ವೇದಿಕೆ ಮೇಲೆ ಸುನೀಲ್​ಗೆ ಭರ್ಜರಿ ಸರ್​ಪ್ರೈಸ್.. ಅಮೃತಾ ಗಿಫ್ಟ್​ಗೆ ಎಲ್ಲರೂ ಶಾಕ್​!

author-image
Veena Gangani
Updated On
ವೇದಿಕೆ ಮೇಲೆ ಸುನೀಲ್​ಗೆ ಭರ್ಜರಿ ಸರ್​ಪ್ರೈಸ್.. ಅಮೃತಾ ಗಿಫ್ಟ್​ಗೆ ಎಲ್ಲರೂ ಶಾಕ್​!
Advertisment
  • ವಾರದಿಂದ ವಾರಕ್ಕೆ ವಿಭಿನ್ನ ಕಾನ್ಸೆಪ್ಟ್‌ ಹೊತ್ತು ತರ್ತಿದೆ ಭರ್ಜರಿ ಬ್ಯಾಚುಲರ್ಸ್
  • ಲವ್​ ಕೆಮಿಸ್ಟ್ರಿ ರೌಂಡ್ ಬೆನ್ನಲ್ಲೇ ಹೊಸ ಟಾಸ್ಕ್​ನೊಂದಿಗೆ ಬಂದ ಏಂಜಲ್ಸ್​
  • ಅಮೃತಾ ರಾಜ್ ಕೊಟ್ಟ​ ಕ್ಯೂಟ್​ ಸರ್​ಪ್ರೈಸ್​ಗೆ ಸುನೀಲ್​ ಕ್ಲೀನ್ ಬೌಲ್ಡ್

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೇ ಶೋನಲ್ಲಿ 10 ಮಂದಿ ಬ್ಯಾಚುಲರ್ಸ್​ಗಳಿಗೆ 10 ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ವಾರದಿಂದ ವಾರಕ್ಕೆ ಬ್ಯಾಚುಲರ್ಸ್​ಗಳು ಚೇಂಚ್​ ಆಗ್ತಿದ್ದಾರೆ.

ಇದನ್ನೂ ಓದಿ:ರಿಕ್ಕಿ ರೈ ಪ್ರಕರಣಕ್ಕೆ ಹೊಸ ತಿರುವು.. ಘಟನೆ ಬಳಿಕ ಏನೆಲ್ಲ ಆಯ್ತು..? ಟಾಪ್ 20 ಅಪ್​ಡೇಟ್ಸ್​..!

publive-image

ಕಳೆದ ವಾರ ಬ್ಯಾಚುಲರ್ಸ್​ಗಳಿಗೆ ಲವ್​ ಕೆಮಿಸ್ಟ್ರಿ ರೌಂಡ್ ಇತ್ತು. ಆದ್ರೆ, ಈ ವಾರ ಏಂಜಲ್ಸ್​ಗಳಿಗೆ ಹೊಸ ಚಾಲೆಂಜ್​ ಎದುರಾಗಿದೆ. ಏಂಜಲ್‌ಗಳು ಕೊಟ್ಟ ಭಾವನಾತ್ಮಕ ಸರ್​ಪ್ರೈಸ್​ಗೆ ಬ್ಯಾಚುಲರ್ಸ್ ಭರ್ಜರಿಯಾಗಿ ಮನಸೋತ್ತಿದ್ದಾರೆ. ಹೌದು, ರಿಲೀಸ್​ ಆಗಿರೋ ಪ್ರೋಮೋದಲ್ಲಿ ಗಾಯಕ ಸುನೀಲ್​ಗೆ ಅಮೃತಾ ರಾಜ್​ ಕ್ಯೂಟ್​ ಆಗಿರೋ ಸರ್​ಪ್ರೈಸ್​ ಕೊಟ್ಟಿದ್ದಾರೆ.

publive-image

ಹೌದು, ಭರ್ಜರಿ ಬ್ಯಾಚುಲರ್ಸ್​ನಲ್ಲಿ ಅಮೃತಾ ರಾಜ್​ ಹಾಗೂ ಸುನೀಲ್​ ಕ್ಯೂಟ್ ಜೋಡಿಗಳು. ವೇದಿಕೆ ಮೇಲೆ ಡ್ಯಾನ್ಸ್, ಹಾಡು, ಡ್ರಾಮಾ, ಡೈಲಾಗ್​ ಹೀಗೆ ಸಾಲು ಸಾಲಾಗಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುತ್ತಲೇ ಇರುತ್ತಾರೆ. ಆದ್ರೆ, ಈ ವಾರ ​ ಏಂಜಲ್ಸ್​ಗಳು ತಮ್ಮ ತಮ್ಮ ಜೋಡಿಗೆ ಸರ್​ಪ್ರೈಸ್​ ನೀಡಬೇಕಾಗಿತ್ತು.


ಹೀಗಾಗಿ ಎಲ್ಲ ಏಂಜಲ್ಸ್ ತಮ್ಮ ಜೋಡಿಗೆ ಒಂದೊಂದಾಗಿ ಸರ್​ಪ್ರೈಸ್ ನೀಡಿದ್ದಾರೆ. ಅದರಲ್ಲೂ ಸುನೀಲ್​ಗಾಗಿ ಹಾಡು ಕಲಿತು ವೇದಿಕೆಯಲ್ಲಿ ಹಾಡಿ ಮನಗೆದಿದ್ದಾರೆ. ಜೊತೆಗೆ ಸುನೀಲ್​ಗಾಗಿ ವೇದಿಕೆ ಮೇಲೆ ಕೇಕ್​ ತರಿಸಿ ಕಟ್​ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರಿಂದ ವಿಡಿಯೋ ಕ್ಲಿಪ್​ ಬಿಡುಗಡೆ ಮಾಡಿದ್ದಾರೆ. ಇದನ್ನು ನೋಡಿ ಸುನೀಲ್ ಸಖತ್​ ಖುಷ್​ ಆಗಿದ್ದಾರೆ. ಇದೇ ಖುಷಿಯಲ್ಲಿ ಅಮೃತಾ ಅವರನ್ನು ಬಿಗಿಯಾಗಿ ತಬ್ಬಿಕೊಂಡು ಧನ್ಯವಾದ ತಿಳಿಸಿದ್ದಾರೆ ಸುನೀಲ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment