ಜಾನಪದ ಗಾಯಕ ಮಾರುತಿ ಲಟ್ಟೆ ಅಪಘಾತ ಕೇಸ್​​ಗೆ ಬಿಗ್​ ಟ್ವಿಸ್ಟ್; 5 ಸಾವಿರ ರೂಗಾಗಿ ಜೀವವನ್ನೇ ತೆಗೆದರು..

author-image
Ganesh
Updated On
ಜಾನಪದ ಗಾಯಕ ಮಾರುತಿ ಲಟ್ಟೆ ಅಪಘಾತ ಕೇಸ್​​ಗೆ ಬಿಗ್​ ಟ್ವಿಸ್ಟ್; 5 ಸಾವಿರ ರೂಗಾಗಿ ಜೀವವನ್ನೇ ತೆಗೆದರು..
Advertisment
  • ಜುಲೈ 10 ರಂದು ಭೀಕರ ಅಪಘಾತ ಸಂಭವಿಸಿದೆ ಎಂಬ ಸುದ್ದಿ ಇತ್ತು
  • ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಘಾತಕಾರಿ ಸುದ್ದಿ
  • ಇಬ್ಬರನ್ನು ಬಂಧಿಸಿರುವ ಪೊಲೀಸರು, ಉಳಿದವರಿಗಾಗಿ ಶೋಧಕಾರ್ಯ

ಚಿಕ್ಕೋಡಿ: ಉತ್ತರ ಕರ್ನಾಟಕ ಜಾನಪದ ಗಾಯಕ ಮಾರುತಿ ಅಡಿವೆಪ್ಪ ಲಟ್ಟೆ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೇವಲ ಐದು ಸಾವಿರ ರೂಪಾಯಿಗಾಗಿ ಜೀವವನ್ನೇ ತೆಗೆದಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಬಂಧನ ಆಗಿದೆ.

ಏನಿದು ಪ್ರಕರಣ..?

‘ಬಾ ಹುಡುಗಿ ಪಂಚಮಿಗೆ’ ಹಿಟ್ ಸಾಂಗ್ ಮೂಲಕ ಜನಪ್ರಿಯಗೊಂಡಿದ್ದ ಗಾಯಕ ಮಾರುತಿ ಲಟ್ಟೆ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಾರೆ ಎಂದು ಜುಲೈ 11 ರಂದು ಸುದ್ದಿಯಾಗಿತ್ತು. ಭೂದಿಹಾಳ ಗ್ರಾಮದ ಬಳಿ ಜುಲೈ 10 ರಂದು ಗುರುವಾರ ರಾತ್ರಿ ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾಗಿದೆ. ಇದರಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಇದು ಅಪಘಾತದಿಂದ ಆಗಿರುವ ದುರಂತ ಅಲ್ಲ ಎಂದು ಅವರ ಕುಟುಂಬಸ್ಥರು ಹೇಳಿದ್ದರು. ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಕೇವಲ ಐದು ಸಾವಿರ ರೂಪಾಯಿಗಾಗಿ, 10 ಪರಿಚಯಸ್ಥರು ಅಟ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕ್ರಿಕೆಟ್ ಕಾಶಿಯಲ್ಲಿ ಕನ್ನಡಿಗನ ಕ್ಲಾಸ್ ಆಟ.. ಭಾರತದಲ್ಲಿ ಬರೀ 1, ವಿದೇಶದಲ್ಲಿ 9 ಏನದು..?

publive-image

ಆರೋಪಿ ಈರಪ್ಪ ಎಂಬಾತನ ಬಳಿ ಮಾರುತಿ ಐವತ್ತು ಸಾವಿರ ರೂಪಾಯಿ ಸಾಲ ಪಡೆದಿದ್ದ. ಕಬ್ಬಿನ ಗ್ಯಾಂಗ್‌ನಲ್ಲಿ ಕೆಲಸ ಮಾಡಲು ಬರುವುದಾಗಿ ಹೇಳಿ ಹಣ ಪಡೆದಿದ್ದ. ಇತ್ತೀಚೆಗೆ ಮಾರುತಿಗೆ ಹಾಡಿನಲ್ಲಿ ಡಿಮ್ಯಾಂಡ್ ಬಂದಿತ್ತು. ಹೀಗಾಗಿ ಕೆಲಸ ಬಿಟ್ಟು ಹಾಡು ಬರೆಯುವುದು, ಹಾಡುವುದರಲ್ಲಿ ಬಿಜಿಯಾಗಿದ್ದ. ಕೆಲಸಕ್ಕೂ ಹೋಗದೇ ಹಣ ವಾಪಸ್ ನೀಡದ ಹಿನ್ನೆಲೆ ಕೃತ್ಯ ನಡೆದಿದೆ ಎನ್ನಲಾಗಿದೆ.

ಅಂತೆಯೇ ಜುಲೈ 10 ರಂದು ಮಾರುತಿ ಸ್ನೇಹಿತ ಬಳಿ ಬೈಕ್​ನಲ್ಲಿ ಬರುತ್ತಿದ್ದಾಗ ಅಡ್ಡಗಟ್ಟಿ ಅಟ್ಯಾಕ್ ಮಾಡಿದ್ದಾರೆ. ಕಾರು ಹತ್ತಿಸಿ ಜೀವ ತೆಗೆದಿದ್ದಾರೆ. ನಂತರ ಪರಾರಿಯಾಗಿದ್ದಾರೆ. ಈ ವೇಳೆ ಆರೋಪಿಗಳಿದ್ದ ಕಾರು ಪಲ್ಟಿಯಾಗಿದೆ. ಪರಿಣಾಮ ಪ್ರಮುಖ ಆರೋಪಿ ಈರಪ್ಪನಿಗೆ ಗಾಯವಾಗಿತ್ತು. ಆತ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಸಿದ್ದರಾಮ ಒಡೆಯರ್ ಮತ್ತು ಆಕಾಶ್ ಪೂಜಾರಿಯನ್ನು ರಾಯಬಾಗ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ‘ನನ್ನ ಲೈಫ್​ನಲ್ಲಿ ಅದನ್ನ ತಿನ್ನೋ ಆಸೆ ಇತ್ತು’ ನ್ಯೂಸ್​ಫಸ್ಟ್​ನಲ್ಲಿ ನಟಿ ಲಕ್ಷ್ಮಿ ಒಲವು-ಗೆಲುವಿನ ಮಾತು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment