/newsfirstlive-kannada/media/post_attachments/wp-content/uploads/2025/05/Bangalore-mack-drill.jpg)
ಭಾರತ-ಪಾಕ್ ಪ್ರತೀಕಾರದ ಸಂಘರ್ಷದ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಮಾಕ್ ಡ್ರಿಲ್ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಇಂದು ಸಂಜೆ 3.58ಕ್ಕೆ ಸರಿಯಾಗಿ ಏಕಕಾಲದಲ್ಲಿ ಸೈರನ್ ಶಬ್ಧ ಮೊಳಗಲಿದೆ.
ಬೆಂಗಳೂರು ನಗರದ 35 ಕಡೆಗಳಲ್ಲೂ ಸೈರನ್ ಮೊಳಗಲಿದ್ದು, ಜನರು ಆತಂಕ ಪಡುವ ಅಗತ್ಯ ಇಲ್ಲ. ಸೈರನ್ ಶಬ್ಧ ಕೇಳಿ ಜನರು ಆತಂಕ ಪಡಬೇಡಿ. ಇದು ಅಣಕು ಪ್ರದರ್ಶನದ ಭಾಗವಾಗಿ ನಡೆಯುವ ಸೈರನ್ ಎಂದು ನ್ಯೂಸ್ ಫಸ್ಟ್‌ಗೆ ಸಿವಿಲ್ ಡಿಫೆನ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಕ್ ಡ್ರಿಲ್ ನಾಗರಿಕರ ರಕ್ಷಣಾ ಅಣಕು ಪ್ರದರ್ಶನ ಇದಾಗಿದ್ದು, ಮೊದಲಿಗೆ ಬೋಟಿಂಗ್‌ನಲ್ಲಿ ರಕ್ಷಣಾಕಾರ್ಯ ನಡೆಸಲಾಗುತ್ತದೆ. ಮೊದಲಿಗೆ ಹಲಸೂರು ಕೆರೆಯಲ್ಲಿ ಬೋಟಿಂಗ್ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ನಡೆಸಲಾಗುತ್ತದೆ. ನಂತರ ಸೈರನ್ ಪ್ರೋಟೋಕಾಲ್ ಬಗ್ಗೆ ಮಾಹಿತಿ ನೀಡಲಾಗುತ್ತದೆ.
/newsfirstlive-kannada/media/post_attachments/wp-content/uploads/2025/05/Bagalore-mock-drill.jpg)
ಫೈರಿಂಗ್ ಗೆಸ್ಟ್ ಹೌಸ್, ಬೆಂಕಿ/ವಾಯು ದಾಳಿ ಟೈಂನಲ್ಲಿ ರಕ್ಷಣಾ ಕಾರ್ಯ ಮಾಡೋದು ಹೇಗೆ? ಈ ಬಗ್ಗೆ ಕೂಡ ಅಣಕು ಪ್ರದರ್ಶನ ನೀಡಲಾಗುತ್ತಿದೆ. ಬಿಲ್ಡಿಂಗ್‌ನಲ್ಲಿ ಸಿಲುಕಿಕೊಂಡವರು, ಗಾಯಾಳುಗಳ ರಕ್ಷಣಾಕಾರ್ಯ ಮತ್ತು ಆ ನಂತರ ಆಸ್ಪತ್ರೆಯ ಸಾಗಿಸೋದು ಹೇಗೆ ಅನ್ನೋದರ ಅಣಕು ಪ್ರದರ್ಶನ ಮಾಡಲಾಗುತ್ತಿದೆ.
ಇದನ್ನೂ ಓದಿ: ಉಗ್ರ ಮಸೂದ್ ಅಜರ್ ಈಗ ಏಕಾಂಗಿ.. ಕುಟುಂಬದ 14 ಸದಸ್ಯರು ಸರ್ವನಾಶ..!
ಬೆಂಗಳೂರು ನಗರದ ಎಲ್ಲೆಲ್ಲಿ ಸೈರನ್?
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್
ಸಿಕ್ಯೂಎಎಲ್, ಇಎಸ್‌ಐ ಆಸ್ಪತ್ರೆ ರಾಜಾಜಿನಗರ ಎನ್‌ಎಎಲ್
ಬೆಂಗಳೂರು ಡೈರಿ, ಕೆನರಾ ಬ್ಯಾಂಕ್, SRS ಪೀಣ್ಯ
ವಿವಿ ಟವರ್ ಅಗ್ನಿಶಾಮಕ ಠಾಣೆ
ಜ್ಞಾನಭಾರತಿ ಅಗ್ನಿಶಾಮಕ ಠಾಣೆ
ಥಣಿಸಂದ್ರ ಅಗ್ನಿಶಾಮಕ ಠಾಣೆ
ಬಾಣಸವಾಡಿ ಅಗ್ನಿಶಾಮಕ ಠಾಣೆ
ಯಶವಂತಪುರ ಅಗ್ನಿಶಾಮಕ ಠಾಣೆ
ಬನಶಂಕರಿ ಅಗ್ನಿಶಾಮಕ ಠಾಣೆ
ರಾಜಾಜಿನಗರ ಅಗ್ನಿಶಾಮಕ ಠಾಣೆ
ಚಾಮರಾಜಪೇಟೆ ಅಗ್ನಿಶಾಮಕ ಠಾಣೆ
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ
ಹಲಸೂರು ಗೇಟ್ ಪೊಲೀಸ್ ಠಾಣೆ
ಹಲಸೂರು ಪೊಲೀಸ್ ಠಾಣೆ
ಉಪ್ಪಾರಪೇಟೆ ಪೊಲೀಸ್ ಠಾಣೆ
ರಾಜರಾಜೇಶ್ವರಿನಗರ ಪೊಲೀಸ್ ಠಾಣೆ
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣೆ
ವೈಯಾಲಿಕಾವಲ್ ಪೊಲೀಸ್ ಠಾಣೆ
ಹಲಸೂರು ಗೃಹರಕ್ಷಕ ದಳ ಕೇಂದ್ರ ಕಚೇರಿ
ಪೀಣ್ಯ ಅಗ್ನಿಶಾಮಕ ಠಾಣೆ
ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ ಕಚೇರಿ
ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ
ಐಟಿಪಿಎಲ್ ಅಗ್ನಿಶಾಮಕ ಠಾಣೆ
ಸರ್ಜಾಪುರ ಅಗ್ನಿಶಾಮಕ ಠಾಣೆ
ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ
ಡೇರಿ ಸರ್ಕಲ್ ಅಗ್ನಿಶಾಮಕ ಠಾಣೆಯಲ್ಲಿ ಮೇಲ್ಭಾಗದಲ್ಲಿ ಸೈರನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us