/newsfirstlive-kannada/media/post_attachments/wp-content/uploads/2025/01/Bangalore-School-3.jpg)
ಬೆಂಗಳೂರು: ವಿದ್ಯಾರ್ಥಿಗಳು ಶಿಕ್ಷಣಕ್ಕಷ್ಟೇ ಸೀಮಿತವಾಗದೇ ಅನ್ಯ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಅವರವರ ಆಸಕ್ತಿಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಶ್ರದ್ಧೆಯಿಂದ ತಪಸ್ಸು ಮಾಡಿದರೆ ಅವರಿಗೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹೇಳಿದ್ದಾರೆ. ಮಕ್ಕಳ ಅಭಿರುಚಿ ತಕ್ಕಂತೆ ವಿದ್ಯಾರ್ಥಿಗಳ ಪಾಲಕರೂ ಕೂಡ ಅವರಿಗೆ ಮಾರ್ಗದರ್ಶನ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂದು ಕಿವಿಮಾತು ಹೇಳಿದರು.
ಬೆಂಗಳೂರಿನ ಮಾಕಳಿಯಲ್ಲಿರುವ ಸೃಷ್ಠಿ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗಾಯಕರಾದ ರಾಜೇಶ್ ಕೃಷ್ಣನ್ ಭಾಗವಹಿಸಿ ಮಾತನಾಡಿದರು. ಈ ಭಾಗದಲ್ಲಿ ಇಂತಹದ್ದೊಂದು ಶಿಕ್ಷಣ ಸಂಸ್ಥೆ ಕಟ್ಟಿ ಇಲ್ಲಿ ಎಲ್ಲಾ ಮಕ್ಕಳಿಗೂ ಶೈಕ್ಷಣಿಕ ಸೇವೆ ಮಾಡುತ್ತಿರುವ ಈ ಸಂಸ್ಥೆಯ ಮುಖ್ಯಸ್ಥರುಗಳಿಗೆ ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಮಕ್ಕಳೇ ಇಲ್ಲಿ ನಿಮ್ಮ ಶ್ರಮ ಮತ್ತು ಶೈಕ್ಷಣಿಕ ತಪಸ್ಸು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಏಕಾಗ್ರತೆಯಿಂದ ಶಿಕ್ಷಣ ಪಡೆದು ಅತ್ಯಂತ ಎತ್ತರದ ಸ್ಥಾನಗಳಿಗೆ ತಾವೆಲ್ಲ ಆಯ್ಕೆಯಾಗಬೇಕು ಪ್ರತಿಯೊಬ್ಬರು ಗೋಲ್ಡ್ ಮೆಡಲಿಸ್ಟ್ ಗಳಾಗಲಿ ಎಂದು ಪ್ರೀತಿಯಿಂದ ಶುಭ ಹಾರೈಸುತ್ತೇನೆ ಎಂದರು.
ಸೃಷ್ಠಿ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಲವಾರು ಮಕ್ಕಳು ವಿವಿಧ ರೀತಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭಕ್ಕೆ ಮೆರಗು ತಂದರು.
ಸಮಾರಂಭದ ಉದ್ಘಾಟನೆಯ ದಿನ ಖ್ಯಾತ ಚಿತ್ರನಟ ದಿಗಂತ ಭಾಗವಹಿಸಿ ಮಕ್ಕಳಿಗೆ ಪ್ರೋತ್ಯಾಹದಾಯಕ ಮಾತುಗಳನ್ನಾಡಿದರು. ಸಮಾರಂಭದಲ್ಲಿ ಸೃಷ್ಠಿ ಗ್ರೂಪ್ ಆಫ್ ಇನ್ಸಿಟ್ಯೂಟ್‌ನ ಕಾರ್ಯದರ್ಶಿಯಾದ ಲೋಕೇಶ್ ಎನ್. ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ವನಿತಾ ಲೋಕೇಶ್ ಎಸ್.ಕೆ ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿ ಸಮಾರಂಭಕ್ಕೆ ಮೆರಗು ನೀಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ