/newsfirstlive-kannada/media/post_attachments/wp-content/uploads/2024/07/siri.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಮಾಜಿ ಸ್ಪರ್ಧಿ ಸಿರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ರಂಗೋಲಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರೋ ನಟಿ ಸಿರಿ ಅವರು ಜೂನ್​ 14ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
/newsfirstlive-kannada/media/post_attachments/wp-content/uploads/2024/05/siri.jpg)
30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಅವರಿಗೆ ಅಭಿಮಾನಿ ಬಳಗ ದೊಡ್ಡದು. ಅದರಲ್ಲೂ ಬಿಗ್​ಬಾಸ್​ ಮುಕ್ತಾಯದ ಬಳಿಕ ನಟಿ ಸಿರಿ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಇದೀಗ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/siri1.jpg)
ಪೋಸ್ಟ್​ ಮಾಡಿರೋ ವಿಡಿಯೋದಲ್ಲಿ ನಟಿ ಸಿರಿ ಅವರು 39ನೇ ವಯಸ್ಸಿನಲ್ಲೂ ಸಖತ್​ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, 39ನೇ ವಯಸ್ಸಿನಲ್ಲಿ ಬೋರೇಗೌಡ ಎಂಬುವವರ ಜೊತೆ ನಟಿ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೂನ್​ 13ರಂದು ಚಿಕ್ಕಬಳ್ಳಾಪುರದ ನಂದಿ ಗ್ರಾಮದ ದೇವಸ್ಥಾನವೊಂದರ ಕುಟುಂಬಸ್ಥರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಮದುವೆಯಾಗಿದ್ದಾರೆ.
View this post on Instagram
ನಟಿ ಸಿರಿ ಅವರ ಮದುವೆಗೆ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಸಂಬಂಧಿಕರು ಭಾಗವಹಿಸಿದ್ದರು. ನಟಿ ಸಿರಿ ಅವರ ಬ್ಯೂಟಿಗೆ ಫ್ಯಾನ್ಸ್​ ಮಾರು ಹೋಗಿದ್ದಾರೆ. ಇದೇ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಬ್ಯೂಟಿ ಕ್ವೀನ್​ ಮೇಡಂ ನೀವು, ಇಂತಹ ವಯಸ್ಸಿನಲ್ಲೂ ಈ ಪಾರ್ಟಿ ಬ್ಯೂಟಿ ಹೇಗೆ ಮೇಡಂ, ಎಷ್ಟು ಕ್ಯೂಟ್​ ಆಗಿ ಕಾಣುತ್ತಿದ್ದೀರಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us