/newsfirstlive-kannada/media/post_attachments/wp-content/uploads/2025/04/sunil7.jpg)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೇ ಶೋನಲ್ಲಿ 10 ಮಂದಿ ಬ್ಯಾಚುಲರ್ಸ್​ಗಳಿಗೆ 10 ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ವಾರದಿಂದ ವಾರಕ್ಕೆ ಬ್ಯಾಚುಲರ್ಸ್​ಗಳು ಚೇಂಚ್​ ಆಗ್ತಿದ್ದಾರೆ.
ಇದನ್ನೂ ಓದಿ:ಕೊರಳಲ್ಲಿ ಹಾರ, ಕೈಯಲ್ಲಿ ಕೇಕ್ ಹಿಡಿದ ರಜತ್​ ಪತ್ನಿ ಅಕ್ಷಿತಾ.. ಈ ಖುಷಿಗೆ ಕಾರಣವೇನು?
/newsfirstlive-kannada/media/post_attachments/wp-content/uploads/2025/04/sunil8.jpg)
ಈ ವಾರ ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಹೀಗಾಗಿ ಬ್ಯಾಚುಲರ್ಸ್ ಪೋಷಕರು ಒಬ್ಬೊಬ್ಬರಾಗಿ ವೇದಿಕೆಗೆ ಬಂದಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಪ್ರತಿಭೆ, ಶ್ರೀ ಪುಟ್ಟರಾಜ ಗವಾಯಿಗಳವರ ಸಂಗೀತ ಪರಂಪರೆಯ ಶ್ರದ್ಧಾವಂತ ವಿದ್ಯಾರ್ಥಿ ಸುನಿಲ್ ಕುಟುಂಬಸ್ಥರು ಬಂದಿದ್ದರು.
/newsfirstlive-kannada/media/post_attachments/wp-content/uploads/2025/04/sunil9.jpg)
ಇದೇ ವೇಳೆ ಸುನೀಲ್​ಗಾಗಿ ಉತ್ತರ ಕರ್ನಾಟಕದ ಸ್ಪೆಷಲ್​ ಊಟ ತೆಗೆದುಕೊಂಡು ಬಂದಿದ್ದರು. ಚಿಕ್ಕ ವಯಸ್ಸಿನಲ್ಲಿ ಸುನೀಲ್​ ಎಷ್ಟು ತುಂಟಾ ಅಂತ ಹೇಳಿದ್ದಾರೆ. ಆಗ ಸುನೀಲ್​ ಅವರಿಗೆ ಅಪ್ಪ ಎಂದರೆ ತುಂಬಾ ಇಷ್ಟ. ನನ್ನ ಹತ್ರ ಇರೋದು ಒಂದೇ ಅಪ್ಪನ ಫೋಟೋ ಅಂತ ಭಾವುಕರಾಗಿ ಮಾತಾಡಿದ್ದಾರೆ. ಆಗ ಸರ್​ಪ್ರೈಸ್​ ಎಂಬಂತೆ ಅಪ್ಪನ ಜೊತೆಗೆ ತಾನು ಇರುವ ಫೋಟೋವನ್ನು ಗಿಫ್ಟ್​ ಆಗಿ ನೀಡಲಾಗಿದೆ. ಈ ಫೋಟೋ ನೋಡುತ್ತಿದ್ದಂತೆ ಸುನೀಲ್​ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದಾದ ಬಳಿಕ ಅಪ್ಪನಿಗಾಗಿ ನಾಲ್ಕು ಸಾಲುಗಳನ್ನು ವೇದಿಕೆ ಮೇಲೆ ಹಾಡಿದ್ದಾರೆ. ನಿನ್ನ ದಾರಿ ಕಾಯುತ್ತಿರುವೆ ನಾನು.. ಬರುವೆ ನೀ ಬೇಗ ನನ್ನ ಬಳಿಗೆ.. ನಿನ್ನ ನೋಡದೇ ನಾನು ಹೇಗೆ ಇರುವೆ ಇಲ್ಲಿ.. ಬರುವೆ ನೀ ಬೇಗನೇ.. ನನ್ನ ಬಳಿಗೆ.. ನನ್ನ ಬಳಿಗೆ.. ಎಲ್ಲಿರೂವೆ ಅಪ್ಪ .. ಅಪ್ಪ.. ಅಪ್ಪ ನೀ ಎಲ್ಲಿರೂವೇ... ಹೇಗಿರುವೇ.. ನನ್ನ ಜೀವ ನೀನೇ ಅಪ್ಪ.. ಅಪ್ಪ.. ಅಪ್ಪ ಎಂದು ಹಾಡನ್ನು ಹಾಡಿದ್ದಾರೆ. ಇದೇ ಹಾಡನ್ನು ಕೇಳುತ್ತಿದ್ದಾಗ ಎಲ್ಲರೂ ಅತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us