನರಹರಿ ದೀಕ್ಷಿತ್ ಬಂದ ಹೋದ ಮೇಲೆ ಮಗಳು ವಶೀಕರಣಕ್ಕೆ ಒಳಗಾದ ರೀತಿಯಲ್ಲಿ ಇದ್ದಳು. ಈ ಬಗ್ಗೆ ನಾನು ಯೋಚನೆ ಮಾಡಬೇಕಿತ್ತು. ಆದರೆ ನನ್ನಕಡೆಯಿಂದ ತಪ್ಪಾಗಿದೆ. 27ನೇ ತಾರೀಖು ಸ್ಟೂಡಿಯೋದಲ್ಲಿ ಶೂಟಿಂಗ್ ಇದೆ ಹೇಳಿದ್ದರಿಂದ ನಾನೇ ಅಲ್ಲಿಗೆ ಬಿಟ್ಟು ಬಂದಿದ್ದೆ. ಮಧ್ಯಾಹ್ನ 3 ಗಂಟೆಗೆ ನಂದಿನಿ ಲೇಔಟ್​ ಪೊಲೀಸ್ ಠಾಣೆಯಿಂದ ನನಗೆ ಫೋನ್ ಬಂತು. ಮದುವೆ ಆಗಿದ್ದಾರೆ ಎಂದು ಹೇಳಿದರು. ಆವಾಗ ನಾನು ಮನೆಗೆ ಬರುವುದು ಬೇಡವೇ ಬೇಡ ಎಂದು ಫೋನ್​​ನಲ್ಲೇ ಹೇಳಿದೆ.

ಇದಾದ ಮೇಲೆ ಒಂದೆರಡು ಬಾರಿ ಫೋನ್ ಮಾಡಿ ಸ್ವಾರಿ ಅಪ್ಪ, ಅಮ್ಮ.. ಸ್ವಾರಿ ಅಪ್ಪ, ಅಮ್ಮ ಫೋನ್ ಮಾಡಿದ್ದಳು. ಇದಾದ ಮರುದಿನ ಅಕ್ಕನ ಮಗ ಫೋನ್ ಮಾಡಿದಾಗ ಪೃಥ್ವಿ ಭಟ್ ಹೇಳಿದ್ದಾಳಂತೆ. ನನ್ನನ್ನು ಧಾರೆ ಎರದಿದ್ದು ನರಹರಿ ದೀಕ್ಷಿತ್​ ಎಂದು ಹೇಳಿದ್ದಾರೆ. ಇದು ಗೊತ್ತಾಗಿ ನನಗೆ ಭಯಂಕರ ಆಘಾತವಾಯಿತು. ಹವ್ಯಕ ಸಮಾಜದಲ್ಲೇ ಇದ್ದು ನರಹರಿ ದೀಕ್ಷಿತ್ ಈ ರೀತಿ ಮಾಡಿದ್ದಾನೆ. ಯಾವುದೋ ಲಾಭಕ್ಕೆ ಹೀಗೆ ಮಾಡಿದ್ದಾನೆ. ನಮ್ಮ ಜೀವಮಾನದಲ್ಲಿ ಒಂದೇ ಒಂದು ಧಾರೆ ಎರೆದು ಕೊಡುವಂತದ್ದನ್ನ ಅವನು ಕಿತ್ತು ಕೊಂಡ ಎಂದು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment