/newsfirstlive-kannada/media/post_attachments/wp-content/uploads/2025/06/Siri-Sinchana-Gaali.jpg)
ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಕಥೆಯುಳ್ಳ ಸೀರಿಯಲ್ ಎಂದರೆ ನಿನಗಾಗಿ. ಬಿಗ್ಬಾಸ್ ಬೆಡಗಿ ದಿವ್ಯಾ ಉರುಡುಗ ಹಾಗೂ ಗಿಣಿರಾಮ ಸೀರಿಯಲ್ ನಟ ರಿತ್ವಿಕ್ ಮಠದ್ ಅಭಿನಯದಲ್ಲಿ ಮೂಡಿಬರುತ್ತಿರೋ ಸೀರಿಯಲ್ ಇದು.
ಇದನ್ನೂ ಓದಿ:ಯಾರಿಗುಂಟು ಯಾರಿಗಿಲ್ಲ.. ಒಂದೇ ಸೀರಿಯಲ್ನಲ್ಲಿ ತಾಯಿ, ಮಗ, ಮಗಳು ಜಬರ್ದಸ್ತ್ ನಟನೆ
ಇದೇ ಸೀರಿಯಲ್ ಮೂಲಕ ಪುಟಾಣಿ ಸಿರಿ ಸಿಂಚನಾ ಕೃಷ್ಣಾ ಆಗಿ ಜೀವಾ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಪುಟಾಣಿ ಬಾಲನಟಿ ಸಿರಿ ಸಿಂಚನಾ ತನ್ನ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾಳೆ.
ಹೌದು, ಮುದ್ದಾದ ಮಗಳು ಸಿರಿ ಸಿಂಚನಾ ಹುಟ್ಟು ಹಬ್ಬವನ್ನು ಪೋಷಕರು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ. ಸಿರಿ ಸಿಂಚನಾ ಹುಟ್ಟು ಹಬ್ಬಕ್ಕೆ ಕಿರುತೆರೆ ನಟ ನಟಿಯರು ಆಗಮನಿಸಿದ್ದರು.
ಈ ವೇಳೆ ಬಾಲ ನಟಿ ಸಿರಿ ಸಿಂಚನಾ ಚಂದವಾದ ಕೇಕ್ ಕಟ್ ಮಾಡಿ ಖುಷಿಪಟ್ಟಿದ್ದಾಳೆ. ಇನ್ನೂ ಸಿರಿ ಸಿಂಚನ ಗಾಳಿ ಕೃಷ್ಣಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹೊಸ ಹೊಸ ಲುಕ್ನಲ್ಲಿ ಫೋಟೋಶೂಟ್ ಮಾಡಿಸಿ ಪೋಸ್ಟ್ ಮಾಡುತ್ತಾ ಇರುತ್ತಾಳೆ.
ಈ ಹಿಂದೆ ದೀಪಾವಳಿ ಹಬ್ಬದ ಪ್ರಯುಕ್ತ ಸಿರಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಳು. ಹಳದಿ ಹಾಗೂ ನೀಲಿ ಬಣ್ಣದ ಡ್ರೆಸ್ನಲ್ಲಿ ಮಿಂಚಿದ್ದಳು. ಆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ