IND vs AUS ಸಿರಾಜ್ ಸುತ್ತ ಮತ್ತೊಂದು ವಿವಾದ.. ಥರ್ಡ್​ ಅಂಪೈರ್​ ವಿರುದ್ಧ ರೊಚ್ಚಿಗೆದ್ದ ಪ್ಯಾಟ್ ಕಮ್ಮಿನ್ಸ್​..!

author-image
Ganesh
Updated On
IND vs AUS ಸಿರಾಜ್ ಸುತ್ತ ಮತ್ತೊಂದು ವಿವಾದ.. ಥರ್ಡ್​ ಅಂಪೈರ್​ ವಿರುದ್ಧ ರೊಚ್ಚಿಗೆದ್ದ ಪ್ಯಾಟ್ ಕಮ್ಮಿನ್ಸ್​..!
Advertisment
  • ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಬರೀ ವಿವಾದ
  • ನಾಲ್ಕನೇ ದಿನವೂ ನಡೆಯಿತು ಮತ್ತೊಂದು ಗಲಾಟೆ
  • 3ನೇ ಅಂಪೈರ್ ನಿರ್ಧಾರ ಪ್ರಶ್ನಿಸಿದ ಆಸಿಸ್ ನಾಯಕ

ಭಾರತ ವಿರುದ್ಧ ಆಸ್ಟ್ರೇಲಿಯಾ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ನಾಲ್ಕನೇ ದಿನ ಆರಂಭವಾಗುತ್ತಿದ್ದಂತೆಯೇ ವಿವಾದಾತ್ಮಕ ಘಟನೆ ನಡೆದಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿತ್ತು. ನಾಲ್ಕನೇ ದಿನದ ಆರಂಭದಲ್ಲಿ, ನಾಟೌಟ್ ಆಗಿ ಉಳಿದಿದ್ದ ಸಿರಾಜ್ ಹಾಗೂ ನಿತೀಶ್ ರೆಡ್ಡಿ ಮೈದಾನಕ್ಕೆ ಬಂದಿದ್ದರು.

119ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಬೌಲಿಂಗ್ ಮಾಡಲು ಬಂದರು. ಓವರ್‌ನ ಕೊನೆ ಎಸೆತ ಸಿರಾಜ್ ಅವರ ಬ್ಯಾಟ್‌ನ ಅಂಚಿಗೆ ಬಡಿದಿತ್ತು. ಅದನ್ನು ಎರಡನೇ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಮಿತ್ ಕ್ಯಾಚ್ ಪಡೆದರು. ಮೈದಾನದ ಅಂಪೈರ್ ಕ್ಯಾಚ್‌ನಿಂದ ತೃಪ್ತರಾಗಲಿಲ್ಲ. ಹೀಗಾಗಿ ಅವರು ಮೂರನೇ ಅಂಪೈರ್ ಪರಿಶೀಲಿಸುವಂತೆ ಸೂಚಿಸಿದರು.

ಇದನ್ನೂ ಓದಿ:ವಿಮಾನ ದುರಂತದಲ್ಲಿ ಉಸಿರು ನಿಲ್ಲಿಸಿದ 179 ಪ್ರಯಾಣಿಕರು.. ಬದುಕಿದ್ದು ಇಬ್ಬರು ಮಾತ್ರ..

publive-image

ವಿಡಿಯೋ ರೀಪ್ಲೇನಲ್ಲಿ ಚೆಂಡು ಬಡಿದಿದೆಯೇ ಅಥವಾ ಇಲ್ಲವೇ ಎಂದು ಹೇಳೋದು ಕಷ್ಟಕರವಾಗಿತ್ತು. ಕೊನೆಯಲ್ಲಿ ಮೂರನೇ ಅಂಪೈರ್, ಬಹಳ ಹತ್ತಿರದಿಂದ ನೋಡಿದ ನಂತರ ಸಿರಾಜ್ ನಾಟೌಟ್ ಎಂದು ಘೋಷಿಸಿದರು. ಥರ್ಡ್ ಅಂಪೈರ್ ನಿರ್ಧಾರಕ್ಕೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅತೃಪ್ತಿ ವ್ಯಕ್ತಪಡಿಸಿದರು.

ಮೂರನೇ ಅಂಪೈರ್‌ ನೀಡಿದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಸೂಚಿಸಿದರು. ಮೈದಾನದಲ್ಲಿದ್ದ ಅಂಪೈರ್‌ಗಳು ಅವರ ಮನವಿಯನ್ನು ತಿರಸ್ಕರಿಸಿದರು. ರವಿಶಾಸ್ತ್ರಿ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಕೂಡ ಮೂರನೇ ಅಂಪೈರ್‌ನ ನಿರ್ಧಾರದಿಂದ ಅತೃಪ್ತಿ ತೋರಿಸಿದರು. ಅಂಪೈರ್ ಬೇಗನೆ ನಿರ್ಧಾರ ತೆಗೆದುಕೊಂಡರು ಎಂದು ಕಾಮೆಂಟರಿ ವೇಳೆ ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ:IND vs AUS: ಸೇಡು ತೀರಿಸಿಕೊಂಡ ಬುಮ್ರಾ.. ಇವರ ಕೆಣಕಿ ಉಳಿದವರಿಲ್ಲ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment